Sreeleela: ಜೀವನದಲ್ಲಿ ತಂದೆಯ ಅನುಪಸ್ಥಿತಿ ನೋವು ತೋಡಿಕೊಂಡ ಶ್ರೀಲೀಲಾ? ಬಾಲಯ್ಯ ಎದುರು ಭಾವುಕ
ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿಬಿಟ್ಟಿದ್ದಾರೆ. ಬಾಲಕೃಷ್ಣ ಜೊತೆ ಕಿಸ್ ಬೆಡಗಿ ನಟನೆಯ 'ಭಗವಂತ್ ಕೇಸರಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಶ್ರೀ ನಟಿಸಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದ ಕಾಮಿಡಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಭಗವಂತ್ ಕೇಸರಿ' ಟಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 19ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ಬಾಲಯ್ಯ ಸೋದರ ಮಗಳಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ತಂದೆ ಮಗಳ ಬಾಂಧವ್ಯದ ಕತೆಯ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ.

ಬಾಲಕೃಷ್ಣ ಜಬರ್ದಸ್ತ್ ಆಕ್ಷನ್ ಹಾಗೂ ಡೈಲಾಗ್ಸ್ ಮಿಕ್ಸ್ ಮಾಡಿ 'ಭಗವಂತ್ ಕೇಸರಿ' ಟ್ರೈಲರ್ ಕಟ್ ಮಾಡಲಾಗಿದೆ. ಇಂಡಿಯನ್ ಆರ್ಮಿಯಲ್ಲಿ ವಿಜಯಲಕ್ಷ್ಮಿ(ಶ್ರೀಲೀಲಾ)ಯನ್ನು ಸೇರಿಸಬೇಕು, ಅದಕ್ಕೆ ಆಕೆಗೆ ತರಬೇತಿ ನೀಡಬೇಕು ಎಂದು ಶ್ರಮಿಸುವ ನೇಲಕೊಂಡ ಭಗವಂತ್ ಕೇಸರಿ(ಬಾಲಕೃಷ್ಣ) ಕತೆ ಚಿತ್ರದಲ್ಲಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಮಾತನಾಡುತ್ತ ಭಾವುಕರಾದರು. ಇಂತಾದೊಂದು ಅವಕಾಶ ಕೊಟ್ಟಿದ್ದಕ್ಕೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.
ವೇದಿಕೆಯಲ್ಲಿ ಮಾತನಾಡಿದ ಶ್ರೀಲೀಲಾ "ಈ ಚಿತ್ರದಲ್ಲಿ ನಾನು ವರಂಗಲ್ ಹುಡುಗಿಯಾಗಿ ನಟಿಸಿದ್ದೇನೆ. ನಾನೂ ಅದೇ ರೀತಿ ಇಲ್ಲಿಗೆ ಬಂದೆ. ಅನಿಲ್ ರಾವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಪಾತ್ರ ಕೊಟ್ಟಿದ್ದಾರೆ. ತುಂಬ ಧನ್ಯವಾದಗಳು. ನಾನು ಅನೇಕ ಸಿನಿಮಾ ಕಥೆಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಈ ಪಾತ್ರ ನನಗೆ ಹೆಚ್ಚು ಕನೆಕ್ಟ್ ಆಗಿತ್ತು. ದಿನಗಳು ಕಳೆದಂತೆ ನಾನು ಆ ಪಾತ್ರವಾಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ."
"ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ ಇರುತ್ತಿದ್ದೆ. ತಕ್ಷಣ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿಗೆ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ"
"ಈ ಚಿತ್ರದಲ್ಲಿ ಸಾಕಷ್ಟು ಒಳ್ಳೆ ದೃಶ್ಯಗಳಿವೆ. ನನ್ನ ನಿಜ ಜೀವನದಲ್ಲಿ ಅನುಭವಿಸದ ಅನುಭವಗಳನ್ನು ಬಾಲಕೃಷ್ಣ ಅವರು ಈ ಚಿತ್ರದಲ್ಲಿ ಒದಗಿಸಿದ್ದರು" ಎಂದಿದ್ದಾರೆ. ತಮ್ಮ ಜೀವನದಲ್ಲಿ ತಂದೆಯ ಅನುಪಸ್ಥಿತಿಯನ್ನು ನೆನಪಿಸಿಕೊಂಡು ಶ್ರೀಲೀಲಾ ಚಿತ್ರದಲ್ಲಿ ಭಗವಂತ್ ಕೇಸರಿ ಮಗಳು ವಿಜಯಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ.
ಶ್ರೀಲೀಲಾ 2001, ಜುಲೈ 14ರಂದು ಅಮೆರಿಕದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ಜನಿಸಿದರು. ತಾಯಿಯ ಹೆಸರು ಸ್ವರ್ಣಲತಾ. ಈ ಹಿಂದೆ ನಟಿ ಶ್ರೀಲೀಲಾ ಆಂಧ್ರದ ಉದ್ಯಮಿ ಸುಭಾಕರ್ ರಾವ್ ಸುಪ್ರಪನೇನಿ ಅವರ ಮಗಳು ಎಂದು ಎಂದು ತೆಲುಗಿನ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಆದರೆ "ಶ್ರೀಲೀಲಾ ನನ್ನ ಮಗಳಲ್ಲ. ನನ್ನ ಪತ್ನಿಯ ಜತೆ ಡೈವೋರ್ಸ್ ಆದ ನಂತರ ಆಕೆ ಹುಟ್ಟಿದ್ದಾರೆ" ಎಂದು ಸುಭಾಕರ್ ರಾವ್ ಸುಪ್ರಪನೇನಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದರು.
"ಶ್ರೀಲೀಲಾ ತಾಯಿ ತನ್ನಿಂದ ಪ್ರತ್ಯೇಕವಾಗಿ 20 ವರ್ಷಗಳೇ ಕಳೆದಿದೆ. ನನ್ನ ಪತ್ನಿಯ ಜತೆ ಡೈವೋರ್ಸ್ ಆದ ನಂತರ ಆಕೆ ಹುಟ್ಟಿದ್ದಾರೆ. ಆ ಡೈವೋರ್ಸ್ ಕೇಸ್ ಕೋರ್ಟ್‌ನಲ್ಲಿ ಇತ್ಯರ್ಥವಾಗಿಲ್ಲ. ನಾನು ಶ್ರೀಲೀಲಾಗೆ ಜನ್ಮ ನೀಡಿದ ತಂದೆಯಲ್ಲ. ವಿನಾಕಾರಣ ಶ್ರೀಲೀಲಾ ನಾನು ಆಕೆಯ ತಂದೆ ಎಂದು ಹೇಳುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ತಾಯಿ ಮಗಳು ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ" ಎಂದು ಸುಭಾಕರ್ ರಾವ್ ಸುಪ್ರಪನೇನಿ ಆರೋಪಿಸಿದ್ದರು.


Click it and Unblock the Notifications











