ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ

ಅಭಿಮಾನಿಗಳಿಂದ ಮಿಲ್ಕೀಬ್ಯೂಟಿ ಎಂದು ಕರೆಯಲ್ಪಡುವ ನಟಿ ತಮನ್ನಾ ತಮ್ಮ ಸೌಂದರ್ಯದಿಂದ ಲಕ್ಷಾಂತರ ಹುಡುಗರ ನಿದ್ದೆ ಕದಿದ್ದಾರೆ. ಆದರೆ ಆಕೆಯ ನಿದ್ದೆ ಕದ್ದವರು ಯಾರು? ಪ್ರಶ್ನೆಗೆ ಉತ್ತರ ಸಿಕ್ಕಿದೆ ಸಮಂತಾ ನಡೆಸಿಕೊಡುವ ಟಾಕ್ ಶೋ ನಲ್ಲಿ.

Recommended Video

ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada

ನಟಿ ಸಮಂತಾ, 'ಆಹಾ' ಒಟಿಟಿಗಾಗಿ ಸ್ಯಾಮ್-ಜ್ಯಾಮ್ ಹೆಸರಿನ ಸೆಲೆಬ್ರಿಟಿ ಟಾಕ್ ಶೋ ನಡೆಸಿಕೊಡುತ್ತಾರೆ. ಸಿನಿಮಾ ರಂಗದ ಪ್ರಮುಖರನ್ನು ಕರೆಸಿ ಅವರೊಟ್ಟಿಗೆ ಮಾತುಕತೆ ನಡೆಸುತ್ತಾರೆ.

ಸ್ಯಾಮ್-ಜ್ಯಾಮ್‌ ಶೋ ಗೆ ಈ ವಾರದ ಅತಿಥಿಯಾಗಿ ನಟಿ ತಮನ್ನಾ ಆಗಮಿಸಿದ್ದರು. ನಟಿ ತಮನ್ನಾ-ಸಮಂತಾ ಒಳ್ಳೆಯ ಗೆಳೆಯರೇ ಆಗಿರುವ ಕಾರಣ, ಇಬ್ಬರೂ ಗೆಳತಿಯರಂತೆಯೇ ಶೊ ನಲ್ಲಿ ಮಾತನಾಡಿದರು. ಸಮಂತಾ ಕೇಳಿದ ಪ್ರಶ್ನೆಗಳಿಗೆ ಅಷ್ಟೇ ತೀಕ್ಷಣವಾಗಿ ಉತ್ತರಿಸಿದ್ದಾರೆ ತಮನ್ನಾ.

ಯಾರಿಗೆ ಮುತ್ತು ಕೊಡಲು ಇಷ್ಟ?

ಯಾರಿಗೆ ಮುತ್ತು ಕೊಡಲು ಇಷ್ಟ?

'ಒಂದು ವೇಳೆ ಆನ್‌ಸ್ಕ್ರೀನ್ ಕಿಸ್ಸಿಂಗ್' ನಿಯಮ ತೆಗೆದುಬಿಟ್ಟರೆ, ಯಾವ ಹೀರೋ ಗೆ ಮುತ್ತುಕೊಡಲು ಇಷ್ಟಪಡುತ್ತೀರಿ? ಎಂದು ಪ್ರಶ್ನೆ ಕೇಳಿದ್ದಾರೆ ಸಮಂತಾ. ಇದಕ್ಕೆ ಹೆಚ್ಚು ಆಲೋಚಿಸದೆ ವಿಜಯ್ ದೇವರಕೊಂಡ ಎಂದಿದ್ದಾರೆ ತಮನ್ನಾ. ನಟಿ ತಮನ್ನಾಗೆ ವಿಜಯ್ ದೇವರಕೊಂಡಗೆ ಮುತ್ತು ಕೊಡಲು ಇಷ್ಟವಂತೆ.

ತಮನ್ನಾ ಮದುವೆ ಬಗ್ಗೆಯೂ ಮಾತುಕತೆ

ತಮನ್ನಾ ಮದುವೆ ಬಗ್ಗೆಯೂ ಮಾತುಕತೆ

ತಮನ್ನಾ ಮದುವೆಯ ಬಗ್ಗೆಯೂ ಶೋ ನಲ್ಲಿ ಮಾತುಕತೆ ನಡೆದಿದೆ. ಸಮಂತಾ, ತನ್ನ ಪತಿಯ ತಮ್ಮ ಅಖಿಲ್ ಅನ್ನು ಮದುವೆಯಾಗುವುದಾದರೆ ನಾನು ಮನೆಯಲ್ಲಿ ಮಾತನಾಡುತ್ತೇನೆ. ಅಖಿಲ್, ವಯಸ್ಸಿನಲ್ಲಿ ನಿನಗಿಂತ (ತಮನ್ನಾ) ಸ್ವಲ್ಪ ಚಿಕ್ಕವನಿರಬಹುದು ಅಷ್ಟೆ' ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ತಮನ್ನಾ, 'ಪ್ರೀತಿಗೆ ವಯಸ್ಸಿಲ್ಲ' ಎಂದಿದ್ದಾರೆ.

ಭಗ್ನ ಪ್ರೇಮಿ ಅಂತೆ ತಮನ್ನಾ

ಭಗ್ನ ಪ್ರೇಮಿ ಅಂತೆ ತಮನ್ನಾ

ತಮನ್ನಾ ಕವನಗಳನ್ನು ಬರೆಯುವ ಬಗ್ಗೆ ಸಹ ಪ್ರಸ್ತಾಪಿಸುತ್ತಾರೆ ಸಮಂತಾ. 'ನನ್ನ ಹೃದಯ ಒಡೆಯಲ್ಪಟ್ಟಿದೆ, ನಾಣು ಭಗ್ನ ಪ್ರೇಮಿ, ಹಾಗಾಗಿ ಕವನಗಳನ್ನು ಬರೆಯುತ್ತೇನೆ' ಎಂದಿದ್ದಾರೆ ತಮನ್ನಾ. ನಿಮ್ಮ ಹೃದಯ ಒಡೆದವರು ಯಾರು ಹೇಳು ಅವರನ್ನು ನೋಡಿಕೊಳ್ಳುತ್ತೇನೆ ಎಂದು ತಮಾಷೆ ಮಾಡಿದ್ದಾರೆ ಸಮಂತಾ.

ಹಲವು ಖ್ಯಾತನಾಮರು ಬಂದಿದ್ದಾರೆ ಶೋ ಗೆ

ಹಲವು ಖ್ಯಾತನಾಮರು ಬಂದಿದ್ದಾರೆ ಶೋ ಗೆ

ತಮನ್ನಾ ಭಾಗವಹಿಸಿರುವ ಶೋ ನ ಎಪಿಸೋಡ್ ಡಿಸೆಂಬರ್ 11 ರಂದು ಪ್ರಸಾರವಾಗಲಿದ್ದು. ಶೋ ನ ಪ್ರೋಮೋನಲ್ಲಿ ತಮನ್ನಾ-ಸಮಂತಾ ಮಾತುಕತೆಯ ಝಲಕ್ ನೀಡಲಾಗಿದೆ. ಹಲವು ವಿಷಯಗಳನ್ನು ಸಮಂತಾ-ತಮನ್ನಾ ಮಾತನಾಡಿದ್ದಾರೆ. ಸಮಂತಾ ನಡೆಸಿಕೊಡುವ 'ಸ್ಯಾಮ್-ಜ್ಯಾಮ್' ಶೋ ನಲ್ಲಿ ದೊಡ್ಡ ಸ್ಟಾರ್ ನಟರು ಭಾಗವಹಿಸಿದ್ದಾರೆ. ವಿಜಯ್ ದೇವರಕೊಂಡ, ಮೆಗಾಸ್ಟಾರ್ ಚಿರಂಜೀವಿ, ರಾಣಾ ದಗ್ಗುಬಾಟಿ ಇನ್ನೂ ಹಲವರು ಶೋ ನಲ್ಲಿ ಭಾಗವಹಿಸಿದ್ದಾರೆ.

More from Filmibeat

English summary
Actress Tamannaah participated in Samantha's Sam-Jam talk show. Both talks about personal life, movie etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X