ನಟಿ ಶ್ರೀಲೀಲಾ ತೆಲುಗಿನಲ್ಲಿ ಫುಲ್ ಬ್ಯುಸಿ, ಮಹೇಶ್ ಬಾಬು ಜೊತೆ ಸಿನಿಮಾ!

ಕನ್ನಡದ ನಟಿ ಶ್ರೀಲೀಲಾ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೊತೆಗೆ ಈ ಮುದ್ದು ಮೊಗದ ಚೆಲುವೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ.

ಕನ್ನಡದಲ್ಲಿ ಬ್ಯುಸಿ ಇರುವ ಶ್ರೀಲೀಲಾ ಅತ್ತ ತೆಲುಗು ಸಿನಿಮಾ ರಂಗದಲ್ಲೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶ್ರೀ ಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾ 'ಪೆಳ್ಳಿ ಸಂದ D'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ತೆಲುಗಿನಲ್ಲೂ ಶ್ರೀಲೀಲಾಗೆ ಅಭಿಮಾನಿ ಬಳಗ ಹುಟ್ಟಿ ಕೊಂಡಿದೆ. ಈಗ ತೆಲುಗಿನಲ್ಲೂ ಕೂಡ ಶ್ರೀಲೀಲಾಗೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗಿದೆ.

ಸದ್ಯ ಶ್ರೀಲೀಲಾ ಬಗ್ಗೆ ಮಾತನಾಡಲು ಕಾರಣ ಅವರ ಹೊಸ ಚಿತ್ರ. ಹೊಸ ಸಿನಿಮಾ ಸೆಟ್ಟೇರಿದ್ದೇನೋ ನಿಜ ಆದರೆ ಅದು ಕನ್ನಡ ಚಿತ್ರ ಅಲ್ಲ. ಬದಲಿಗೆ ತೆಲುಗು ಚಿತ್ರ. ಸದ್ಯ ಎರಡು ಹೊಸ ತೆಲುಗು ಸಿನಿಮಾಗಳಿಗೆ ನಟಿ ಶ್ರೀಲೀಲಾ ಹೆಸರು ಕೇಳಿ ಬಂದಿದೆ. ಈ ಹಿಂದೆಯೇ 5 ಸಿನಿಮಾಗಳಿಗೆ ಆಯ್ಕೆ ಆದ ಬಗ್ಗೆ ಸುದ್ದಿ ಬಂದಿತ್ತು. ಮುಂದಿನ ಸಿನಿಮಾಗಳ ಬಗ್ಗೆ ಮುಂದೆ ಓದಿ...

ಮಹೇಶ್ ಬಾಬು ಜೊತೆಗೆ ಶ್ರೀಲೀಲಾ!

ಮಹೇಶ್ ಬಾಬು ಜೊತೆಗೆ ಶ್ರೀಲೀಲಾ!

ಈ ಹಿಂದೆಯೇ ಶ್ರೀಲೀಲಾ ಹೆಸರು ಮಹೇಶ್ ಬಾಬು ಚಿತ್ರಕ್ಕೆ ಕೇಳಿ ಬಂದಿತ್ತು. ಈಗ ಇದು ಬಹುತೇಕ ಖಚಿತವಾಗಿದೆ. ನಟ ಮಹೇಶ್ ಬಾಬು 28ನೇ ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. SSMB28 ಚಿತ್ರದಲ್ಲಿ ಶ್ರೀಲೀಲಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಒಟ್ಟು ಅರ್ಧ ಡಜನ್ ತೆಲುಗು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿ ಇವೆ.

ರವಿತೇಜಾ ಜೊತೆಗೆ 'ಧಮಾಕ' ಸಿನಿಮಾ!

ರವಿತೇಜಾ ಜೊತೆಗೆ 'ಧಮಾಕ' ಸಿನಿಮಾ!

ನಟ ರವಿತೇಜ ಜೊತೆಗೆ 'ಧಮಾಕ' ಚಿತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ. ಇದರ ಜೊತೆಗೆ ಶ್ರೀಲೀಲಾ 'ವರಾಹಿ ಚಲನ ಚಿತ್ರಂ' ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿರೀಟಿ ರೆಡ್ಡಿ ಜೊತೆಗೆ ಒಂದು ಸಿನಿಮಾ ಮಾಡುತ್ತಾ ಇದ್ದಾರೆ. ಇದು ತೆಲುಗು ಜೊತೆಗೆ ಕನ್ನಡದಲ್ಲೂ ಬರುತ್ತಿದೆ. ಹಾಗೇ ನಿವೀನ್ ಪೋಲಿ ಶೆಟ್ಟಿಯ 'ಅನಗನಗ ಒಕ ರಾಜ' ಚಿತ್ರದಲ್ಲೂ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ.

ಬಾಲಯ್ಯ, ವೈಷ್ಣವ್ ತೇಜ್ ಜೊತೆಗೆ ಸಿನಿಮಾ!

ಬಾಲಯ್ಯ, ವೈಷ್ಣವ್ ತೇಜ್ ಜೊತೆಗೆ ಸಿನಿಮಾ!

ಇನ್ನು ನಟ ವೈಷ್ಣವ್ ತೇಜ್ ಸಿನಿಮಾದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಟೈಟಲ್ ನಿಗದಿ ಆಗಿಲ್ಲ. ಈ ಚಿತ್ರ ಸಿತಾರಾ ಎಂಟರ್ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಇದರ ಜೊತೆಗೆ ನಂದಮೂರಿ ಬಾಲಕೃಷ್ಣನ ಸಿನಿಮಾದಲ್ಲೂ ನಟಿಸುತ್ತಾರೆ. ಈ ಚಿತ್ರಲ್ಲೇ ಬಾಲಯ್ಯನ ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅನಿಲ್ ರವಿಪುಡಿ ನಿರ್ದೇಶನವಿದೆ.

ನಟ ನಿತಿನ್ ಜೊತೆಗೆ ಶ್ರೀಲೀಲಾ ಹೊಸ ಚಿತ್ರ!

ನಟ ನಿತಿನ್ ಜೊತೆಗೆ ಶ್ರೀಲೀಲಾ ಹೊಸ ಚಿತ್ರ!

ಸದ್ಯ ಕನ್ನಡದ ನಟಿ ಶ್ರೀಲೀಲಾ ತೆಲುಗಿನಲ್ಲಿ ಸಿಕ್ಕಪಟ್ಟೆ ಬ್ಯುಸಿ. ಸಾಲು, ಸಾಲಾಗಿ ಶ್ರೀಲೀಲಾಳ ತೆಲುಗು ಚಿತ್ರಗಳೇ ಪ್ರಕಟ ಆಗುತ್ತಿದೆ. ಈಗ ತೆಲುಗು ನಟ ನಿತಿನ್ ಜೊತೆಗೆ ಹೊಸ ಸಿನಿಮಾ ಮಾಡುತ್ತಾ ಇದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. 'ಪ್ರೊಡಕ್ಷನ್ ನಂಬರ್ 9' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದೆ. ಚಿತ್ರದ ಮುಹೂರ್ತದ ಫೋಟೊಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ರಶ್ಮಿಕಾ ನಂತ್ರ ಶ್ರೀಲೀಲಾ ಹವಾ!

ರಶ್ಮಿಕಾ ನಂತ್ರ ಶ್ರೀಲೀಲಾ ಹವಾ!

ನಟಿ ಶ್ರೀಲೀಲಾ ಕನ್ನಡದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದರೂ, ಈಗ ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ಕನ್ನಡದಲ್ಲಿ ಇಲ್ಲಿ ತನಕ ಮೂರು ಚಿತ್ರಗಳಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. 'ಕಿಸ್', 'ಭರಾಟೆ' ಮತ್ತು 'ಬೈ ಟು ಲವ್' ಚಿತ್ರಗಳಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ಆದರೆ ಶ್ರೀಲೀಲಾ ಅಭಿನಯದ ತೆಲುಗಿನ 'ಪೆಳ್ಳಿ ಸಂದ ಡಿ' ಚಿತ್ರ ಮಾತ್ರ ರಿಲೀಸ್ ಆಗಿದೆ. ಈಗ ತೆಲುಗು ಚಿತ್ರಗಳ ಸಂಖ್ಯೆ 6ಕ್ಕೆ ಏರಿದೆ.

More from Filmibeat

English summary
Actress Sreeleela In Huge Demand: Her Next Movie With Mahesh Babu, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X