For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ 'ಲೂಸಿಫರ್'ನಲ್ಲಿ ಬಾಲಿವುಡ್‌ನ ಖ್ಯಾತ ನಟಿ

  |

  ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ಲೂಸಿಫರ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿರುವ ಸುದ್ದಿ ಹೊಸದಲ್ಲ. ವರ್ಷದಿಂದ ರಿಮೇಕ್ ಸುದ್ದಿ ಸದ್ದು ಮಾಡುತ್ತಿದೆ. ಮೆಗಾಸ್ಟಾರ್ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮುಗಿಯುತ್ತಿದ್ದಂತೆ ಲೂಸಿಫರ್ ರಿಮೇಕ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಇದೀಗ ಲೂಸಿಫರ್ ರಿಮೇಕ್ ಬಗ್ಗೆ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಮೆಗಾಸ್ಟಾರ್ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಮೊದಲು ತ್ರಿಷಾ ಹೆಸರು ಕೇಳಿಬರುತ್ತಿತ್ತು. ಆಚಾರ್ಯ ಸಿನಿಮಾದಿಂದ ಔಟ್ ಆಗಿದ್ದ ತ್ರಿಷಾ ಲೂಸಿಫರ್ ರಿಮೇಕ್ ನಲ್ಲಿ ಮೆಗಾಸ್ಟಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಮತ್ತೋರ್ವ ಖ್ಯಾತ ನಟಿಯ ಹೆಸರು ವೈರಲ್ ಆಗಿದೆ.

  ಆ ಸೂಪರ್‌ಸ್ಟಾರ್‌ಗೆ 'ಭಾರತ ರತ್ನ' ಕೊಡಿ ಎಂದು ಮನವಿ ಮಾಡಿದ ಚಿರಂಜೀವಿಆ ಸೂಪರ್‌ಸ್ಟಾರ್‌ಗೆ 'ಭಾರತ ರತ್ನ' ಕೊಡಿ ಎಂದು ಮನವಿ ಮಾಡಿದ ಚಿರಂಜೀವಿ

  ಬಾಲಿವುಡ್ ನ ಖ್ಯಾತ ನಟಿ ವಿದ್ಯಾ ಬಾಲನ್ ತೆಲುಗು ಸ್ಟಾರ್ ಚಿರಂಜೀವಿ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮೋಹನ್ ರಾಜ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸದ್ಯ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸೈಲೆಂಟ್ ಆಗಿ ಕೆಲಸ ಮಾಡುತ್ತಿರುವ ಸಿನಿಮಾತಂಡ ನಾಯಕಿ ಪಾತ್ರಕ್ಕೆ ವಿದ್ಯಾ ಬಾಲನ್ ಅವರನ್ನು ಸಂಪರ್ಕ ಮಾಡಿದೆ. ಆದರೆ ವಿದ್ಯಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಅಥವಾ ನೋ ಎಂದಿದ್ದಾರಾ ಎನ್ನುವುದು ಬಹಿರಂಗವಾಗಿಲ್ಲ.

  ಅಂದಹಾಗೆ ವಿದ್ಯಾ ಬಾಲನ್ ಈಗಾಗಲೇ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಎನ್ ಟಿ ಆರ್ ಬಯೋಪಿಕ್ ನಲ್ಲಿ ವಿದ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಲೂಸಿಫರ್ ರಿಮೇಕ್ ಮೂಲಕ ಮತ್ತೆ ತೆಲುಗಿಗೆ ಬರ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ಸ್ಯಾಂಡಲ್ವುಡ್ ಕಲಾವಿದರ ಕುಟುಂಬಕ್ಕೆ ನೆರವಾದ ಸಂಜನಾ | Filmibeat Kannada

  ಮಲಯಾಳಂನ ಸೂಪರ್ ಹಿಟ್ ಲೂಸಿಫರ್, ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ಈ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ.

  English summary
  Bollywood Actress Vidya Balan in Chiranjeevi starrer Lucifer remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X