ಮತ್ತೆ ಒಂದಾದ 'ಗಬ್ಬರ್ ಸಿಂಗ್' ಜೋಡಿ: ಪವನ್ ಕಲ್ಯಾಣ್ ಜೊತೆ ಶ್ರುತಿ ರೋಮ್ಯಾನ್ಸ್

'ಅಜ್ಞಾತವಾಸಿ' ಚಿತ್ರದ ಬಳಿಕ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡು ತಿಂಗಳಾಗಿದೆ. ಈಗಾಗಲೆ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಪವನ್ ಕಲ್ಯಾಣ್ ಹೊಸ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಆಗಾಗ ಸದ್ದು ಮಾಡುತ್ತಲೆ ಇರುತ್ತೆ. ಅಂದ್ಹಾಗೆ ಪವಲ್ ಕಲ್ಯಾನ್ ಹೊಸ ಸಿನಿಮಾ ಬಾಲಿವುಡ್ ನ ಸೂಪರ್ ಹಿಟ್ 'ಪಿಂಕ್' ಚಿತ್ರದ ರೀಮೇಕ್.

ಚಿತ್ರದ ಪ್ರಮುಖ ಪಾತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ. ಈಗಾಗಲೆ ಪವನ್ ಪಾತ್ರಕ್ಕಾಗಿ ದಾಡಿ ಕೂಡ ಬಿಟ್ಟಿದ್ದಾರೆ. ಚಿತ್ರದಲ್ಲಿ ಪವನ್ ಕಪ್ಪು ಕೋಟು ಧರಿಸಿ ಲಾಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಕಾಲಿವುಡ್ ನ ಖ್ಯಾತ ನಟಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ನಟಿ ಶ್ರುತಿ ಹಾಸನ್, ಪವನ್ ಕಲ್ಯಾಣ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರಂತೆ. ಈಗಾಗಲೆ ಚಿತ್ರತಂಡ ಶ್ರುತಿ ಹಾಸನ್ ಜೊತೆ ಮಾತುಕತೆ ನಡೆಸಿದ್ದಾರೆ. ಶ್ರುತಿ ಹಾಸನ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಆದರೆ ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ. ಈಗಾಗಲೆ ಶ್ರುತಿ ಹಾಸನ್ ಮತ್ತು ಪವನ್ ಕಲ್ಯಾಣ್ ಇಬ್ಬರು 'ಗಬ್ಬರ್ ಸಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Actress Shruti Hassan Collaborate To Pawan Kalyan After Gabbar Singh

2015ರಲ್ಲಿ ರಿಲೀಸ್ ಆದ 'ಗಬ್ಬರ್ ಸಿಂಗ್' ಅಭಿಮಾನಿಗಳ ಮನಗೆದ್ದಿತ್ತು. ಈಗ ಮತ್ತೆ ಒಂದಾಗುತ್ತಿರುವ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕಿನ್ನು ಟೈಟಲ್ ಫೈನಲ್ ಆಗಿಲ್ಲ. ಒಂದಷ್ಟು ಸಮಯ ಬ್ರೇಕ್ ಪಡೆದಿದ್ದ ನಟಿ ಶ್ರುತಿ ಹಾಸನ್ ಈಗ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ರವಿ ತೇಜಾಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kollywood Actress Shruti Hassan collaborate to Pawan Kalyan after Gabbar Singh. Actor Pawan Kalyan playing lead role in remake of Pink movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X