ಕೊರೊನಾದಿಂದ ಗುಣಮುಖರಾದ ತಮನ್ನಾಗೆ ಶುರುವಾಗಿದೆ ಮತ್ತೊಂದು ಚಿಂತೆ
ನಟಿ ತಮನ್ನಾ ಭಾಟಿಯಾ ಇತ್ತೀಚಿಗೆ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದರು. ವೆಬ್ ಸೀರಿಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ತಮನ್ನಾ ದಿಢೀರ್ ಆಸ್ಪತ್ರೆ ಸೇರಿರುವುದು ಅಭಿಮಾನಿಗಳಿಗೆ ಆತಂಕ ಮೂಡಿಸಿತ್ತು. ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಮನ್ನಾ ಇದೀಗ ಸಂಪೂರ್ಣ ಗುಣಮುಖರಾಗಿ ಮುಂಬೈಗೆ ವಾಪಸ್ ಆಗಿದ್ದಾರೆ.
ಈ ಬಗ್ಗೆ ತಮನ್ನಾ ಸಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ತನಗೆ ಚಿಕಿತ್ಸೆ ನೀಡಿದ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಕೊರೊನಾದಿಂದ ಮುಕ್ತರಾಗಿ ಬಂದಿರುವ ತಮನ್ನಾಗೆ ಈಗ ಮತ್ತೊಂದು ಚಿಂತೆ ಶುರುವಾಗಿದೆ. ಹೌದು, ಮಿಲ್ಕಿ ಬ್ಯೂಟಿಗೆ ಈಗ ಫಿಟ್ ನೆಸ್ ಬಗ್ಗೆಯೇ ಯೋಚನೆಯಾಗಿದೆ.
ನಟಿಮಣಿಯರು ಹೆಚ್ಚಾಗಿ ಫಿಟ್ ನೆಸ್, ಡಯಟ್ ಕಡೆ ಗಮನ ಹರಿಸುತ್ತಿರುತ್ತಾರೆ. ತಮನ್ನಾ ಕೂಡ ಪ್ರತಿದಿನ ವರ್ಕೌಟ್, ಡಯಟ್ ಅಂತ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಇದೀಗ ಕೊರೊನಾ ಸೋಂಕಿನಿಂದ ಡಯಟ್ ಪಾಲಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೆ ಈಗತಾನೆ ಗುಣಮುಖರಾಗಿರುವುದರಿಂದ ತಕ್ಷಣಕ್ಕೆ ವರ್ಕೌಟ್ ಮಾಡಲು ಸಾಧ್ಯ ವಾಗುತ್ತಿಲ್ಲ.

ಮೊದಲಿನಂತೆ ಶಕ್ತಿ ಹೊಂದಲು ಒಂದಿಷ್ಟು ದಿನಗಳು ಬೇಕಾಗಲಿದೆ. ಹಾಗಾಗಿ ತಮನ್ನ ಈಗ ಮನೆಯಲ್ಲೇ ಸರಳ ವ್ಯಾಯಾಮ ಮಾಡುತ್ತಿದ್ದಾರೆ. ವ್ಯಾಯಾಮದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಹಿತಿ ನೀಡಿದ್ದಾರೆ.
ಈ ಮೊದಲು 40 ಪುಷ್ ಅಪ್ಸ್ ಮಾಡುತ್ತಿದ್ದೆ. ಈಗ ನಾಲ್ಕು ಪುಷ್ ಅಪ್ಸ್ ಮಾಡಲು ಕಷ್ಟಪಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮನ್ನಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ತಮನ್ನಾ ಬಳಿ ಲವ್ ಮಾಕ್ಟೇಲ್ ರಿಮೇಕ್, ಅಂಧಾಧುನ್ ಸಿನಿಮಾದ ರಿಮೇಕ್ ನಲ್ಲಿ ತಮನ್ನಾ ನಟಿಸುತ್ತಿದ್ದಾರೆ.


Click it and Unblock the Notifications











