ತೆಲುಗಿನಲ್ಲಿ ನಟಿ ಶ್ರೀಲೀಲಾಗೆ ಬಂಪರ್‌ ಆಫರ್- ಅಲ್ಲು ಅರ್ಜುನ್ ಬ್ಯಾನರ್ಸ್ ಜೊತೆಗೆ ಒಪ್ಪಂದ!

ನಟಿ ಶ್ರೀಲೀಲಾ ಕನ್ನಡ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೂಲಕ ಶ್ರೀಲೀಲಾ ನಾಯಕಿ ಆಗಿ ಲಾಂಚ್ ಆದರು. ಸದ್ಯ ಶ್ರೀಲೀಲಾ ತೆಲುಗು ಸಿನಿಮಾ ರಂಗದ ಕಡೆಗೆ ಪಯಣ ಬೆಳೆಸಿದ್ದು, ಶ್ರೀಲೀಲಾಳಿಗೆ ಆರಂಭದಲ್ಲೇ ಬಹು ಬೇಡಿಕೆ ಸೃಷ್ಟಿ ಆಗಿದೆ.

ಗೀತಾ ಆರ್ಟ್ಸ್‌ನಿಂದ ಶ್ರೀಲೀಲಾಗೆ ಬಂಪರ್‌ ಆಫರ್!

ನಟಿ ಶ್ರೀಲೀಲ ತೆಲುಗಿನ ಪೆಳ್ಳಿ ಸಂದಡಿ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿನ ಶ್ರೀಲೀಲ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಬೋಲ್ಡ್‌ ಆಗಿದ್ದಾರೆ. ಸಿನಿಮಾ ನಿರೀಕ್ಷೆಯ ಮಟ್ಟಿಗೆ ಯಶಸ್ಸು ಸಾಧಿಸಲಿಲ್ಲ. ಆದರೆ ಈ ಚಿತ್ರದ ಮೂಲಕ ಶ್ರೀಲೀಲ ತೆಲುಗು ಪ್ರೇಕ್ಷಕರು ಮತ್ತು ಟಾಲಿವುಡ್‌ ಮಂದಿಯ ಗಮನ ಸೆಳೆದಿದ್ದಾರೆ. ಹಾಗಾಗಿ ಶ್ರೀಲೀಲಳನ್ನು ಅರಸಿ ಬಂದಿದೆ ಟಾಲಿವುಡ್‌ನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಅಲ್ಲು ಕುಟುಂಬ ಒಡೆತನದ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆ ಶ್ರೀಲೀಲಗೆ ಬಹು ದೊಡ್ಡ ಆಫರ್‌ ಬಂದಿದೆ. ಶ್ರೀಲೀಲ ಜೊತೆಗೆ ಗೀತಾ ಆರ್ಟ್ಸ್ ಸಂಸ್ಥೆ ಮೂರು ಸಿನಿಮಾಗಳ ಒಪ್ಪಂದವನ್ನು ಮಾಡಿಕೊಂಡಿದೆ. ಶ್ರೀಲೀಲಾ ಮುಂದಿನ ಮೂರು ಸಿನಿಮಾಗಳು ಗೀತಾ ಆರ್ಟ್ಸ್ ಜೊತೆಗೆ ಮಾಡಲಿದ್ದಾರೆ .

ಕನ್ನಡ ಕಿಸ್ ಮೂಲಕ ಪಡ್ಡೆಗಳ ಹೃದಯ ಗೆದ್ದಿದ್ದ ಶ್ರೀಲೀಲ!

ಕನ್ನಡದ ಕಿಸ್ ಚಿತ್ರ ಶ್ರೀಲೀಲ ಅಭಿನಯದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೆ ನಟಿ ಶ್ರೀಲೀಲ ಸಿನಿರಸಿಕರ ಗೆದ್ದರು. ನಂತರ ನಟ ಶ್ರೀ ಮುರಳಿ ಅಭಿನುಯದ ಭರಾಟೆ ಚಿತ್ರದಲ್ಲೂ ಲೀಲಾ ಲೀಲಾ ಜಾಲವಾಗಿ ಅಭಿನಯಿಸಿದ್ದರು. ಎರಡು ಸಿನಿಮಾ ಮಾಡುವ ಹೊತ್ತಿಗೆ, ಶ್ರೀಲೀಲಗೆ ತನ್ನದೇ ಆದ ಅಭಿಮಾನಿ ಬಳಗ ಹುಟ್ಟಿಕೊಂಡಿತು. ಈಗ ತೆಲುಗಿನಲ್ಲು ಶ್ರೀಲೀಲಗೆ ಒಳ್ಳೆಯ ಸ್ವಾಗತ ಸಿಕ್ಕಿದೆ. ಗೀತಾ ಆರ್ಟ್ಸ್ ಸಂಸ್ಥೆ ಶ್ರೀಲೀಲಗೆ ಮೂರು ಸಿನಿಮಾಗಳ ಆಫರ್‌ ಕೊಟ್ಟರೆ. ಟಾಲಿವುಡ್‌ನ ಹಲವು ಚಿತ್ರಗಳು ಈಕೆಯನ್ನು ಅರಸಿಕೊಂಡು ಬರುತ್ತಿವೆ. ಪೆಳ್ಳಿ ಸಂದಡಿಯಲ್ಲಿನ ಶ್ರೀಲೀಲಾ ಅಭಿನಯಕ್ಕೆ ಸಾಕಷ್ಟು ಜನ ಬೋಲ್ಡ್ ಆಗಿದ್ದಾರೆ. ಶ್ರೀಲೀಲ ಮುಂದಿನ ಚಿತ್ರವನ್ನು ನಟ ರವಿತೇಜ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸುದ್ದಿ ಅದಾಗಲೆ ತೆಲುಗಿನಲ್ಲಿ ಭಾರಿ ಸದ್ದು ಮಾಡುತ್ತಿದೆ.

Actress Sreeleela Got Movie Offer from Geetha Arts

ಆರಂಭದಲ್ಲೇ ವಿವಾದ ಸುತ್ತಿಕೊಂಡ ನಟಿ!

ಶ್ರೀಲೀಲ ಕನ್ನಡದ್ಲಲಿ ಎರಡು ಸಿನಿಮಾಗಳನ್ನ ಮಾಡಿದ್ದರು, ಆಚೆಯ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟಾಗಿ ಯಾವ ವಿಚಾರವೂ ಸದ್ದು ಮಾಡಿರಲಿಲ್ಲ. ಆದ್ರೆ ತೆಲುಗಿಗೆ ಎಂಟ್ರಿ ಕೊಡುತ್ತಲೇ ಶ್ರೀಲೀಲ ಸುತ್ತ ವಿವಾದ ಸುತ್ತಿ ಕೊಂಡಿದೆ. ಶ್ರೀಲೀಲ ತಂಡೆ, ತಾನು ಶ್ರೀಲೀಲ ತಂದೆಯಲ್ಲ, ವಿಚ್ಚೇದನದ ಬಳಿಕ ಶ್ರೀಲೀಲಾ ಹುಟ್ಟಿರೋದು. ತನ್ನ ಆಸ್ತಿಯನ್ನ ಕಬಳಿಸಲು ಈ ರೀತಿಯೆಲ್ಲಾ ಮಾಡುತ್ತಿದ್ದಾರೆ ಅಂತ ಆರೋಪ ಮಾಡಿದ್ದರು.

ಇದೆಲ್ಲದರ ನಡುವೆಯೂ ಶ್ರೀಲೀಲ ಬಣ್ಣದ ಲೋಕದಲ್ಲಿ ಬಣ್ಣದ ಚಿಟ್ಟೆಯಂತೆ ಹಾರಾಡಲು ಶುರು ಮಾಡಿದ್ದಾರೆ. ಶ್ರೀಲೀಲಳನ್ನ ಅರಸಿ ಸಾಲು-ಸಾಲು ದೊಡ್ಡ ದೊಡ್ಡ ಅವಕಾಶಗಳು ಬರ್ತಿವೆ.

Actress Sreeleela Got Movie Offer from Geetha Arts

ನಟಿ ರಶ್ಮಿಕಾ ಮಂದಣ್ಣ ಅವರಂತೆ ಶ್ರೀಲೀಲ ಕೂಡ ಪರ ಭಾಷೆಗಳಲ್ಲಿ ಸದ್ದು ಮಾಡುವ ಸೂಚನೆ ಕೊಟ್ಟಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಶ್ರೀಲೀಲ ಮುಂದೆ ಇಡೀ ಸೌತ್ ಚಿತ್ರರಂಗದ ಜೊತೆಗೆ, ಬಾಲಿವುಡ್‌ನಲ್ಲಿ ಹಾರಾಡೋ ಸೂಚನೆಯನ್ನೂ ಕೊಟ್ಟಿದ್ದಾರೆ.

More from Filmibeat

English summary
Kannada Actress Sreeleela Got Big Offer From Tollywood Famous Production House Geetha Arts,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X