ಅನಾರೋಗ್ಯದ ವದಂತಿಗಳಿಗೆ ಶೃತಿ ಹಾಸನ್ ತೆರೆ!

ಶೃತಿ ಹಾಸನ್ ಸಿನಿಮಾರಂಗ ಬಿಟ್ಟು ಹಲವು ವರ್ಷ ಕಾಣೆಯಾಗಿದ್ದರು. ಈಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಮತ್ತೆ ಬಂದ ಶೃತಿ ಹಾಸನ್‌ಗೆ ಅದೃಷ್ಟ ಕೈ ಹಿಡಿದಿದೆ. ಹಾಗಾಗಿ ಸಾಲು-ಸಾಲು ಸಿನಿಮಾ ಮಾಡಲು ಶೃತಿ ಹಾಸನ್ ಮುಂದಾಗಿದ್ದಾರೆ.

ರವಿತೇಜ ಜೊತೆಗೆ 'ಕ್ರ್ಯಾಕ್' ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ ಶೃತಿ ಹಾಸನ್ ಸಿನಿಮಾ ಮಾತ್ರವಲ್ಲದೇ ಸಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿ ಇರುತ್ತಾರೆ. ತಮ್ಮ ನಿತ್ಯದ ಆಗು ಹೋಗುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು, ಫೊಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಆದರೆ ಇತ್ತೀಚೆಗೆ ನಟಿ ಶೃತಿ ಹಾಸನ್ ತಮ್ಮ ಆರೋಗ್ಯದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಆ ಪೋಸ್ಟ್ ಬಗ್ಗೆ ಬೇರೆ ರೀತಿಯಲ್ಲಿ ಪ್ರಚಾರ ಆಗಿತ್ತು. ಹಾಗಾಗಿ ಈ ಬಗ್ಗೆ ವಿಡಿಯೋ ಮಾಡುವ ಮೂಲಕ ನಟಿ ಶೃತಿ ಹಾಸನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಶೃತಿ ಹಾಸನ್‌ಗೆ ಪಿಸಿಒಎಸ್!

ಶೃತಿ ಹಾಸನ್‌ಗೆ ಪಿಸಿಒಎಸ್!

ಹೌದು ಸದಾ ಗ್ಲಾಮರಸ್ ಫೋಟೋಗನ್ನು ಹಂಚಿಕೊಳ್ಳುತ್ತಿದ್ದ, ನಟಿ ಶೃತಿ ಹಾಸನ್ ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ವರ್ಕೌಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ತನಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಶೃತಿ ಹಾಸನ್ ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಾ ಇದ್ದು, ಇದರಿಂದ ಹೊರಬರಲು ಸಾಕಷ್ಟು ಶ್ರಮ ಪಡುತ್ತಿದ್ದಾರಂತೆ. ಹೀಗಂತೆ ಕಳೆದ ಕೆಲವು ದಿನಗಳ ಹಿಂದೆ ನಟಿ ಸೃತಿ ಹಾಸನ್ ಪೋಸ್ಟ್ ಹಂಚಿಕೊಂಡಿದ್ದರು.

ಶೃತಿ ಆರೋಗ್ಯದ ಬಗ್ಗೆ ವದಂತಿ!

ಶೃತಿ ಆರೋಗ್ಯದ ಬಗ್ಗೆ ವದಂತಿ!

ನಟಿ ಶೃತಿ ಹಾಸನ್ ಈ ರೀತಿಯ ಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೆ, ಈ ಸುದ್ದಿ ವೈರಲ್ ಆದರೆ. ಇನ್ನು ಕೆಲವು ಕಡೆ ಶೃತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೆಲ್ಲಾ ವರದಿ ಅಗಿರುವುದನ್ನು ಶೃತಿ ಹಾಸನ್ ಗಮನಿಸಿದ್ದಾರೆ. ಹಾಗಾಗಿ ಈ ವಿಚಾರದ ಬಗ್ಗೆ ವಿಡಿಯೋ ಮಾಡಿ, ತನ್ನ ಆರೋಗ್ಯದ ಬಗ್ಗೆ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ನಾನು ಅರೋಗ್ಯವಾಗಿದ್ದೇನೆ ಎಂದ ಶೃತಿ!

ವಿಡಿಯೋ ಮಾಡಿರುವ ಶೃತಿ ಹಾಸನ್ "ಹಾಯ್ ಎಲ್ಲರಿಗೂ, ನಾನೂ ಸುಂದರ ಹೈದ್ರಾಬಾದ್‌ನಲ್ಲಿ ಇದ್ದೇನೆ. ಉತ್ತಮ ಸಮಯ ಕಳೆಯುತ್ತಿದ್ದೇನೆ. ಕೆಲವು ದಿನಗಳ ಹಿಂದೆ ನಾನು ಹಾಕಿರುವ ಪೋಸ್ಟ್ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದೇನೆ. ನನ್ನ ನಿತ್ಯದ ವರ್ಕೌಟ್ ಮತ್ತು ನನಗೆ ಇರುವ ಪಿಸಿಒಎಸ್ ಬಗ್ಗೆ ಇರುವ ಪೋಸ್ಟ್ ಅದು. ಅಕಷ್ಟು ಹೆಣ್ಣು ಮಕ್ಕಳು ಇದ್ದು ಎದುರಿಸುತ್ತಿದ್ದಾರೆ. ಇದು ದೊಡ್ಡ ಸವಾಲೇ ಸರಿ. ಹಾಗಂತ ನಾನು ನರೋಗ್ಯವಾಗಿದ್ದೇನೆ ಅಥವಾ ನನ್ನ ಆರೋಗ್ಯ ಗಂಭೀರ ಸ್ಥಿತಿಯಲ್ಲಿ ಇದೆ ಅಂತಲ್ಲ. ಕೆಲವು ಮಾಧ್ಯಮಗಳಲ್ಲಿ ಇದನ್ನು ಬೇರೆ ರೀತಿಯಲ್ಲಿ ನಮೂರಿದ್ದು ತಿಳಿಯಿತು. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ನನಗೆ ಕರೆಗಳು ಬರುತ್ತಿವೆ. ಆದರೆ ಆ ರೀತಿ ಏನು ಇಲ್ಲ. ನಾನು ಚೆನ್ನಾಗಿ ಇದ್ದೇನೆ. ಪಿಸಿಒಎಸ್ ಹಲವು ವರ್ಷಗಳಿಂದ ಇದೆ. ನಾನುಅರೋಗ್ಯವಾಗಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ." ಎಂದಿದ್ದಾರೆ ಶೃತಿ ಹಾಸನ್.

ಶೃತಿ ಹಾಸನ್ ಪೋಸ್ಟ್‌ನಲ್ಲಿ ಏನಿತ್ತು!

ಆರೋಗ್ಯ ಸಮಸ್ಯೆ ಬಗ್ಗೆ ಪೋಸ್ಟ್ ಹಂಚಿಕೊಂಡ ಶೃತಿ ಹಾನ್ "ನನ್ನೊಂದಿಗೆ ನೀವು ವರ್ಕೌಟ್ ಮಾಡಿ, ನಾನು ಪಿಸಿಓಎಸ್ ಮತ್ತು ಎಂಡೊಮೆಟ್ರಿಯೊಸಿಸ್‌ನೊಂದಿಗೆ ಕೆಟ್ಟ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಇದು ಅಸಮತೋಲನ ಮತ್ತು ಉಬ್ಬುವುದು ಮತ್ತು ಚಯಾಪಚಯ ಸವಾಲುಗಳೊಂದಿಗಿನ ಕಠಿಣ ಹೋರಾಟ ಎಂದು ತಿಳಿದಿದೆ. ಆದರೆ ಅದನ್ನು ಹೋರಾಟವಾಗಿ ಸ್ವೀಕರಿಸುವ ಬದಲು, ನಾನು ಇದು ನೈಸರ್ಗಿಕ ಕ್ರಿಯೆ ಎಂದು ಒಪ್ಪಿಕೊಂಡಿದ್ದೇನೆ." ಎಂದು ಶೃತಿ ಹಾಸನ್ ಬರೆದುಕೊಂಡಿದ್ದಾರೆ.

ಸವಾಲು ಸ್ವೀಕರಿಸಿದ ಶೃತಿ ಹಾಸನ್!

ಸವಾಲು ಸ್ವೀಕರಿಸಿದ ಶೃತಿ ಹಾಸನ್!

"ನಾನು ನನ್ನ ದೇಹಕ್ಕೆ ಧನ್ಯವಾದ ಹೇಳುತ್ತೇನೆ. ಇದನ್ನು ನಿಭಾಯಿಸಲು, ಸರಿಯಾದ ಊಟ, ಸರಿಯಾದ ನಿದ್ದೆ ಮಾಡಲು ಮತ್ತು ನಾನು ವರ್ಕೌಟ್ ಆನಂದಿಸುತ್ತಿದ್ದೇನೆ. ಇದೀಗ ನನ್ನ ದೇಹವು ಈಗ ಸಂಪೂರ್ಣವಾವಗಿ ಸರಿಯಾಗಿಲ್ಲ. ಆದರೆ ನನ್ನ ಹೃದಯ ಫಿಟ್ ಆಗಿ, ಸಂತೋಷವಾಗಿದೆ. ಮತ್ತು ಈ ಸಂತೋಷದ ಹಾರ್ಮೋನುಗಳು ಹರಿಯಲಿ ಎಂದುಕೊಳ್ಳುತ್ತೇನೆ. ಈ ಸವಾಲುಗಳನ್ನು ಸ್ವೀಕರಿಸಿದ್ದೇನೆ. ಆದ್ದರಿಂದ ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ." ಎಂದು ಶೃತಿ ಹಾನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Actress Shruti Haasan Clarifies About Her Health Rumours, She Is Absolutely Fine, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X