'ನಾಗವಲ್ಲಿ' ಅವತಾರದಲ್ಲಿ ಶ್ರೀಲೀಲಾ; ಕನ್ನಡಕ್ಕೆ ಬನ್ನಿ ಮೇಡಂ ಎಂದ ಫ್ಯಾನ್ಸ್

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು, ತಮಿಳು ಸಿನಿಮಾಗಳತ್ತ ಹೆಚ್ಚು ಫೋಕಸ್ ಮಾಡಿದ್ದಾರೆ. ಕನ್ನಡ ಸಿನಿಮಾಗಳನ್ನು ಮರೆತೇಬಿಟ್ಟಿದ್ದಾರೆ. ತೆಲುಗು ಟಾಪ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡಿದ್ದಾರೆ. ಸದ್ಯ ಕೈಯಲಿದ್ದ ಸಿನಿಮಾಗಳೆಲ್ಲಾ ಖಾಲಿಯಾಗಿದೆ.

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ರವಿತೇಜಾ, ಮಹೇಶ್ ಬಾಬು, ಬಾಲಕೃಷ್ಣರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು. ಪವನ್ ಕಲ್ಯಾಣ್ ಜೊತೆಗೂ ಒಂದು ಚಿತ್ರದಲ್ಲಿ ಕಿಸ್ ಬೆಡಗಿ ನಟಿಸುತ್ತಿದ್ದಾರೆ. ಆದರೆ ಪವನ್ ರಾಜಕೀಯರಂಗದಲ್ಲಿ ಹೆಚ್ಚು ಬ್ಯುಸಿಯಾಗಿದ್ದರಿಂದ ಆ ಸಿನಿಮಾ ಸದ್ಯಕ್ಕೆ ನಿಂತಿದೆ.

Actress Sreeleela Spotted At An Ad Shoot in Hanu Raghavapudi direction

ಚಿಕ್ಕಂದಿನಿಂದೇ ಭರತನಾಟ್ಯ ಕಲಿತ ಶ್ರೀಲೀಲಾ ಕೆಲವು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದರು. ಕನ್ನಡದಲ್ಲಿ ಮೊದಲು 'ಕಿಸ್' ಚಿತ್ರದಲ್ಲಿ ನಟಿಸಿದ್ದರು. ಎ. ಪಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ವಿರಾಟ್ ಜೋಡಿಯಾಗಿ ಮಿಂಚಿದ್ದರು. ಬಳಿಕ 'ಭರಾಟೆ' ಚಿತ್ರದಲ್ಲಿ ಶ್ರೀಮುರಳಿಗೆ ಜೊತೆಯಾಗಿದ್ದರು. ನಂತರ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ಬಳಿಕ 'ಬೈಟು ಲವ್' ಚಿತ್ರದಲ್ಲಿ ಮಾತ್ರ ಬಣ್ಣ ಹಚ್ಚಿದ್ದರು.

ಮಾಜಿ ಸಚಿತ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚೊಚ್ಚಲ ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತಿದೆ. ಇದೆಲ್ಲದರ ನಡುವೆ ಆಕೆ ತಮಿಳು ಕಥೆಗಳನ್ನು ಕೇಳುತ್ತಿದ್ದಾರೆ. ಒಳ್ಳೆ ಅವಕಾಶ ಸಿಕ್ಕರೆ ಕಾಲಿವುಡ್‌ಗೆ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ. ಆದರೆ ಟಾಲಿವುಡ್‌ನಲ್ಲಿ ದಿಢೀರ್ ಕ್ರೇಜ್ ಸೃಷ್ಟಿಸಿಕೊಂಡಿದ್ದ ಶ್ರೀ ಅಷ್ಟೇ ಬೇಗ ಸೈಲೆಂಟ್ ಆಗಿಬಿಟ್ಟಿದ್ದಾರೆ. ಇನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.

ಹೊಸ ಹೊಸ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಲೀಲಾ ಹಂಚಿಕೊಳ್ಳುತ್ತಾರೆ. ಆ ಫೋಟೊಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಲಂಗಾ ದಾವಣಿಯಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಒಂದಷ್ಟು ಫೋಟೊ ಹಾಗೂ ವಿಡಿಯೋ ಪೋಸ್ಟ್ ಮಾಡಿದ್ದಾರೆ. 'ಸೀತಾರಾಮಂ' ಸಿನಿಮಾ ಖ್ಯಾತಿಯ ಹನು ರಾಘವಪುಡಿ ನಿರ್ದೇಶನದಲ್ಲಿ ನಟಿಸಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಲಾಟೀನು, ಸೌದೆ ಒಲೆ, ಹಿತ್ತಾಳೆ ಪಾತ್ರೆ ಪಡಗ ಎಲ್ಲವನ್ನು ನೋಡಬಹುದು.

Actress Sreeleela Spotted At An Ad Shoot in Hanu Raghavapudi direction

ಉದ್ದನೆಯ ಕೂದಲು, ಎರಡು ಜುಟ್ಟು ಒಟ್ಟಾರೆ ಶ್ರೀಲೀಲಾ ಲುಕ್ ಹಲವು ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಇನ್ನು ಫೋಟೊಗಳಲ್ಲಿ ಆಕೆಯ ನಗು, ಎಮೋಷನ್ ಎಲ್ಲವನ್ನು ನೋಡಬಹುದು. ಸಣ್ಣದೊಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು ಅದರಲ್ಲಿ ನಾಗವಲ್ಲಿ ರೀತಿ ಖಡಕ್ ಆಗಿ ಕಿರುಚಿರುವಂತೆ ಕಾಣಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಹನು ರಾಘವಪುಡಿ 'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟಿದ್ದರು.

ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸೀತಾರಾಮಂ' ಚಿತ್ರ ಸೂಪರ್ ಹಿಟ್ ಆಗಿತ್ತು. ಸದ್ಯ ಪ್ರಭಾಸ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಹನು ರಾಘವಪುಡಿ ಸಿದ್ಧತೆ ನಡೆಸಿದ್ದಾರೆ. ಈ ಗ್ಯಾಪ್‌ನಲ್ಲಿ ಶ್ರೀಲೀಲಾ ಜೊತೆ ಇದ್ಯಾವ ಸಿನಿಮಾ? ಎಂದು ಕೆಲವರು ಶಾಕ್ ಆಗಿದ್ದಾರೆ. ಯಾವುದೇ ಸುಳಿವು ನೀಡದೇ ಚಿತ್ರೀಕರಣದ ತನಕ ಹೋಗಿಬಿಟ್ರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಆದರೆ ಈ ಬಗ್ಗೆ ಸ್ವತಃ ಶ್ರೀಲೀಲಾ ಮಾಹಿತಿ ನೀಡಿದ್ದಾರೆ.

ಇದೊಂದು ಜಾಹೀರಾತು ಚಿತ್ರೀಕರಣ ಎಂದು ಕಿಸ್ ಬೆಡಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳಂತೂ ಶ್ರೀಲೀಲಾ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದಷ್ಟು ಬೇಗ ಕನ್ನಡದಲ್ಲಿ ಸಿನಿಮಾ ಮಾಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Actress Sreeleela retro look in latest Ad Shoot goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X