ಬಿಕಿನಿ ಬಿಟ್ಟು ಕಾವಿ ತೊಟ್ಟ ಮಿಲ್ಕಿಬ್ಯೂಟಿ: ಸನ್ಯಾಸ ಸ್ವೀಕರಿಸಿದ್ರಾ ತಮನ್ನಾ?

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚಿನ ವರ್ಷಗಳಲ್ಲಿ ಅಭಿನಯದಿಂದ ಮೋಡಿ ಮಾಡಿದ ನಟಿಯರು ಬಹಳಷ್ಟು ಮಂದಿ ಇದ್ದಾರೆ. ಆದರೆ ತನ್ನ ಅಂದ ಚೆಂದ ಮೈಮಾಟದಿಂದ, ಗ್ರಾಮರ್ ಡಾಲ್ ಆಗಿ ಭಾರೀ ಕ್ರೇಜ್ ಗಿಟ್ಟಿಸಿಕೊಂಡವರು ಮಾತ್ರ ತಮನ್ನಾ. ಕನ್ನಡದ 2 ಐಟಂ ಸಾಂಗ್‌ಗಳಿಗೂ ಮಿಲ್ಕಿ ಬ್ಯೂಟಿ ಕುಣಿದು ಹೋಗಿದ್ದಾರೆ.

ತನ್ನ ಮಿಲ್ಕಿ ಗ್ಲಾಮರ್‌ನಿಂದ ಈ ಮುಂಬೈ ಬೆಡಗಿ ಎಬ್ಬಿಸಿದ ಹವಾ ಅಷ್ಟಿಷ್ಟಲ್ಲ. ಆರಂಭದಲ್ಲಿ ಅಷ್ಟಾಗಿ ಸಕ್ಸಸ್ ಕಾಣದ ತಮನ್ನಾ 'ಪಯ್ಯಾ' ಸಿನಿಮಾ ನಂತರ ಭಾರೀ ಕ್ರೇಜ್ ಸೃಷ್ಟಿಸಿಕೊಂಡರು. ಸದ್ಯ ಮತ್ತೆ ತಮನ್ನಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಹೊಸ ನಟಿಯರ ಆರ್ಭಟದ ನಡುವೆ ಮಿಲ್ಕಿ ಬ್ಯೂಟಿ ಕಮಾಲ್ ನಡೀತಿಲ್ಲ. ಇದೆಲ್ಲದರ ನಡುವೆ ತಮನ್ನಾ ಇದ್ದಕ್ಕಿದಂತೆ ಕಾವಿ ತೊಟ್ಟು ದರ್ಶನ ಕೊಟ್ಟಿದ್ದಾರೆ. ಲಿಂಗ ಭೈರವಿ ಪೂಜೆ ಮಾಡಿ ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ತಮನ್ನಾ ಹೊಸ ಅವತಾರ ನೋಡಿದ ಕೆಲ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅರೇ ಇವ್ರೇನಾ ಮಿಲ್ಕಿ ಬ್ಯೂಟಿ ತಮನ್ನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾ ಹೀಗೆ ಪೂಜೆ ಮಾಡೋಕೆ ಕಾರಣ ಏನು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

ಬಿಕಿನಿ ಬಿಟ್ಟು ಕಾವಿ ಧರಿಸಿದ ತಮನ್ನಾ!

ಬಿಕಿನಿ ಬಿಟ್ಟು ಕಾವಿ ಧರಿಸಿದ ತಮನ್ನಾ!

ಸದಾ ಸ್ಕರ್ಟ್, ಜೀನ್ಸ್, ಶಾರ್ಟ್ಸ್, ಜಿಮ್ ಸೂಟ್, ಬಿಕಿನಿ ತೊಟ್ಟು ತಮನ್ನಾ ಕಾಣಿಸಿಕೊಳ್ಳುತ್ತಿದ್ದರು. ಜಿಮ್‌ ವರ್ಕೌಟ್, ಫಾರಿನ್ ವಕೇಷನ್, ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಾಗಿ ಇರುತ್ತಿದ್ದ ತಮನ್ನಾ ಹೀಗೆ ಏಕಾಏಕಿ ದೇವಸ್ಥಾನದಲ್ಲಿ ಕಾವಿ ಧರಿಸಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಹಿಮಾಲಯಕ್ಕೆ ತೆರಳಿ ವೈಷ್ಣವಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಇಶಾ ಯೋಗಾ ಆಶ್ರಮಕ್ಕೆ ಭೇಟಿ ನೀಡಿರುವ ಚೆಲುವೆ ವಿಶೇಷ ಪೂಜೆ ನೆರವೇರಿದ್ದಾರೆ. ದೀಕ್ಷೆ ಪಡೆದು ಪೂಜೆ ನೆರವೇರಿಸಿದ್ದಾರೆ.

ದೀಕ್ಷೆ, ಪೂಜೆ ಬಗ್ಗೆ ತಮನ್ನಾ ಮಾತು

ದೀಕ್ಷೆ, ಪೂಜೆ ಬಗ್ಗೆ ತಮನ್ನಾ ಮಾತು

ಲಿಂಗ ಭೈರವಿ ದೇವಿಯ ಆರಾಧನೆ ಮಾಡಿರುವ ವಿಡಿಯೋವನ್ನು ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ "ಇಶಾ ಯೋಗಾಶ್ರಮದಿಂದ ಆಹ್ವಾನ ಬಂದಿದ್ದು ಬಹಳ ಸಂತಸ ತಂದಿತ್ತು. ಲಿಂಗ ಭೈರವಿ ದೇವಿಯ ದರ್ಶನ ಮಾಡಿದ್ದರಿಂದ ಮನಸ್ಸಿಗೆ ಬಹಳ ಚೈತನ್ಯ ತುಂಬಿದಂತಾಗಿದೆ. ಅಷ್ಟೇ ಅಲ್ಲ ಜೀವನದಲ್ಲಿ ಭಯ, ಸೋಲಿನ ಬಗ್ಗೆಗಿನ ಆತಂಕ ದೂರವಾಗುತ್ತದೆ. ಲಿಂಗ ಭೈರವಿ ವಿಗ್ರಹವನ್ನು ಮನೆಗೆ ಕೊಂಡೊಯ್ಯುತ್ತೇನೆ. ಇಲ್ಲಿನ ಪರಿಸರ, ಲಿಂಗ ಭೈರವಿ ಮೂರ್ತಿ ನೋಡುತ್ತಿದ್ದಂತೆ ಏನೋ ಗೊತ್ತಿಲ್ಲದ ಆಧ್ಯಾತ್ಮಿಕ ಅನುಭೂತಿ ದೊರೆಕುತ್ತದೆ" ಎಂದು ತಮನ್ನಾ ಹೇಳಿದ್ದಾರೆ.

ಮದುವೆಗಾಗಿ ತಮನ್ನಾ ಪೂಜೆ?

ಮದುವೆಗಾಗಿ ತಮನ್ನಾ ಪೂಜೆ?

ಈ ವಿಡಿಯೋ ನೋಡಿ ತಮನ್ನಾ ಮದುವೆಗಾಗಿ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರಾ? ಎಂದು ಕೆಲವರು ಅನಿಮಾನ ವ್ಯಕ್ತಪಡಿಸ್ತಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ ಅಫೇರ್‌ ಬಗ್ಗೆ ಗುಸುಗುಸು ಶುರುವಾಗಿತ್ತು. ಬಾಲಿವುಡ್ ಪೋಷಕ ನಟ ವಿಜಯ್ ವರ್ಮಾ ಜೊತೆ ಮಿಲ್ಕಿಬ್ಯೂಟಿ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಈಗ ತಮನ್ನಾ ವಯಸ್ಸು 33. ಆಕೆ ಮದುವೆ ಬಗ್ಗೆ ಆಲೋಚಿಸುತ್ತಿರುವಂತಿದೆ ಎನ್ನುವುದು ಕೆಲವರ ವಾದ.

4 ಸಿನಿಮಾಗಳಲ್ಲಿ ತಮನ್ನಾ ನಟನೆ

4 ಸಿನಿಮಾಗಳಲ್ಲಿ ತಮನ್ನಾ ನಟನೆ

ತಮನ್ನಾ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆ ಹೇಳುವುದಾದರೆ ಚಿರಂಜೀವಿ ಜೊತೆ 'ಭೋಳಾ ಶಂಕರ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಹಿಂದಿಯಲ್ಲಿ 'ಬೋಲೆ ಚುಡಿಯಾ'
ಶೂಟಿಂಗ್ ಮುಗಿದಿದೆ. ಬಾಂದ್ರಾ ಎನ್ನುವ ಮತ್ತೊಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮುಂಬೈ ಉದ್ಯಮಿಯನ್ನು ತಮನ್ನಾ ಮದುವೆ ಆಗ್ತಾರೆ ಎನ್ನುವ ವದಂತಿ ಹರಡಿತ್ತು. ಅದನ್ನು ಪರೋಕ್ಷವಾಗಿ ಅಲ್ಲಗಳೆದಿದ್ದರು.

More from Filmibeat

English summary
Actress Tamanna Bhatia offers Special Puja in isha Yoga Center Linga Bhairavi Temple. milky beauty Shared Special Video in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X