ಶ್ರೀಲೀಲಾ ಇನ್ಮುಂದೆ ಡಾ. ಶ್ರೀಲೀಲಾ; ಆಕೆ ಎಂಬಿಬಿಎಸ್ ಕನಸು ಕಂಡಿದ್ದೇಕೆ?

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಶ್ರೀಲೀಲಾ ಇನ್ಮುಂದೆ ಡಾ. ಶ್ರೀಲೀಲಾ. ಹೌದು ಶ್ರೀಲೀಲಾ ಎಂಬಿಬಿಎಸ್ ಪದವಿ ಗ್ರಾಡ್ಯುಯೇಷನ್ ಸೆರಮನಿ ಮುಗಿದಿದೆ.

ಡಾಕ್ಟರ್ ಆಗಬೇಕು ಎನ್ನುವುದು ಶ್ರೀಲೀಲಾ ಕನಸಾಗಿತ್ತು. ಅದೇ ಕಾರಣಕ್ಕೆ ಸಿನಿಮಾಗಳ ನಟಿಸುವುದರ ಜೊತೆ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಿದ್ದರು. ನಿನ್ನೆ (ಫೆಬ್ರವರಿ 10) ಮುಂಬೈನ ಡಿವೈ ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀಲೀಲಾ ಅಧಿಕೃತವಾಗಿ ತಮ್ಮ ಎಂಬಿಬಿಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

Actress Sreeleela Becomes Dr Sreeleela Completes MBBS While Balancing a Busy Film Career

ತಮ್ಮ ಸಹಪಾಠಿಗಳ ಜೊತೆ ಸೇರಿ ನಟಿ ಶ್ರೀಲೀಲಾ 'ಹಿಪೊಕ್ರೆಟಿಕ್ ಪ್ರಮಾಣ ವಚನ' (ವೈದ್ಯಕೀಯ ವೃತ್ತಿ ಪ್ರಮಾಣ ವಚನ) ತೆಗೆದುಕೊಂಡಿದ್ದಾರೆ. 'ಕ್ಲಾಸ್ ಆಫ್ 2020' ಬ್ಯಾಚ್‌ನೊಂದಿಗೆ ವೈದ್ಯೆಯಾಗಿ ಶ್ರೀಲೀಲಾ ಪದವಿ ಪಡೆದಿದ್ದಾರೆ. ಅಂದರೆ 6 ವರ್ಷಗಳ ಎಂಬಿಬಿಎಸ್ ಪದವಿ ವ್ಯಾಸಂಗ ಮುಗಿಸಿದ್ದಾರೆ. ಪದವಿ ಪಡೆದ ಬಳಿಕ ಆಕೆ ಆತ್ಮೀಯರನ್ನು ಅಪ್ಪಿ ಸಂಭ್ರಮಿಸಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಯಶಸ್ಸು ಸಿಕ್ಕ ಬಳಿಕ ಕೆಲವರು ತಮ್ಮ ವೃತ್ತಿ, ವಿದ್ಯಾಭ್ಯಾಸ ನಿಲ್ಲಿಸಿಬಿಡುತ್ತಾರೆ. ಅಥವಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಶಿಕ್ಷಣವನ್ನು ನಿಲ್ಲಿಸುವ ಉದಾಹರಣೆ ಕೂಡ ಇದೆ. ಆದರೆ ಶ್ರೀಲೀಲಾ ಮಾತ್ರ ನಟನೆಯ ಜೊತೆ ಜೊತೆಗೆ ಎಂಬಿಬಿಎಸ್ ಪದವಿ ಪಡೆಯುವ ಮನಸ್ಸು ಮಾಡಿದ್ದರು. ಅಂದಹಾಗೆ ಶ್ರೀಲೀಲಾ ತಾಯಿ ಸ್ವರ್ಣಲತಾ ಕೂಡ ವೃತ್ತಿಯಲ್ಲಿ ವೈದ್ಯೆ. ಸ್ತ್ರೀರೋಗ ತಜ್ಞೆ (ಗೈನಕಾಲಜಿಸ್ಟ್) ಆಗಿರುವ ಡಾ. ಸ್ವರ್ಣಲತಾ ಅವರು ನಟಿ ರಾಧಿಕಾ ಪಂಡಿತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಹೆರಿಗೆ ಮಾಡಿಸಿದ್ದಾರೆ.

ತಾವು ಎಂಬಿಬಿಎಸ್ ವ್ಯಾಸಂಗ ಮಾಡಲು ಕಾರಣ ಏನು ಎನ್ನುವುದನ್ನು ಹಿಂದೆ ಸಂದರ್ಶನವೊಂದರಲ್ಲಿ ಶ್ರೀಲೀಲಾ ಹೇಳಿದ್ದರು. "ನಮ್ಮ ಅಜ್ಜಿ ಒಮ್ಮೆ ಇದ್ದಕ್ಕಿದ್ದಂತೆ ಬಿದ್ದುಬಿಟ್ಟರು. ಆಗ ಏನು ಮಾಡಬೇಕೆಂದು ನಮಗೆ ಗೊತ್ತಾಗಲಿಲ್ಲ. ಡಾಕ್ಟರ್ ಆಗಿದ್ದ ನಮ್ಮ ಅಣ್ಣ ಬಂದು, ಪ್ರಥಮ ಚಿಕಿತ್ಸೆ ಮಾಡಿದ ಬಳಿಕ ಅಜ್ಜಿ ಚೇತರಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ನಾನು ಕೂಡ ಡಾಕ್ಟರ್ ಆಗಬೇಕೆಂದು ನಿರ್ಧರಿಸಿದೆ" ಎಂದು ಶ್ರೀಲೀಲಾ ನೆನಪಿಸಿಕೊಂಡಿದ್ದರು.

ಶ್ರೀಲೀಲಾ ಡೆಡಿಕೇಷನ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಡಾಕ್ಟರ್ ಶ್ರೀಲೀಲಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ತೆಲುಗು ಚಿತ್ರದಲ್ಲಿ ಬಾಲನಟಿಯಾಗಿ ಶ್ರೀಲೀಲಾ ಮಿಂಚಿದ್ದರು. ಕನ್ನಡದ 'ಕಿಸ್' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಿದ್ದರು. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ಡ್ಯಾನ್ಸ್ ಮೂಲಕ ಕಮಾಲ್ ಮಾಡಿದ್ದರು.

'ಧಮಾಕಾ' ಚಿತ್ರದಲ್ಲಿ ರವಿತೇಜಾ ಜೊತೆ ನಟಿಸಿದ ಬಳಿಕ ಶ್ರೀಲೀಲಾ ಕ್ರೇಜ್ ಹೆಚ್ಚಾಯಿತು. ಮುಂದೆ ಬಾಲಕೃಷ್ಣ, ಮಹೇಶ್ ಬಾಬು, ಪವನ್‌ ಕಲ್ಯಾಣ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡರು. 'ಪರಾಶಕ್ತಿ' ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಶ್ರೀಲೀಲಾ ಗಮನ ಸೆಳೆದಿದ್ದಾರೆ. ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

'ಪುಷ್ಪ'-2 ಚಿತ್ರದಲ್ಲಿ 'ಕಿಸ್ಸಿಕ್' ಸಾಂಗ್‌ನಲ್ಲಿ ಹೆಜ್ಜೆ ಹಾಕಿ ಶ್ರೀಲೀಲಾ ಬಾಲಿವುಡ್ ಮಂದಿ ಕಣ್ಣಿಗೆ ಬಿದ್ದಿದ್ದರು. ಇದೀಗ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರೂ ದೊಡ್ಡ ಮಾತ್ರ ಬ್ರೇಕ್ ಸಿಗಲಿಲ್ಲ. ಪವನ್ ಕಲ್ಯಾಣ್ ಜೊತೆ ಶ್ರೀಲೀಲಾ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. ತಮಿಳಿನಲ್ಲಿ ಧನುಷ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

More from Filmibeat

Read more about: sreeleela tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X