ಟಾಲಿವುಡ್ ಸ್ಟಾರ್ ನಟನ ಜೊತೆ ಕೈ ಜೋಡಿಸಿ ಕಣ್ಣು ಹೊಡೆದ ಶ್ರೀಲೀಲಾ!

ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿ ಶ್ರೀಲೀಲಾ ಹವಾ ಜೋರಾಗಿದೆ. ಒಂದಲ್ಲ ಎರಡಲ್ಲ ಏಳೆಂಟು ಸಿನಿಮಾಗಳಲ್ಲಿ ಬೆಂಗಳೂರು ಬೆಡಗಿ ಮಿಂಚುತ್ತಿದ್ದಾರೆ. ಬಾಲಕೃಷ್ಣ, ನಿತಿನ್, ಪವನ್ ಕಲ್ಯಾಣ್, ಮಹೇಶ್‌ ಬಾಬುರಂತಹ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. ಸದ್ಯ ಬಾಲಕೃಷ್ಣ ನಟನೆಯ ಸಿನಿಮಾ ಶೂಟಿಂಗ್‌ನಲ್ಲಿ 'ಕಿಸ್' ಭಾಗಿ ಆಗಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಅನಿಲ್ ರವಿಪೂಡಿ ಖಚಿತಪಡಿಸಿದ್ದಾರೆ.

ಬಾಲಕೃಷ್ಣ ನಟನೆಯ 108ನೇ ಚಿತ್ರದಲ್ಲಿ ಶ್ರೀಲೀಲಾ ನಟಿಸ್ತಿದ್ದಾರೆ. ಶೈನ್ ಸ್ಕ್ರೀನ್ಸ್ ಬ್ಯಾನರ್‌ನಲ್ಲಿ ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. ಕೆಲ ದಿನಗಳಿಂದ ಬಾಲಕೃಷ್ಣ ಚಿತ್ರದಲ್ಲಿ ಶ್ರೀಲೀಲಾ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಅದು ಈಗ ಪಕ್ಕಾ ಆಗಿದೆ. ಬಾಲಯ್ಯ ಜೊತೆ ಕೈ ಜೋಡಿಸಿ ಶ್ರೀಲೀಲಾ ಕಣ್ಣು ಹೊಡೆಯುತ್ತಿರುವ ಫೋಟೊ ಹಂಚಿಕೊಂಡು ನಿರ್ದೇಶಕರು ಈ ವಿಚಾರವನ್ನು ತಿಳಿಸಿದ್ದಾರೆ. ಚಿತ್ರದಲ್ಲಿ ಬಾಲಯ್ಯ ಮಗಳ ಪಾತ್ರದಲ್ಲಿ ಶ್ರೀಲೀಲಾ ನಟಿಸ್ತಿದ್ದಾರೆ.

Actress Sreeleela join hands with Nandamuri Balakrishna for NBK108

ರಾಜಾ ದಿ ಗ್ರೇಟ್, ಎಫ್‌-2, ಸರಿಲೇರು ನೀಕೆವ್ವರು, ಎಫ್‌-3 ಫನ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಅನಿಲ್ ಗೆದ್ದಿದ್ದಾರೆ. ಇದೀಗ ಬಾಲಯ್ಯ ಹೀರೋ ಆಗಿ ಮತ್ತೊಂದು ಆಕ್ಷನ್ ಧಮಾಕ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ಅನಿಲ್ ಸ್ಟೈಲ್ ಕಾಮೆಡಿ ಕೂಡ ಇರಲಿದೆ. ಚಿತ್ರದಲ್ಲಿ ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆಯಂತೆ. NBK 108 ಎನ್ನುವ ಟೆಂಟಿಟೀವ್ ಟೈಟಲ್‌ನಲ್ಲಿ ಇನ್ನು ಹೆಸರಿಡದ ಚಿತ್ರದ ಶೂಟಿಂಗ್ ನಡೀತಿದೆ.

ಸದ್ಯ ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಶೂಟಿಂಗ್ ಸೆಟ್‌ಗೆ ಶ್ರೀಲೀಲಾ ಎಂಟ್ರಿಕೊಟ್ಟಿದ್ದಾರೆ. ಎಸ್‌. ತಮನ್ ಸಂಗೀತ, ಸಿ. ರಾಮ್ ಪ್ರಸಾದ್ ಸಿನಿಮಾಟೋಗ್ರಫಿ, ವಿ. ವೆಂಕಟ್ ಆಕ್ಷನ್ ಕೊರಿಯೋಗ್ರಫಿ ಚಿತ್ರಕ್ಕಿದೆ. ಕಳೆದ ತಿಂಗಳೇ ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು. ತಾರಕ ರತ್ನ ಅಗಲಿಕೆಯಿಂದ ಕೊಂಚ ತಡವಾಗಿತ್ತು. ಚಿತ್ರದಲ್ಲಿ ನೋಹಾ ಫತೇಹಿ ವಿಲನ್ ಆಗಿ ನಟಿಸ್ತಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಶ್ರೀಲೀಲಾ ಟಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಶೈನ್ ಆಗ್ತಿದ್ದಾರೆ.

Actress Sreeleela join hands with Nandamuri Balakrishna for NBK108

ಕನ್ನಡ 'ಕಿಸ್' ಚಿತ್ರದಲ್ಲಿ ಮೊದಲಿಗೆ ನಟಿಸಿದ ಶ್ರೀಲೀಲಾ ನಂತರ ತೆಲುಗಿನ 'ಪೆಳ್ಳಿ ಸಂದಡಿ' ಚಿತ್ರಕ್ಕೆ ಆಯ್ಕೆ ಆಗಿದ್ದರು. ಆ ಸಿನಿಮಾದಲ್ಲಿ ಶ್ರೀಲೀಲಾ ಅಂದ ಅಭಿನಯ ನೋಡಿದ ಟಾಲಿವುಡ್ ಫಿಲ್ಮ್ ಮೇಕರ್ಸ್ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಡಲು ಆರಂಭಿಸಿದರು. ರವಿತೇಜಾ ಜೋಡಿಯಾಗಿ ಶ್ರೀ ಧಮಾಕ ಚಿತ್ರದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಗೆ ಶ್ರೀಲೀಲಾ ಭಾರೀ ಪೈಪೋಟಿ ಕೊಡುತ್ತಿರುವುದು ಸುಳ್ಳಲ್ಲ.

More from Filmibeat

English summary
Actress Sreeleela join hands with Nandamuri Balakrishna for NBK108. Sreeleela will play a key role in the film as Balakrishna's daughter in this movie. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X