ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾ
ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ತಮನ್ನಾ ಭಾಟಿಯಾ. ತೆಲುಗು, ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ತಮನ್ನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 15 ವರ್ಷಗಳು ಕಳೆದಿವೆ. 15 ವರ್ಷ ಪೂರೈಸಿದ ತಮನ್ನಾಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ಟಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಸಮಂತಾ ಸಹ ತಮನ್ನಾಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿ ಅಭಿನಂದಿಸಿದ್ದಾರೆ.
ಮಿಲ್ಕಿ ಬ್ಯೂಟಿ ಅಂತಾನೆ ಖ್ಯಾತಿಗಳಿಸಿರುವ ಮುಂಬೈನ ಸುಂದರಿ ತಮನ್ನಾ ದಕ್ಷಿಣ ಭಾರತೀಯ ಚಿತ್ರಪ್ರಿಯರ ಹಾಟ್ ಫೇವರಿಟ್ ನಟಿ. 15 ವರ್ಷದ ಚಿತ್ರರಂಗ ಜೀವನದಲ್ಲಿ ತಮನ್ನಾ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ತಮನ್ನಾ ಇಂದು ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದ ಟಾಪ್ ಒನ್ ನಟಿಯರಲ್ಲಿ ಒಬ್ಬರಾಗಿದ್ದಾರೆ. 15 ವರ್ಷದ ತಮನ್ನಾ ಚಿತ್ರರಂಗ ಪಯಣದ ಒಂದು ನೋಟ. ಮುಂದೆ ಓದಿ..

ಬಾಲಿವುಡ್ ನಿಂದ ಸಿನಿ ಪಯಣ ಪ್ರಾರಂಭ
ತಮನ್ನಾ ಬಣ್ಣದ ಲೋಕದ ಪಯಣ ಪ್ರಾರಂಭವಾಗಿದ್ದು ಬಾಲಿವುಡ್ ನಿಂದ. 'ಚಾಂದ್ ಸ ರೋಷನ್ ಚೆಹರಾ' ಚಿತ್ರದ ಮೂಲಕ ತಮನ್ನಾ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆಗಿನ್ನು ತಮನ್ನಾಗೆ 15 ವರ್ಷ. ಬಾಲಿವುಡ್ ಚಿತ್ರರಂಗದ ಮೂಲಕ ಎಂಟ್ರಿಯಾದ ತಮನ್ನಾಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು ತೆಲುಗು ಸಿನಿಮಾರಂಗ. ಬಾಲಿವುಡ್ ನಲ್ಲಿ ಅಭಿನಯಿಸಿದ ಮೊದಲ ಸಿನಿಮಾವೇ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಾಣುತ್ತೆ.

ಸ್ರೀ ಸಿನಿಮಾ ಮೂಲಕ ಟಾಲಿವುಡ್ ಎಂಟ್ರಿ
ಬಾಲಿವುಡ್ ನಲ್ಲಿ ಮೊದಲ ಸಿನಿಮಾ ಸೋಲುತ್ತಿದ್ದಂತೆ ತಮನ್ನಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಸ್ರೀ ಸಿನಿಮಾದ ಮೂಲಕ ತೆಲುಗು ಸಿನಿಪ್ರಿಯರ ಮುಂದೆ ಬರುತ್ತಾರೆ. ಆನಂತರ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಾರೆ. ತೆಲುಗಿನಲ್ಲಿ ಹ್ಯಾಪಿ ಡೇಸ್ ಸಿನಿಮಾ ತಮನ್ನಾ ಭಾಟಿಯಾಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಡುತ್ತೆ. ಆನಂತರ ತಮನ್ನಾ ತೆಲುಗಿನಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ.

60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ
ತಮನ್ನಾ ಭಾಟಿಯಾ 15 ವರ್ಷದಲ್ಲಿ 60ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ಜಾಗ್ವಾರ್ ಮತ್ತು ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆಯು ಬಂದಿದ್ದಾರೆ.ಈ ಎರಡೂ ಸಿನಿಮಾದಲ್ಲಿ ತಮನ್ನಾ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.
ತಮನ್ನಾಗೆ ಸಮಂತಾ ಶುಭಾಶಯ
ಸಾಮಾನ್ಯವಾಗಿ ನಟಿಮಣಿಯರ ಜೊತೆ ಪೈಪೂಟಿ ಜಾಸ್ತಿ ಇರುತ್ತೆ. ಈ ಪೈಪೂಟ್ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗುತ್ತೆ. ಆದರೆ ತಮನ್ನಾ ಮತ್ತು ಅಂದರೆ ಎಲ್ಲರಿಗೂ ಪ್ರೀತಿ. ತಮನ್ನಾ ಬಗ್ಗೆ ನಟಿ ಸಮಂತಾ ಮೆಚ್ಚುಗೆಯ ಮಾತುಗಳನ್ನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
"15 ವರ್ಷಗಳ ಅದ್ಭುತ ವರ್ಷಗಳು. ಅತ್ಯಂತ ಸುಂದರವಾದ ಮುಖಗಳಲ್ಲಿ ಒಂದು. ನನಗೆ ಗೊತ್ತು ತಮನ್ನಾ ಎಷ್ಟು ಶ್ರಮಜೀವಿ ಮತ್ತು ಪ್ರಾಮಾಣಿಕ ವ್ಯಕ್ತಿ ಎನ್ನುವುದು. ತೆರೆಮೇಲೆ ಮಿಂಚುಹರಿಸಿದವರು. ತಮನ್ನಾ ತೆರೆ ಮೇಲೆ ಇದ್ದರೆ ನೀವು ಒಂದು ಕ್ಷಣವು ನೋಟ ಬದಲಾಯಿಸಲು ಸಾಧ್ಯವಿಲ್ಲ. ಅಭಿನಂದನೆಗಳು ಡಾರ್ಲಿಂಗ್" ಎಂದು ಬರೆದುಕೊಂಡಿದ್ದಾರೆ.

ತಮನ್ನಾ ಕಾಮನ್ ಡಿಪಿ ಬಿಡುಗಡೆ
15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮಕ್ಕೆ ತಮನ್ನಾ ಅವರ ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ. ತಮನ್ನಾ ಅಭಿನಯದ ಎಲ್ಲಾ ಸಿನಿಮಾಗಳ ಫೋಟೋಗಳನ್ನು ಸೇರಿಸಿ ಒಂದು ಫೋಟೋ ತಯಾರಿಸಿ ರಿಲೀಸ್ ಮಾಡಲಾಗಿದೆ. ಈ ಡಿಪಿಯನ್ನು ಎಲ್ಲರೂ ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.


Click it and Unblock the Notifications











