ಕುಡಿತಕ್ಕೆ ಅಡಿಟ್ ಆಗಿದ್ದ ನಟಿ ಶ್ರುತಿ ಹಾಸನ್, ಡ್ರಗ್ಸ್ ತೆಗೆದುಕೊಳ್ಳುತ್ತಿದ್ರಾ?: ನಟಿ ಹೇಳಿದ್ದೇನು?
ಬಹುಭಾಷಾ ನಟಿ, ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ತಮ್ಮ ಬೋಲ್ಡ್ ಹೇಳಿಕೆಗಳಿಂದ ಯಾವಾಗಲು ಅಭಿಮಾನಿಗಳನ್ನು ಆಶ್ಚರ್ಯಕ್ಕೆ ನೂಕುತ್ತಾರೆ. ತಮಗೆ ಅನಿಸಿದ್ದನ್ನು ಹೇಳುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಜೊತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಮದ್ಯಪಾನ ಮತ್ತು ಡ್ರಗ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ 'ಅನ್‌ಟ್ರಿಗರ್ಡ್ ವಿತ್ ಅಮಿಂಜಾಜ್'ನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ತನ್ನ ಜೀವನದಲ್ಲಿ ಮದ್ಯಪಾನ ಎಂಬುದು ತುಂಬಾ ದೊಡ್ಡ ವಿಷಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ನನ್ನ ಸ್ನೇಹಿತರ ಜೊತೆಗೆ ಯಾವಾಗಲು ನಾನು ಕುಡಿಯಲು ಬಯಸುತ್ತಿದ್ದೆ ಎಂದು ತಿಳಿಸಿದ್ದಾರೆ.

ಕುಡಿತ ಬಿಟ್ಟು ಎಂಟು ವರ್ಷಗಳಾಗಿವೆ: ಶ್ರುತಿ ಹಾಸನ್
ಸಂದರ್ಶನದಲ್ಲಿ ಮಾತನಾಡಿರುವ ನಟಿ ಶ್ರುತಿ ಹಾಸನ್ ಮದ್ಯಪಾನ ತ್ಯಜಿಸಲು ಏಕೆ ನಿರ್ಧರಿಸಿದರು ಎಂಬುದನ್ನು ಸಹ ಹಂಚಿಕೊಂಡರು. ತಾನು ಈ ಹಿಂದೆ ಹೆಚ್ಚು ಕುಡಿತದ ಹವ್ಯಾಸಕ್ಕೆ ಒಳಗಾಗಿದೆ. ಆದರೆ, ನಾನು ಎಂದಿಗೂ ಮಾದಕ ವ್ಯಸನಿಯಾಗಲಿಲ್ಲ. ಈಗ ಕುಡಿತ ಬಿಟ್ಟು ಎಂಟು ವರ್ಷಗಳಾಗಿವೆ ಎಂದಿದ್ದಾರೆ.
"ನಾನು ಎಂಟು ವರ್ಷಗಳಿಂದ ನನ್ನ ಮೇಲೆ ನಾನು ನಿಯಂತ್ರಣ ಹೊಂದಿದ್ದೇನೆ. ಆದ್ದರಿಂದ, ನೀವು ಮದ್ಯಪಾನ ಮಾಡದಿರುವಾಗ ಪಾರ್ಟಿಯ ಸಂದರ್ಭಗಳಲ್ಲಿ ಜನರನ್ನು ಸಹಿಸಿಕೊಳ್ಳುವುದು ಕಷ್ಟ. ಆದರೆ, ಕುಡಿತ ಬಿಟ್ಟ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಯಾವುದೇ ಹ್ಯಾಂಗೋವರ್ ಇಲ್ಲದೆ ಆರಾಮಾಗಿ ಇದ್ದೇನೆ. ಇದನ್ನೇ ನಿಮ್ಮ ಜೀವನದುದ್ದಕ್ಕೂ ಮಾಡಲು ಬಯಸಬಹುದು" ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ನಾನು ಎಂದಿಗೂ ಡ್ರಗ್ಸ್ ತೆಗೆದುಕೊಂಡಿಲ್ಲ: ಶ್ರುತಿ ಹಾಸನ್
ನಾನು ಎಂದಿಗೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಶ್ರುತಿ ಹಾಸನ್ ಹೇಳಿದ್ದಾರೆ. "ನಾನು ಎಂದಿಗೂ ಮಾದಕ ವ್ಯಸನಿಯಾಗಲಿಲ್ಲ. ಆದರೆ ನನ್ನ ಜೀವನದಲ್ಲಿ ಆಲ್ಕೋಹಾಲ್ ದೊಡ್ಡ ವಿಷಯವಾಗಿತ್ತು. ಆದರೆ, ಒಂದು ಹಂತದ ನಂತರ ಅದು ನನಗೆ ಸರಿ ಅನಿಸಲಿಲ್ಲ. ನಾನು ಯಾವಾಗಲೂ ಹಸಿವಿನಿಂದ ಬಳಲುತ್ತಿದ್ದೆ. ನಾನು ಯಾವಾಗಲೂ ನನ್ನ ಸ್ನೇಹಿತರೊಂದಿಗೆ ಕುಡಿಯಲು ಬಯಸುತ್ತಿದ್ದೆ. ಕುಡಿತವೇ ನನ್ನನ್ನು ನಿಯಂತ್ರಣ ಮಾಡುತ್ತಿದೆ ಎಂದು ನನಗೆ ತಿಳಿಯಿತು" ಎಂದು ಕುಡಿತ ಬಿಟ್ಟ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು, ಯಾವಾಗಲು ನನಗೆ ಪಾರ್ಟಿ ಮಾಡಲು ಸಲಹೆ ನೀಡುವವರಿಂದ ದೂರವಿದ್ದೇನೆ. ತನ್ನ ಕುಡಿತದ ಅಭ್ಯಾಸ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಎಂದು ನಟಿ ತಿಳಿಸಿದ್ದಾರೆ. ಕುಡಿತ ಬಿಟ್ಟ ಬಳಿಕ ಅವರು ಆರಾಮಾಗಿ ಇರುವುದು ಮತ್ತು ಅವರಿಗೆ ಹೆಚ್ಚು ಶಾಂತಿ ಸಿಕ್ಕಿದೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ಶ್ರುತಿ ಹಾಸನ್ ಸಿನಿಮಾಗಳು
ಈ ವರ್ಷದ ಆರಂಭದಲ್ಲಿ ಶ್ರುತಿ ಹಾಸನ್ ಎರಡು ತೆಲುಗು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂದಮುರಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಮತ್ತು ಚಿರಂಜೀವಿ ಮತ್ತು ರವಿತೇಜ ಅವರೊಂದಿಗೆ ವಾಲ್ಟೇರ್ ವೀರಯ್ಯ ಚಿತ್ರದಲ್ಲಿ ನಟಿಸಿದ್ದರು. ಇನ್ನು, ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆ 'ಸಲಾರ್ ಭಾಗ 1' ರಲ್ಲಿಯೂ ನಟಿಸಿದ್ದಾರೆ.
ಇದಲ್ಲದೇ, ಮುಂದೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ನಲ್ಲಿ ಶ್ರುತಿ ಹಾಸನ್ ಮೊದಲ ಬಾರಿಗೆ ನಟ ಅಡಿವಿ ಶೇಶ್ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಬಹಿರಂಗಪಡಿಸದಿದ್ದರೂ, 2022 ರ ಹಿಟ್ ಚಿತ್ರ ಮೇಜರ್ ನಂತರ ಅಡಿವಿ ಶೇಶ್ ಅವರ ಎರಡನೇ ಹಿಂದಿ ಚಲನಚಿತ್ರ.


Click it and Unblock the Notifications











