ಹೀರೋಗಳಿಗೂ ಟಕ್ಕರ್ ಕೊಡುವಂತಿದೆ ನಟಿ ಶ್ರೀಲೀಲಾ ಸಂಭಾವನೆ: ಕಿಸ್ ಬೆಡಗಿಯ ಕಾಲ್‌ಶೀಟ್ ಸಿಗೋದು ತುಂಬಾ ಕಷ್ಟ!

ಸದ್ಯಕ್ಕೆ ತೆಲುಗಿನಲ್ಲಿ ಬ್ಯುಸಿ ನಟಿ ಯಾರು ಎಂದು ಕೇಳಿದರೇ ಪ್ರೇಕ್ಷಕರಷ್ಟೇ ಅಲ್ಲ ಟಾಲಿವುಡ್ ಕೂಡ ಬೆಎಳು ಮಾಡುವುದು ಕನ್ನಡತಿ ಶ್ರೀಲೀಲಾ ಕಡೆಗೆನೇ. ಹೌದು... ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದ ಈ ಬೆಡಗಿ ಇಂದು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಲ್ಲಿನ ಮನೆಮಗಳಾಗಿ ಬದಲಾಗಿದ್ದಾರೆ.

'ಇತ್ತೀಚೆಗೆ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ 'ಭಗವಂತ ಕೇಸರಿ' ಸಿನಿಮಾದಲ್ಲಿ ಶ್ರೀಲೀಲಾ ನಟನೆಗೆ ತೆಲುಗು ಪ್ರೇಕ್ಷಕ ಫಿದಾ ಆಗಿದ್ದಾನೆ. ಅಕ್ಟೋಬರ್ 19 ರಂದು ಥಿಯೇಟರ್‌ಗೆ ಬಂದ ಈ ಸಿನಿಮಾದಲ್ಲಿ ಇಬ್ಬರ ಬಾಂಧವ್ಯ ನೋಡಿ ಎಲ್ಲರೂ ಭಾವುಕರಾಗಿದ್ದಾರೆ. ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಅನಿಲ್ ರವಿಪುಡಿ ಅವರ ಈ ಸಿನಿಮಾದಲ್ಲಿ ಶ್ರೀಲೀಲಾ ಹೈಲೇಟ್ ಆಗಿದ್ದಾರೆ.

Actress Sreeleela Increases Her Remuneration After Bhagavanth Kesaris Success

ಭಗವಂತ ಕೇಸರಿ ಬಳಿಕ ಹೆಚ್ಚಾಯಿತು ಶ್ರೀಲೀಲಾ ಸಂಭಾವನೆ

ಭಗವಂತ ಕೇಸರಿ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಇಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ, ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಗುವ ಅವಕಾಶದಲ್ಲಿ ತಮ್ಮ ಪ್ರತಿಭೆಯನ್ನು ಸಾಭೀತುಪಡಿಸುತ್ತಾ ಪ್ರೇಕ್ಷಕರ ಹೃದಯವನ್ನು ಗೆದ್ದಿರುವ ಇವರ ಮುಂದೆಯೂ ಸಿನಿಮಾಗಳ ಲೈನ್ ಇದೆ.

ಸದ್ಯ ಭಗವಂತ ಕೇಸರಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಶ್ರೀಲೀಲಾ ಅವರು ರವಿತೇಜಾ ಅವರ ಜೊತೆಗಿನ 'ಧಮಾಕಾ' ಸಿನಿಮಾ ತೆರೆಕಂಡಾಗಿನಿಂದಲೂ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಲೇ ಇದ್ದಾರೆ. ಇಂಡಸ್ಟ್ರಿಯಲ್ಲಿ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು ಒಂದು ಗಂಟೆಗೆ 4 ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ.

ಕನ್ನಡದ ಕಿಸ್ ಮೂಲಕ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರು ಲಕ್ಷಗಳಲ್ಲಿ ತಮ್ಮ ಸಂಭಾವನೆ ಪಡೆಯುತ್ತಿದ್ದರು., ಅದು ಈಗ ಕೋಟಿಗಳಿಗೆ ಏರಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಗವಂತ ಕೇಸರಿಯಲ್ಲಿ ಶ್ರೀಲೀಲಾ ಅವರಿಗೆ ಸಂಭಾವನೆಯಾಗಿ 1.5 ಕೋಟಿ ರೂಪಾಯಿ ದೊರೆತಿದೆ. ಇದರ ಬೆನ್ನಲ್ಲೆ ಅವರು ತಮ್ಮ ಸಂಭಾವನೆಯನ್ನು 3 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದ ಕೆಲವು ಸ್ಟಾರ್ ನಟರ ಸಂಭಾವನೆಗೆ ಸಮನಾಗಿದೆ.

Actress Sreeleela Increases Her Remuneration After Bhagavanth Kesaris Success

ಭಗವಂತ ಕೇಸರಿ ಮತ್ತು ಶ್ರೀಲೀಲಾ

ಭಗವಂತ ಕೇಸರಿ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಶ್ರೀಲೀಲಾ ಮತ್ತು ಬಾಲಯ್ಯ ಅವರ ತೆರೆಯ ಮೇಲಿನ ಬಾಂಧವ್ಯ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ರವಿತೇಜಾ ಅವರ ಟೈಗರ್ ನಾಗೇಶ್ವರ ರಾವ್ ಮತ್ತು ದಳಪತಿ ವಿಜಯ್ ಅವರ ಲಿಯೋ ಸಿನಿಮಾಗಳ ಜೊತೆಗೆ ಪೈಪೋಟಿ ಇದ್ದರೂ ಕೂಡ ಭಗವಂತ ಕೇಸರಿ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು. 11 ನೇ ದಿನದಂದು, ಭಗವಂತ ಕೇಸರಿ ಬಾಕ್ಸ್ ಆಫೀಸ್‌ನಲ್ಲಿ 130.01 ಕೋಟಿ ರೂಪಾಯಿ ಗಳಿಸಿದೆ.

ಶ್ರೀಲೀಲಾ ಸಿನಿ ಜರ್ನಿ

ಶ್ರೀಲೀಲಾ 2019 ರಲ್ಲಿ ಕಿಸ್ ಕನ್ನಡ ಸಿನಿಮಾದೊಂದಿಗೆ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟರು. ಇದಾದ ಬಳಿಕ ಶ್ರೀಮರುಳಿ ಅವರ ಎದುರು ಭರಾಟೆಯಲ್ಲಿ ಕಾಣಿಸಿಕೊಂಡರು. 2021 ರಲ್ಲಿ ಅವರು ಪೆಳ್ಳಿ ಸಂದಾಡ್ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ಪ್ರೇಕ್ಷಕರು ಆಕೆಯನ್ನು ಕೈ ಬಿಟ್ಟಿಲ್ಲ.

More from Filmibeat

English summary
Actress Sreeleela Increases Her Remuneration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X