ಅಕ್ಕಿನೇನಿ ಕುಟುಂಬದ 4 ಸಾವಿರ ಕೋಟಿ ಆಸ್ತಿ ಮೇಲೆ ಶೋಭಿತಾ ಕಣ್ಣು, ಸಮಂತಾಗೆ ಅನ್ಯಾಯ; ಹೀಗಂದಿದ್ಯಾರು?

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚೆಗೆ ಟಾಲಿವುಡ್‌ನ ಅಕ್ಕಿನೇನಿ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ತೆಲುಗು ನಟಿ ಶೋಭಿತಾ ಧುಲಿಪಾಲಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಲ್ಲಿಂದ ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ಮಂದಿ ಕೂಡ ಶೋಭಿತಾ ವಿರುದ್ಧ ಕಾಮೆಂಟ್‌ಗಳನ್ನು ಪಾಸ್ ಮಾಡುತ್ತಿದ್ದಾರೆ.

ತಮಿಳಿನ ಯೂಟ್ಯೂಬರ್ ಕಮ್ ಡೈರೆಕ್ಟರ್ ರಾಜಾಮೋಹನ್ ತಮ್ಮ ಯೂಟ್ಯೂಬ್‌ನಲ್ಲಿ ಶೋಭಿತಾ ಧುಲಿಪಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ವಿಡಿಯೋ ಈಗ ತಮಿಳಿನಾಡಿನಲ್ಲಿ ವೈರಲ್ ಆಗುತ್ತಿದೆ. ನಾಗಚೈತನ್ಯರನ್ನು ನಟಿ ಶೋಭಿತಾ ಮದುವೆ ಆಗುತ್ತಿರೋದು ಹಣಕ್ಕಾಗಿ ಅಂತ ಟೀಕಿಸಿದ್ದಾರೆ.

Actress Sobhita Dhulipala eyeing on Akkineni Family 4 thousand crore property

ಅಷ್ಟೇ ಅಲ್ಲದೆ ಶೋಭಿತಾ ಹಾಗೂ ನಾಗ ಚೈತನ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರಿಂದ ಸಮಂತಾಗೆ ಅನ್ಯಾಯ ಆಗಿದೆ ಎಂದು ರಾಜಾ ಮೋಹನ್ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಯೂಟ್ಯೂಬರ್ ರಾಜಾ ಮೋಹನ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ನಾಗ ಚೈತನ್ಯರನ್ನು ಮದುವೆಯಾಗಿ ಸಮಂತಾ ಅಕ್ಕಿನೇನಿ ಕುಟುಂಬಕ್ಕೆ ಸೇರಿಕೊಂಡಿದ್ದರು. ಆ ವೇಳೆನೂ ಕೆಲವರು ಅಕ್ಕಿನೇನಿ ಕುಟುಂಬದ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕಾಗಿ ಸಮಂತಾ ನಾಗಚೈತನ್ಯರನ್ನು ಮದುವೆ ಆಗಿದ್ದಾರೆ ಅನ್ನೋದ ಕಾಮೆಂಟ್‌ಗಳು ಕೇಳಿ ಬಂದಿದ್ದರು. ಈಗ ಶೋಭಿತಾ ಧುಲಿಪಾಲಾ ಮೇಲೂ ಅದೇ ಆರೋಪ ಕೇಳಿ ಬರುತ್ತಿದೆ ಎಂದು ತಮಿಳು ಯೂಟ್ಯೂಬರ್ ಕಮ್ ನಿರ್ದೇಶಕ ರಾಜ ಮೋಹನ್ ಕಾಮೆಂಟ್ ಮಾಡಿದ್ದಾರೆ.

Actress Sobhita Dhulipala eyeing on Akkineni Family 4 thousand crore property

ನಾಗಚೈತನ್ಯರನ್ನು ಸಮಂತಾ ಪ್ರೀತಿ ಮದುವೆ ಆಗಿದ್ದರು. ಆದರೆ, ಕೇವಲ ಕೆಲವೇ ವರ್ಷಗಳಲ್ಲಿ ಈ ಮದುವೆ ಮುರಿದು ಬಿತ್ತು. ಇನ್ನು ಈತನೊಂದಿಗೆ ಬಾಳಲಾರೆ ಎಂದು ನಿರ್ಧರಿಸಿದ್ದ ಸಮಂತಾ ವಿಚ್ಛೇದನ ನೀಡಿ ಹೊರಬಂದರು. ಕಾನೂನು ಬದ್ಧವಾಗಿ ನಾಗ ಚೈತನ್ಯರಿಂದ ಬೇರೆಯಾದರು. ಈ ವೇಳೆ 4 ಸಾವಿರ ಕೋಟಿ ಆಸ್ತಿ ಇರುವ ಕುಟುಂಬದ ಹುಡುಗನಿಂದ ಜೀವನಾಂಶ ಕೇಳಿದ್ದಾರೆ ಅನ್ನೋ ಮಾತು ಬಂದಿತ್ತು. ಆದರೆ, ಸಮಂತಾ ಒಂದೇ ಒಂದು ರೂಪಾಯಿ ಜೀವನಾಂಶವನ್ನೂ ಪಡೆದಿಲ್ಲ ಎಂದಿದ್ದಾರೆ.

ಇನ್ನೊಂದು ಕಡೆ ನಾಗಚೈತನ್ಯ ಮಾಜಿ ಪತ್ನಿ ಸಮಂತಾಗೆ ಪ್ರಪೋಸ್ ಮಾಡಿದ ದಿನವೇ (ಆಗಸ್ಟ್ 8) ನಟಿ ಶೋಭಿತಾ ಧುಲಿಪಾಲಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಮದುವೆ ಆಗಿರುವ ನಟನೊಂದಿಗೆ ಪ್ರೀತಿಯಲ್ಲಿ ಬೀಳುವುದಕ್ಕೆ ಏನು ಕಾರಣ? 4000 ಕೋಟಿ ಆಸ್ತಿಯ ಮೇಲೆ ಕಣ್ಣು ಬಿದ್ದಿರಬೇಕು ಎಂದು ಯೂಟ್ಯೂಬ್ ಚಾನೆಲ್‌ಗಳು ಮಾತಾಡುತ್ತಿವೆ ಎಂದು ರಾಜ ಮೋಹನ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಮದುವೆ ಅನ್ನೋದು ವೈಯಕ್ತಿಕ ವಿಷಯ. ಇಬ್ಬರು ಇನ್ನೊಬ್ಬರನ್ನು ಇಷ್ಟ ಪಟ್ಟರೆ ಅವರು ಮದುವೆ ಆಗಬಹುದು. ಅದನ್ನು ಯಾರೂ ತಡೆಯುವಂತಿಲ್ಲ. ಅದೇ ಒಂದು ವೇಳೆ ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂತಾದರೆ, ಬೇರೆಯಾಗುವುದಕ್ಕೂ ಕಾನೂನು ಇದೆ. ಆದರೆ, ನಾಗ ಚೈತನ್ಯ, ಶೋಭಿತಾ ಧುಲಿಪಾಲಾ ಹಾಗೂ ಸಮಂತಾರನ್ನು ಇಲ್ಲಿ ಎಳೆದಾಡುತ್ತಿರುವುದಕ್ಕೆ ರಾಜಮೋಹನ್ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

More from Filmibeat

English summary
Is Sobhita Dhulipala marriying Naga Chaitanya for property?
Read more about: naga chaitanya filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X