ಯಾವುದು ನೆಗೆಟಿವ್ ಎಂದಿದ್ದರೋ ಅದೇ ಪಾಸಿಟಿವ್ ಆಯ್ತು: ಶ್ರುತಿ ಹಾಸನ್

ಸಿನಿಮಾ ನಟಿಯರ ಅಂದ, ದೇಹಾಕಾರದ ಬಗ್ಗೆ ಮೊದಲಿನಿಂದಲೂ ಚರ್ಚೆ, ಟೀಕೆ, ಮೂದಲಿಕೆಗಳು ನಡೆಯುತ್ತಲೇ ಬಂದಿವೆ. ಆ ನಟಿಯ ಮೂಗು ಉದ್ದ, ಆ ನಟಿಯ ತುಟಿ ದಪ್ಪ ಅದು ಇದೆಂದು ಟೀಕೆಗಳನ್ನು ಮಾಡುವ ದೊಡ್ಡ ವರ್ಗವೇ ಸಿನಿಮಾ ರಂಗದಲ್ಲಿದೆ.

ತಮ್ಮ ದೇಹದ ಬಗ್ಗೆ ಟೀಕೆಗಳನ್ನು ಎದುರಿಸಿದ ಕಾರಣವೇ ಹಲವು ನಟಿಯರು ಖಿನ್ನತೆಗೆ ಜಾರಿದ, ಮಾನಸಿಕವಾಗಿ ಕ್ಷೋಭೆಗೊಳಗಾದ ಉದಾಹರಣೆಗಳೂ ಇವೆ. ಬಹುತೇಕ ನಟಿಯರು ಈ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದಾರೆ.

ನಟಿ ಶ್ರುತಿ ಹಾಸನ್ ಸಹ ಇದೇ ರೀತಿ ತಮ್ಮ ದೇಹಾಕಾರದಿಂದಾಗಿ ಭಾರಿ ಟೀಕೆಗೆ ಒಳಗಾಗಿದ್ದರಂತೆ. ಆದರೆ ಶ್ರುತಿ ಹಾಸನ್‌ ಬಗ್ಗೆ ಇಂಡಸ್ಟ್ರಿಯವರು ಯಾವುದು ನೆಗೆಟಿವ್ ಎಂದು ಹೇಳಿದ್ದರೋ ಆ ನಂತರ ಅದೇ ಅವರಿಗೆ ಪಾಸಿಟಿವ್ ಆಯ್ತಂತೆ. ಹೀಗೆಂದು ಸ್ವತಃ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.

ಟೀಕೆಗಳನ್ನು ಎದುರಿಸಿದ್ದ ನಟಿ ಶ್ರುತಿ ಹಾಸನ್

ಟೀಕೆಗಳನ್ನು ಎದುರಿಸಿದ್ದ ನಟಿ ಶ್ರುತಿ ಹಾಸನ್

ಕಮಲ್ ಹಾಸನ್ ಪುತ್ರಿಯಾಗಿರುವ ಶ್ರುತಿ ಹಾಸನ್ ನಾಯಕಿಯಾಗಿ ಮೊದಲು ಕಾಲಿಟ್ಟಿದ್ದು ಬಾಲಿವುಡ್‌ಗೆ. 'ಲಕ್' ಸಿನಿಮಾದಲ್ಲಿ ಶ್ರುತಿ ಹಾಸನ್ ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆದ ಬಳಿಕ ತೆಲುಗು ತಮಿಳಿನಲ್ಲಿ ನಟಿಸಲು ಆರಮಭಿಸಿದರು. ಶ್ರುತಿ ಹಾಸನ್ ಮೊದಲು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಎತ್ತರದ ಬಗ್ಗೆ ಹಲವರು ಟೀಕಿಸಿದ್ದರಂತೆ, ಆಡಿಕೊಂಡಿದ್ದರಂತೆ. ಆದರೆ ಅದುವೇ ಅವರಿಗೆ ವರವಾಯ್ತಂತೆ.

ಸ್ಟಾರ್ ನಟರೊಟ್ಟಿಗೆ ನಟಿಸಿದ ನಟಿ ಶ್ರುತಿ

ಸ್ಟಾರ್ ನಟರೊಟ್ಟಿಗೆ ನಟಿಸಿದ ನಟಿ ಶ್ರುತಿ

ನನ್ನ ಎತ್ತರದ ಬಗ್ಗೆ ಹಲವು ಟೀಕಿಸಿದ್ದರು. ಇಷ್ಟು ಎತ್ತರ ಇರುವ ನಾಯಕಿ ಚಿತ್ರರಂಗದಲ್ಲಿ ಉಳಿಯುವುದಿಲ್ಲ ಎಂದಿದ್ದರಂತೆ. ಯಾವ ನಟರೂ ಇಷ್ಟು ಎತ್ತರದ ನಟಿಯೊಟ್ಟಿಗೆ ನಟಿಸಲು ಇಷ್ಟಪಡುವುದಿಲ್ಲ ಎಂದರಂತೆ ಆದರೆ ಅದೆಲ್ಲ ಸುಳ್ಳಾಗಿ ತೆಲುಗು, ತಮಿಳಿನ ಹಲವು ಸೂಪರ್ ಸ್ಟಾರ್‌ಗಳು ಶ್ರುತಿ ಹಾಸನ್ ಅವರೊಟ್ಟಿಗೆ ನಟಿಸಿದರು. ಪವನ್ ಕಲ್ಯಾಣ್, ಬಾಲಕೃಷ್ಣ, ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಅಜಿತ್, ವಿಜಯ್ ಸೇತುಪತಿ, ಸೂರ್ಯ, ಮಹೇಶ್ ಬಾಬು, ವಿಶಾಲ್, ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ರವಿತೇಜ ಇನ್ನೂ ಹಲವು ಸ್ಟಾರ್‌ಗಳು ಶ್ರುತಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಿಟ್ ಸಿನಿಮಾ ನೀಡಿದ್ದಾರೆ.

ಬಾಯ್‌ಫ್ರೆಂಡ್‌ ಜೊತೆ ಚಿತ್ರ ಹಂಚಿಕೊಳ್ಳುವ ನಟಿ

ಬಾಯ್‌ಫ್ರೆಂಡ್‌ ಜೊತೆ ಚಿತ್ರ ಹಂಚಿಕೊಳ್ಳುವ ನಟಿ

ಪ್ರೀತಿ, ಮದುವೆ ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಂಡರೆ ಅವಕಾಶಗಳು ಕಡಿಮೆ ಆಗುತ್ತವೆ ಎಂಬ ನಂಬಿಕೆಯೂ ಸಿನಿಮಾ ನಟಿಯರಲ್ಲಿದೆ. ಆದರೆ ಶ್ರುತಿ ಹಾಸನ್ ಇದಕ್ಕೆ ವಿರುದ್ಧ. ತಮ್ಮ ಪ್ರೀತಿ ಪ್ರೇಮದ ಬಗ್ಗೆ ಬಹಿರಂಗವಾಗಿ ಶ್ರುತಿ ಹಾಸನ್ ಮಾತನಾಡುತ್ತಾರೆ. ತಮ್ಮ ಬಾಯ್‌ಫ್ರೆಂಡ್‌ ಶಂತನು ಹಜಾರಿಕಾ ಜೊತೆಗಿನ ಚಿತ್ರಗಳನ್ನು ಸತತವಾಗಿ ಹಂಚಿಕೊಳ್ಳುತ್ತಿರುತ್ತಾರೆ ನಟಿ ಶ್ರುತಿ ಹಾಸನ್.

ಮೂವರು ಸ್ಟಾರ್‌ಗಳೊಟ್ಟಿಗೆ ಸಿನಿಮಾ

ಮೂವರು ಸ್ಟಾರ್‌ಗಳೊಟ್ಟಿಗೆ ಸಿನಿಮಾ

ಶ್ರುತಿ ಹಾಸನ್ ಪ್ರಸ್ತುತ ತೆಲುಗಿನ ಮೂವರು ಸ್ಟಾರ್ ನಟರೊಟ್ಟಿಗೆ ನಟಿಸುತ್ತಿದ್ದಾರೆ. ಬಾಲಕೃಷ್ಣ ಜೊತೆಗೆ ;ವೀರ ಸಿಂಹರೆಡ್ಡಿ' ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ. ಅದರೊಟ್ಟಿಗೆ ಬಿಡುಗಡೆ ಆಗಲಿರುವ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿಯೂ ಶ್ರುತಿ ಹಾಸನ್ ಅವರೇ ನಾಯಕಿ. ಅದರ ಬಳಿಕ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದಲ್ಲಿಯೂ ಅವರೇ ನಾಯಕಿ. ಈ ಸಿನಿಮಾ ನಿರ್ದೇಶನ ಮಾಡಿರುವುದು ಕನ್ನಡಿಗ ಪ್ರಶಾಂತ್ ನೀಲ್. ಈ ಮೂರು ಸಿನಿಮಾಗಳ ಜೊತೆಗೆ ಇಂಗ್ಲೀಷ್‌ನ 'ದಿ ಐ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಶ್ರುತಿ.

More from Filmibeat

English summary
Actress Shruti Haasan has been mocked for her height. She said, her height became positive for her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X