For Quick Alerts
  ALLOW NOTIFICATIONS  
  For Daily Alerts

  'ನೆಪೋಟಿಸಂ' ಎಲ್ಲಾ ಕ್ಷೇತ್ರದಲ್ಲಿಯೂ ಇದೆ, ಕಠಿಣ ಶ್ರಮ-ಸಾಮರ್ಥ್ಯದ ಮುಂದೆ ಯಾವುದೂ ಇಲ್ಲ- ನಟಿ ತಮನ್ನಾ

  |

  ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಬಾಲಿವುಡ್ ನ ಕರಾಳ ಸತ್ಯಗಳು ಹೊರಬರುತ್ತಿದೆ. ಈಗಾಗಲೆ ಸಾಕಷ್ಟು ಮಂದಿ ಸ್ವಜನಪಕ್ಷಪಾತದ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

  Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

  ಬಾಲಿವುಡ್ ನಲ್ಲಿ ಯುವ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ, ಸ್ಟಾರ್ ಮಕ್ಕಳಿಗೆ, ಪ್ರಭಲರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಕರಣ್ ಜೋಹರ್, ಮಹೇಶ್ ಭಟ್, ಸಲ್ಮಾನ್ ಖಾನ್ ಸೇರಿದ್ದಂತೆ ಸಾಕಷ್ಟು ಮಂದಿಯ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಸಹ ಮಾತನಾಡಿದ್ದಾರೆ. ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತಮನ್ನಾ 'ನೆಪೋಟಿಸಂ ಅನುಭವ ನನಗೆ ಆಗಿಲ್ಲ' ಎಂದು ಹೇಳಿದ್ದಾರೆ.

  ಮುಖಕ್ಕೆ ಮಸಿ ಬಳಿದುಕೊಂಡು ನಟಿ ತಮನ್ನಾ ಪ್ರತಿಭಟನೆ ಮಾಡಿದ್ದೇಕೆ?ಮುಖಕ್ಕೆ ಮಸಿ ಬಳಿದುಕೊಂಡು ನಟಿ ತಮನ್ನಾ ಪ್ರತಿಭಟನೆ ಮಾಡಿದ್ದೇಕೆ?

  ಪರಿಶ್ರಮ ಮತ್ತು ಸಾಮರ್ಥ್ಯದ ಮುಂದೆ ನೆಪೋಟಿಸಂ ಇಲ್ಲ

  ಪರಿಶ್ರಮ ಮತ್ತು ಸಾಮರ್ಥ್ಯದ ಮುಂದೆ ನೆಪೋಟಿಸಂ ಇಲ್ಲ

  ನೆಪೊಟಿಸಂ ಅನುಭವವಾಗಿಲ್ಲ ಎನ್ನುವ ತಮನ್ನಾ ಹೊರಗಿನಿಂದ ಬಂದ ನನ್ನನ್ನು ದಕ್ಷಿಣ ಭಾರತದ ಚಿತ್ರರಂಗ ಹೇಗೆ ಸ್ವಾಗತ ಮಾಡಿತು ಎನ್ನುವ ಬಗ್ಗೆಯು ವಿವರಸಿದ್ದಾರೆ. "ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಪ್ರವೇಶ ಮಾಡುವಾಗ ಭಾಷೆ ಗೊತ್ತಿರಲಿಲ್ಲ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಾರ ಬಗ್ಗೆಯೂ ತಿಳಿದಿರಲಿಲ್ಲ. ಆದರೆ ಕಠಿಣ ಪರಿಶ್ರಮ ಮತ್ತು ನನ್ನ ಸಾಮರ್ಥ್ಯ ಆವಕಾಶಗಳನ್ನು ಪಡೆಯುವಂತೆ ಮಾಡಿತು. ಯಶಸ್ಸು ಮತ್ತು ವೈಫಲ್ಯವು ಅವರ ಪ್ರಯತ್ನ ಮತ್ತು ಹಣೆಬರಹದಿಂದಾಗಿರುತ್ತೆ ಎಂದು ನಂಬುತ್ತೇನೆ" ಎಂದು ಹೇಳಿದ್ದಾರೆ.

  ನೆಪೋಟಿಸಂ ಸಕ್ಸಸ್ ಮತ್ತು ವೈಫಲ್ಯವನ್ನು ನಿರ್ಧರಿಸಲ್ಲ

  ನೆಪೋಟಿಸಂ ಸಕ್ಸಸ್ ಮತ್ತು ವೈಫಲ್ಯವನ್ನು ನಿರ್ಧರಿಸಲ್ಲ

  ಚಿತ್ರರಂಗದಲ್ಲಿ ನೆಪೋಟಿಸಂ ಸಕ್ಸಸ್ ಮತ್ತು ವೈಫಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಹೊರಗಿನವರು, ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಖ್ಯಾತಿಗಳಿದವರ ಬಗ್ಗೆಯು ಹೇಳಿದ್ದಾರೆ. ಹೊರಗಿನಿಂದ ಬಂದು ಇಂದು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.

  ನಟಿ ತಮನ್ನಾ ಜತೆ ಅಲ್ಲು ಅರ್ಜುನ್-ರಾಮ್ ಚರಣ್ ತೇಜ ಮಾತು-ಕತೆ!ನಟಿ ತಮನ್ನಾ ಜತೆ ಅಲ್ಲು ಅರ್ಜುನ್-ರಾಮ್ ಚರಣ್ ತೇಜ ಮಾತು-ಕತೆ!

  ಶ್ರಮ, ಕಷ್ಟದಿಂದ ಬಂದ ಆಯುಷ್ಮಾನ್, ಕಾರ್ತಿಕ್ ಇದ್ದಾರೆ

  ಶ್ರಮ, ಕಷ್ಟದಿಂದ ಬಂದ ಆಯುಷ್ಮಾನ್, ಕಾರ್ತಿಕ್ ಇದ್ದಾರೆ

  ಶಾರುಖ್ ಖಾನ್ ಅವರನ್ನು ನೋಡಿ, ಲೆಜೆಂಡ್ ಅವರು. ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ ಗಳಲ್ಲಿ ಒಬ್ಬರು. ಇನ್ನೂ ಪ್ರಸ್ತುತ ಪೀಳಿಗೆಯಲ್ಲಿ ಆಯುಷ್ಮಾನ್ ಖುರಾನ, ಕಾರ್ತಿಕ್ ಆರ್ಯನ್ ಅಂತಹ ನಟರು ವೈಯಕ್ತಿಕವಾಗಿ ಹೋರಾಡಿದ್ದಾರೆ, ಕಷ್ಟಪಟ್ಟಿದ್ದಾರೆ. ಇಂದು ಅವರು ಸ್ಟಾರ್ ಆಗಿದ್ದಾರೆ" ಎಂದು ತಮನ್ನಾ ಹೇಳಿದ್ದಾರೆ.

  ಕಥೆ ಕೇಳದೆಯೇ ರವಿ ತೇಜಾ ಚಿತ್ರ ತಿರಸ್ಕರಿಸಿದ ತಮನ್ನಾ: ಕಾರಣವೇನು?ಕಥೆ ಕೇಳದೆಯೇ ರವಿ ತೇಜಾ ಚಿತ್ರ ತಿರಸ್ಕರಿಸಿದ ತಮನ್ನಾ: ಕಾರಣವೇನು?

  ಚಿತ್ರರಂಗ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಇದೆ

  ಚಿತ್ರರಂಗ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಇದೆ

  ಚಿತ್ರರಂಗ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ವಜನಪಕ್ಷಪಾತರುತ್ತೆ. ಉದಾಹರಣೆಗೆ ಒಂದು ಕುಟುಂಬದಲ್ಲಿ ಸಾಕಷ್ಟು ಜನ ವೈದ್ಯರು ಇರುತ್ತಾರೆ. ಅವಳು ಅದೆ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿರುತ್ತಾರೆ. ಪೋಷಕರು ಸಹೋದರನಿಗೆ ಸಹಾಯಮಾಡಿದ್ದಂತೆ ಆಕೆಗೂ ಸಹಾಯ ಮಾಡುತ್ತಾರೆ. ನಾಳೆ ನನ್ನ ಮಗು ನಟನಾಗಲು ಬಯಸಿದರೆ, ನಾನು ಅದೆ ರೀತಿ ಮಾಡುತ್ತೇನೆ. ಅದರಲ್ಲಿ ಯಾವುದೆ ತಪ್ಪಿಲ್ಲ" ಎಂದು ತಮನ್ನಾ ಹೇಳಿದ್ದಾರೆ.

  English summary
  South Indian Actress Tamannah speak about nepotisam. She said that Nepotism Does not decide one's Success and Failure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X