ನಟಿ ಶ್ರುತಿ ಹಾಸನ್‌ಗೆ ಆರೋಗ್ಯ ಸಮಸ್ಯೆ: ಬಹಿರಂಗ ಪೋಸ್ಟ್ ಹಂಚಿಕೊಂಡ ನಟಿ!

ಶ್ರುತಿ ಹಾಸನ್ ಸಿನಿಮಾರಂಗ ಬಿಟ್ಟು ಹಲವು ವರ್ಷ ಕಾಣೆಯಾಗಿದ್ದರು. ಈಗ ಮತ್ತೆ ಕಮ್ ಬ್ಯಾಕ್ ಮಾಡಿರೋ ಶ್ರುತಿ ಹಾಸನ್‌ಗೆ ಅದೃಷ್ಟ ಕೈ ಹಿಡಿದಿದೆ. ಹಾಗಾಗಿ ಸಾಲು ಸಾಲು ಸಿನಿಮಾ ಮಾಡಲು ಶ್ರುತಿ ಹಾಸನ್ ಮುಂದಾಗಿದ್ದಾರೆ.

ರವಿತೇಜ ಜೊತೆಗೆ ಕ್ರ್ಯಾಕ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ ಶ್ರುತಿ ಹಾಸನ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿ ಇರುತ್ತಾರೆ. ತಮ್ಮ ನಿತ್ಯದ ಆಗು ಹೋಗುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು, ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಆದರೆ, ಇತ್ತೀಚೆಗೆ ನಟಿ ಶ್ರುತಿ ಹಾಸನ್ ಹಂಚಿಕೊಂಡ ಪೋಸ್ಟ್ ಒಂದು ತುಂಬಾನೇ ಶಾಕಿಂಗ್ ಆಗಿತ್ತು. ಶ್ರುತಿ ತಮಗೆ ಇರುವ ಖಾಯಿಲೆಯ ಇದೆ ಎನ್ನುವ ಬಗ್ಗೆ ಈ ಪೋಸ್ಟ್‌ನಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಶ್ರುತಿಗೆ ಆಗಿರುವುದೇನು ಎನ್ನುವುದನ್ನು ಮುಂದೆ ಓದಿ...

ಪಿಸಿಓಡಿಯಿಂದ ಬಳಲುತ್ತಿರುವ ಶ್ರುತಿ ಹಾಸನ್!

ಪಿಸಿಓಡಿಯಿಂದ ಬಳಲುತ್ತಿರುವ ಶ್ರುತಿ ಹಾಸನ್!

ಹೌದು ಸದಾ ಗ್ಲಾಮರಸ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ, ನಟಿ ಶೃತಿ ಹಾಸನ್ ಸದ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ, ವರ್ಕೌಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ತನಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಶೃತಿ ಹಾಸನ್ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಾ ಇದ್ದು, ಇದರಿಂದ ಹೊಸಬರಲು ಸಾಕಷ್ಟು ಶ್ರಮ ಪಡುತ್ತಿದ್ದಾರಂತೆ.

ಆರೋಗ್ಯ ಸಮಸ್ಯೆ ಬಗ್ಗೆ ಶ್ರುತಿ ಹಾಸನ್ ಪೋಸ್ಟ್!

ಆರೋಗ್ಯ ಸಮಸ್ಯೆ ಬಗ್ಗೆ ಶ್ರುತಿ ಹಾಸನ್ ಪೋಸ್ಟ್!

ಆರೋಗ್ಯ ಸಮಸ್ಯೆ ಬಗ್ಗೆ ಪೋಸ್ಟ್ ಹಂಚಿಕೊಂಡ ಶ್ರುತಿ ಹಾಸನ್ "ನನ್ನೊಂದಿಗೆ ನೀವು ವರ್ಕೌಟ್ ಮಾಡಿ, ನಾನು ಪಿಸಿಓಎಸ್ ಮತ್ತು ಎಂಡೊಮೆಟ್ರಿಯೊಸಿಸ್‌ನೊಂದಿಗೆ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಇದು ಅಸಮತೋಲನ ಮತ್ತು ಚಯಾಪಚಯದಂತಹ ಸವಾಲುಗಳೊಂದಿಗಿನ ಕಠಿಣ ಹೋರಾಟ ಎಂದು ತಿಳಿದಿದೆ. ಆದರೆ ಅದನ್ನು ಹೋರಾಟವಾಗಿ ಸ್ವೀಕರಿಸುವ ಬದಲು, ನಾನು ಇದು ನೈಸರ್ಗಿಕ ಕ್ರಿಯೆ ಎಂದು ಒಪ್ಪಿಕೊಂಡಿದ್ದೇನೆ." ಎಂದು ಶ್ರುತಿ ಹಾಸನ್ ಬರೆದುಕೊಂಡಿದ್ದಾರೆ.

ಸವಾಲು ಸ್ವೀಕರಿಸಿದ ಶೃತಿ ಹಾಸನ್!

"ನಾನು ನನ್ನ ದೇಹಕ್ಕೆ ಧನ್ಯವಾದ ಹೇಳುತ್ತೇನೆ. ಇದನ್ನು ನಿಭಾಯಿಸಲು, ಸರಿಯಾದ ಊಟ, ಸರಿಯಾದ ನಿದ್ದೆ ಮಾಡಬೇಕಿದೆ. ಹಾಗೆಯೇ ವರ್ಕೌಟ್ ಮಾಡುವುದನ್ನು ನಾನು ಆನಂದಿಸುತ್ತಿದ್ದೇನೆ. ಇದೀಗ ನನ್ನ ದೇಹವು ಈಗ ಸಂಪೂರ್ಣವಾಗಿ ಸರಿಯಾಗಿಲ್ಲ. ಆದರೆ ನನ್ನ ಹೃದಯ ಫಿಟ್ ಆಗಿ, ಸಂತೋಷವಾಗಿದೆ. ಈ ಸಂತೋಷದ ಹಾರ್ಮೋನುಗಳು ಹರಿಯಲಿ ಎಂದುಕೊಳ್ಳುತ್ತೇನೆ. ಈ ಸವಾಲುಗಳನ್ನು ಸ್ವೀಕರಿಸಿದ್ದೇನೆ. ಆದ್ದರಿಂದ ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ." ಎಂದು ಶ್ರುತಿ ಹಾಸನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಲಾರ್ ಚಿತ್ರದಲ್ಲಿ ಶ್ರುತಿ ಬ್ಯುಸಿ!

ಸಲಾರ್ ಚಿತ್ರದಲ್ಲಿ ಶ್ರುತಿ ಬ್ಯುಸಿ!

ಶ್ರುತಿ ಹಾಸನ್​ 'ಸಲಾರ್'​ ಚಿತ್ರದಲ್ಲಿ ಪ್ರಭಾಸ್​ ಜೊತೆ ನಟಿಸುತ್ತಿದ್ದಾರೆ. ಇನ್ನೂ ಪೃಥ್ವಿರಾಜ್​ ಜೊತೆ ಕೂಡ ಮಲಯಾಳಂ ಸಿನಿಮಾ ಒಪ್ಪಿಕೊಂಡಿದ್ದಾರೆ. 'ಸಲಾರ್'​ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರುತಿ ಹಾಸನ್ ಮತ್ತು ಪ್ರಭಾಸ್ ಅವರ ಕೆಲವು ಪ್ರಮುಖ ದೃಶ್ಯಗಳ ಜೊತೆಗೆ ಎರಡು ಹಾಡುಗಳನ್ನು ಚಿತ್ರೀಕರಿಸಲಾಗುತ್ತೆ ಎಂದು ವರದಿಯಾಗಿದೆ.

More from Filmibeat

English summary
Actress Shruti Haasan Sufferinig From Pcos, She Share The Pain Of It, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X