Sreeleela: ಸೆಟ್ಟೇರಿತು, ನಟಿ ಶ್ರೀಲೀಲಾ 5ನೇ ತೆಲುಗು ಸಿನಿಮಾ!

ಕನ್ನಡದ ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಕನ್ನಡದಲ್ಲಿ 'ಕಿಸ್' ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೊತೆಗೆ ಈ ಮುದ್ದು ಮೊಗದ ಚೆಲುವೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ.

ಕನ್ನಡದಲ್ಲಿ ಬ್ಯೂಸಿ ಇರುವ ಶ್ರೀಲೀಲಾ ಅತ್ತ ತೆಲುಗು ಸಿನಿಮಾ ರಂಗದಲ್ಲೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾ 'ಪೆಳ್ಳಿ ಸಂದ D'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಅಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿ ಬಳಗ ಹುಟ್ಟಿ ಕೊಂಡಿದೆ. ಈಗ ತೆಲುಗಿನಲ್ಲೂ ಕೂಡ ಶ್ರೀಲೀಲಾಗೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗಿದೆ.

ಸದ್ಯ ಶ್ರೀಲೀಲಾ ಅವರ ಬಗ್ಗೆ ಮಾತನಾಡಲು ಕಾರಣ ಅವರ ಹೊಸ ಚಿತ್ರ. ಹೊಸ ಚಿತ್ರ ಸೆಟ್ಟೇರಿದೆ ಆದರೆ ಅದು ಕನ್ನಡ ಚಿತ್ರ ಅಲ್ಲ. ಬದಲಿಗೆ ತೆಲುಗು ಚಿತ್ರ. ಸದ್ಯ ಚಿತ್ರದ ಮೂಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಯಾವ ನಟನ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದರೆ. ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಮುಂದೆ ಓದಿ...

ನಟ ನಿತಿನ್ ಜೊತೆಗೆ ಶ್ರೀಲೀಲಾ ಹೊಸ ಚಿತ್ರ!

ನಟ ನಿತಿನ್ ಜೊತೆಗೆ ಶ್ರೀಲೀಲಾ ಹೊಸ ಚಿತ್ರ!

ಸದ್ಯ ಕನ್ನಡದ ನಟಿ ಶ್ರೀಲೀಲಾ ತೆಲುಗಿನಲ್ಲಿ ಸಿಕ್ಕಪಟ್ಟೆ ಬ್ಯುಸಿ. ಸಾಲು, ಸಾಲಾಗಿ ಶ್ರೀಲೀಲಾಳ ತೆಲುಗು ಚಿತ್ರಗಳು ಒಂದರ ಹಿಂದೊಂದರಂತೆ ಪ್ರಕಟ ಆಗುತ್ತಿದೆ. ಈಗ ತೆಲುಗು ನಟ ನಿತಿನ್ ಜೊತೆಗೆ ಹೊಸ ಸಿನಿಮಾ ಮಾಡುತ್ತಾ ಇದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. 'ಪ್ರೊಡಕ್ಷನ್ ನಂಬರ್ 9' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದೆ. ಚಿತ್ರದ ಮುಹೂರ್ತದ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ರಶ್ಮಿಕಾ ಹಾದಿಯಲ್ಲಿ ನಟಿ ಶ್ರೀಲೀಲಾ ಟಾಲಿವುಡ್ ಟೂರ್!

ರಶ್ಮಿಕಾ ಹಾದಿಯಲ್ಲಿ ನಟಿ ಶ್ರೀಲೀಲಾ ಟಾಲಿವುಡ್ ಟೂರ್!

ನಟಿ ಶ್ರೀಲೀಲಾ ಕನ್ನಡದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದರೂ, ಈಗ ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ಕನ್ನಡದಲ್ಲಿ ಇಲ್ಲಿ ತನಕ ಮೂರು ಚಿತ್ರಗಳಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. 'ಕಿಸ್', 'ಭರಾಟೆ' ಮತ್ತು 'ಬೈ ಟು ಲವ್' ಚಿತ್ರಗಳಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ಆದರೆ ಶ್ರೀಲೀಲಾ ಅಭಿನಯದ ತೆಲುಗಿನ 'ಪೆಳ್ಳಿ ಸಂದ ಡಿ' ಚಿತ್ರ ಮಾತ್ರ ರಿಲೀಸ್ ಆಗಿದೆ. ಈಗ ತೆಲುಗು ಚಿತ್ರಗಳ ಸಂಖ್ಯೆ 5ಕ್ಕೆ ಏರಿದೆ.

ಮಹೇಶ್ ಬಾಬು, ಪ್ರಭಾಸ್ ಜೊತೆಗೆ ಶ್ರೀಲೀಲಾ ಹೆಸರು!

ಮಹೇಶ್ ಬಾಬು, ಪ್ರಭಾಸ್ ಜೊತೆಗೆ ಶ್ರೀಲೀಲಾ ಹೆಸರು!

ನಟ ರವಿತೇಜ ಜೊತೆಗೆ 'ಧಮಾಕ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಶ್ರೀಲೀಲಾ. ಇದರ ಜೊತೆಗೆ 'ವರಾಹಿ ಚಲನ ಚಿತ್ರಂ' ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿರೀಟಿ ರೆಡ್ಡಿ ಜೊತೆಗೆ ಒಂದು ಸಿನಿಮಾ ಮಾಡ್ತಿದ್ದಾರೆ ಇದು ತೆಲುಗು ಜೊತೆಗೆ ಕನ್ನಡದಲ್ಲಿ ಬರುತ್ತಿದೆ. ಮತ್ತು 'ಅನಗನಗ ಒಕ ರಾಜ' ಚಿತ್ರದಲ್ಲು ಶ್ರೀಲೀಲಾ ಅಭಿನಯಿಸಿದ್ದರೆ ಎಂದು ವಿಕಿಪೀಡಿಯದಲ್ಲಿ ನಮೂದಿಸಲಾಗಿದೆ. ಈ ಚಿತ್ರಗಳನ್ನು ಬಿಟ್ಟರೆ ಶ್ರೀಲೀಲಾ ಮಹೇಶ್ ಬಾಬು ಮತ್ತು ಪ್ರಭಾಸ್ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

Recommended Video

Yash | ಈ ಸಾಧನೆ ಮಾಡಿದ ದಕ್ಷಿಣ ಭಾರತದ ಮೊದಲ ಚಿತ್ರ KGF 2
ಶ್ರೀಲೀಲಾ ಮುಂದಿನ ಕನ್ನಡ ಚಿತ್ರ ಯಾವಾಗ?

ಶ್ರೀಲೀಲಾ ಮುಂದಿನ ಕನ್ನಡ ಚಿತ್ರ ಯಾವಾಗ?

ಇನ್ನು ನಟಿ ಶ್ರೀಲೀಲಾ ಕನ್ನಡದಲ್ಲಿ ಸಿನಿಮಾ ಮಾಡುವುದು ಅನುಮಾನ ಎನ್ನುವಂತಾಗಿದೆ. ಯಾಕೆಂದರೆ ಸಾಲು, ಸಾಲು ತೆಲುಗು ಚಿತ್ರಗಳು ಪ್ರಕಟ ಆಗುತ್ತಿದೆ. 'ಬೈ ಟು ಲವ್' ಚಿತ್ರದ ಬಳಿಕ ಶ್ರೀಲೀಲಾ ಮತ್ಯಾವ ಕನ್ನಡ ಚಿತ್ರವೂ ಒಪ್ಪಿಕೊಂಡ ಹಾಗೆ ಕಾಣುತ್ತಾ ಇಲ್ಲ. ಹಾಗಾಗಿ ರಶ್ಮಿಕಾ ಮಾದರಿಯಲ್ಲಿ ಶ್ರೀಲೀಲಾ ಹೆಚ್ಚೆಚ್ಚು ತೆಲುಗು ಚಿತ್ರಗಳನ್ನು ಮಾಡಿಕೊಂಡು, ಅಲ್ಲೆ ಉಳಿದು ಬಿಡುತ್ತಾರ ಎನ್ನುವ ಗುಸು, ಗುಸು ಹಬ್ಬಿದೆ.

More from Filmibeat

English summary
Actress Sreeleela 5th Telugu Movie Is With Nithiin, Muhurtham pooja done already...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X