ಆ ಯೂಟ್ಯೂಬರ್ ನನ್ನನ್ನು ಕೆಟ್ಟದಾಗಿ ಬಳಸಿಕೊಂಡ: ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ನಟಿ

ತೆಲುಗು ಯೂಟ್ಯೂಬರ್ ಶ್ರೀಕಾಂತ್ ರೆಡ್ಡಿಯನ್ನು ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಕರಾಟೆ ಕಲ್ಯಾಣಿ ನಡು ರಸ್ತೆಯಲ್ಲಿ ಹೊಡೆದ ಪ್ರಕರಣ ದಿನೇ ದಿನೇ ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದೆ.

ಶ್ರಿಕಾಂತ್ ರೆಡ್ಡಿ, ಯುವತಿಯರೊಟ್ಟಿಗೆ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಆತನ ಮನೆಗೆ ತೆರಳಿದ್ದ ನಟಿ ಕರಾಟೆ ಕಲ್ಯಾಣಿ ಹಾಗೂ ಇತರರು ಈ ಬಗ್ಗೆ ಪ್ರಶ್ನೆ ಮಾಡಿ, ಯುವತಿಯರೊಟ್ಟಿಗೆ ಪ್ರಾಂಕ್ ವಿಡಿಯೋ ಮಾಡುವುದು ನಿಲ್ಲುವಂತೆ ಹೇಳಿದ್ದರು. ನಂತರ ಶ್ರೀಕಾಂತ್ ರೆಡ್ಡಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮೇಲೆ ಹಲ್ಲೆ ಮಾಡಿದ್ದರು.

ನನ್ನನ್ನು ಕೆಟ್ಟದಾಗಿ ಮುಟ್ಟಿದ, ಹಣ ಕೊಡುತ್ತೇನೆ ನನ್ನೊಟ್ಟಿಗೆ ಸಹಕರಿಸು ಎಂದು ಕೇಳಿದ ಅದಕ್ಕಾಗಿಯೇ ಇವನನ್ನು ಹೊಡೆದಿದ್ದೇನೆ ಎಂದು ನಟಿ ಕರಾಟೆ ಕಲ್ಯಾಣಿ ವಿಡಿಯೋದಲ್ಲಿ ಹೇಳಿದ್ದರು. ಆದರೆ ಶ್ರೀಕಾಂತ್ ರೆಡ್ಡಿ ಬೇರೆಯದ್ದೇ ವಿಷಯ ಹೇಳಿದರು. ಕರಾಟೆ ಕಲ್ಯಾಣಿ ನನ್ನಿಂದ ಹಣ ವಸೂಲಿಗೆ ಬಂದಿದ್ದಳು. ಹಣ ನೀಡದೇ ಇದ್ದರೆ ಮಹಿಳಾ ಕಲ್ಯಾಣ ಇಲಾಖೆಗೆ ನಿನ್ನ ಮೇಲೆ ದೂರು ಕೊಡಿಸುತ್ತೇನೆ, ಮಹಿಳೆಯರಿಂದ ಪ್ರತಿಭಟನೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದಿದ್ದರು.

Actress Swathi Naidu Alleged That Shrikanth Reddy Used Her Badly

ಬಳಿಕ ಇಬ್ಬರೂ ಹೋಗಿ ಹೈದರಾಬಾದ್‌ನ ಯೂಸಫ್‌ಗಡ ಪೊಲೀಸ್ ಠಾಣೆಯಲ್ಲಿ ಪರಸ್ಪರರ ಮೇಲೆ ದೂರು ದಾಖಲು ಮಾಡಿದ್ದರು. ಆ ನಂತರ ನಟಿ ಕರಾಟೆ ಕಲ್ಯಾಣಿ ಅಲ್ಲಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆ ಬಳಿಕ ಕರಾಟೆ ಕಲ್ಯಾಣಿ ವಿರುದ್ಧವೇ ಸತತ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿ ಎಫ್‌ಐಆರ್ ಸಹ ದಾಖಲಾಯಿತು. ಕರಾಟೆ ಕಲ್ಯಾಣಿ, ಅಕ್ರಮವಾಗಿ ಮಗುವನ್ನು ಖರೀದಿ ಮಾಡಿದ್ದಾರೆಂಬ ಆರೋಪ ಸಹ ಮಾಡಲಾಗಿ, ಅಧಿಕಾರಿಗಳು ಕರಾಟೆ ಕಲ್ಯಾಣಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದರು.

ಈಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ನಟಿ, ಯೂಟ್ಯೂಬರ್ ಸ್ವಾತಿ ನಾಯ್ಡು ಎಂಬುವರು ಶ್ರೀಕಾಂತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಕಾಂತ್ ರೆಡ್ಡಿ ಮಾತ್ರವೇ ಅಲ್ಲದೆ ಇತರೆ ಕೆಲವು ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧವೂ ಆರೋಪ ಮಾಡಿದ್ದಾರೆ.

ನನ್ನನ್ನು ಅಶ್ಲೀಲವಾಗಿ ಬಳಸಿಕೊಂಡು ಕೆಲವು ಯೂಟ್ಯೂಬ್ ಚಾನೆಲ್‌ಗಳು ವೀವ್ಸ್ ಹೆಚ್ಚು ಮಾಡಿಕೊಂಡವು. ''ಎಕ್ಸ್‌ಪೋಸ್ ಮಾಡು, ಆ ಡ್ರೆಸ್ ಹಾಕಿಕೊ, ಶಾರ್ಟ್ಸ್ ಹಾಕಿಕೊ, ಬ್ರಾ ಹಾಕಿಕೊ ಎಂದೆಲ್ಲ ಹೇಳಿ ಎಪಿಕ್ ಮೀಡಿಯಾದವರು, ಯೂಟ್ಯೂಬರ್ ವೆಂಕಟ್ ಎಲ್ಲ ನನ್ನನ್ನು ಬಳಸಿಕೊಂಡರು. ಇನ್ನು ಶ್ರೀಕಾಂತ್ ರೆಡ್ಡಿ ಕೂಡ ನನ್ನನ್ನು ಬಳಸಿಕೊಂಡ. ಆತ ಹಗ್ ಮಾಡುವುದು, ಕಿಸ್ ಮಾಡುವುದು ಎಲ್ಲವನ್ನೂ ಮಾಡಿದ. ನಾನೂ ಸಹ ಚಾನೆಲ್‌ಗಾಗಿ ಎಂದು ಮಾಡಿದೆ. ಆದರೆ ನನ್ನನ್ನು ಬಳಸಿಕೊಂಡು ಕೊನೆಗೆ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ'' ಎಂದಿದ್ದಾರೆ ಸ್ವಾತಿ ನಾಯ್ಡು.

''ಅವರು ನನ್ನನ್ನು ಅವರಿಗೆ ಬೇಕಾದಂತೆ ಬಳಸಿಕೊಂಡರು. ಸಾವಿರ, ಐದು ಸಾವಿರ ಹಣವನ್ನಷ್ಟೆ ಅವರು ನನಗೆ ಕೊಡುತ್ತಿದ್ದರು. ಆದರೆ ಕೊನೆಗೆ ನನ್ನ ಕರಿಬೇವಿನ ರೀತಿ ಪಕ್ಕಕ್ಕೆ ಬಿಸಾಡಿದರು. ನನ್ನಿಂದ ಉಪಯೋಗ ಎಂದಮೇಲೆ ನನ್ನಿಂದ ವಿಡಿಯೋ ಏಕೆ ಮಾಡಿಸಿಕೊಂಡಿರಿ. ನನ್ನ ವಿಡಿಯೋಗಳನ್ನು ನಿಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಏಕೆ ಇಟ್ಟಿದ್ದೀರಿ'' ಎಂದು ಪ್ರಶ್ನೆ ಮಾಡಿದ್ದಾರೆ ಸ್ವಾತಿ ನಾಯ್ಡು.

More from Filmibeat

English summary
Actress Swathi Naidu alleged that you tuber Shrikanth Reddy and some other Telugu youtubers used her badly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X