ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ: "ನ್ಯಾಯಸ್ಥಾನದಲ್ಲಿ ಗೆದ್ದಿದ್ದೇನೆ, ಇವ್ರು ಮಾತ್ರ ಸತ್ರು ನನ್ನ ಬಿಡಲ್ಲ": ಯಮುನಾ
ವೇಶ್ಯಾವಾಟಿಕೆ ಪ್ರಕರಣದಲ್ಲಿ 12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಹುಭಾಷಾ ನಟಿ ಯಮುನಾ ಬಂಧನವಾಗಿತ್ತು. ಆಗ ಈ ಸುದ್ದಿ ಬಹಳ ದೊಡ್ಡದಾಗಿ ಚರ್ಚೆ ಹುಟ್ಟಾಕ್ಕಿತ್ತು. ಆದರೆ "ಈ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ. ನ್ಯಾಯಸ್ಥಾನವೇ ನನ್ನನ್ನು ನಿರ್ದೋಷಿ ಎಂದು ಹೇಳಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಏನೇನೋ ಥಂಬ್‌ನೇಲ್ ಹಾಕಿ ಇಂದಿಗೂ ಸುಳ್ಳು ಸುದ್ದಿ ಹರಡುತ್ತಿದ್ದಾರೆ" ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಈ ಬಗ್ಗೆ ಮಾತನಾಡಿರುವ ನಟಿ ಯಮುನಾ ಇಷ್ಟವರ್ಷ ಆದರೂ ನನ್ನ ಬಗ್ಗೆ ಇನ್ನು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಸತ್ತರು ಇವರು ಬಿಡುವಂತೆ ಕಾಣುತ್ತಿಲ್ಲ ಎಂದು ನಟಿ ನೋವು ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಯಮುನಾ ದಕ್ಷಿಣ ಭಾರತದ 4 ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲ ಸಿನಿಮಾಗಳಲ್ಲೂ ಯಮುನಾ ಬಣ್ಣ ಹಚ್ಚಿ ಗೆದ್ದಿದ್ದಾರೆ. ಆಕೆಗೆ ಮನೆಯಲ್ಲಿ ಪ್ರೇಮಾ ಎಂದು ನಾಮಕರಣ ಮಾಡಲಾಗಿತ್ತು. ನಿರ್ದೇಶಕ ಬಾಲಚಂದರ್ ಹೆಸರನ್ನು ಯಮುನಾ ಆಗಿ ಬದಲಿಸಿದರು.

2021ರ ಜನವರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದಡಿ ನಟಿ ಯಮುನಾ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ವಿಠಲ್ಯ ಮಲ್ಯ ರಸ್ತೆಯಲ್ಲಿರುವ ಐಟಿಸಿ ರಾಯಲ್ ಗಾರ್ಡೇನಿಯಾ ಹೋಟೆಲ್ ಮೇಲೆ 2021ರ ಜನವರಿ 20ರಂದು ರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ಹೋಟೆಲ್‌ನ 4ನೇ ಮಹಡಿಯಲ್ಲಿ ಕೊಠಡಿ ಬಾಡಿಗೆ ಪಡೆದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿತ್ತು.
ನಟಿ ಯಮುನಾ ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನ್ಯಾಯಸ್ಥಾನವೇ ನನ್ನದೇನು ತಪ್ಪಿಲ್ಲ ಎಂದು ಹೇಳಿದೆ ಎಂದು ಹೇಳಿಕೊಂಡಿದ್ದಾರೆ. ಆದರೂ ಕೂಡ ಇಂದಿಗೂ ನಮ್ಮ ಫೋಟೋಗೆ ಏನೇನೊ ಥಂಬ್‌ನೇಲ್ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರ ಬಗ್ಗೆ ನಟಿ ಈಗ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವೀಡಿಯೋದಲ್ಲಿ ನಟಿ ಯಮುನಾ ಮಾತನಾಡುತ್ತಾ "ಹಾಯ್.. ನನ್ನನ್ನು ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ ನನ್ನಲ್ಲಿ ಒಂದು ಗೊತ್ತಿಲ್ಲದ ನೋವು ಹಾಗೆ ಉಳಿದುಬಿಟ್ಟಿದೆ. ಅದು ಕೂಡ ಸೋಶಿಯಲ್ ಮೀಡಿಯಾ ಕಾರಣದಿಂದ. ನಾನು ಬಹಳ ಹಿಂದೆಯೇ ಒಂದು ಸಮಸ್ಯೆಯಿಂದ ಹೊರಬಂದು ಈಗ ನಿಶ್ಚಿಂತೆಯಿಂದ ಇದ್ದೀನಿ. ನಾನು ಆ ಸಮಸ್ಯೆಯಲ್ಲಿ ಸಿಲುಕಿದ್ದು ಯಾಕೆ ಎಂದು ಈಗಾಗಲೇ ಸಂದರ್ಶನಗಳಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ಆ ವಿಷಯದಲ್ಲಿ ನ್ಯಾಯಸ್ಥಾನ ಕೂಡ ನನಗೆ ಕ್ಲೀನ್ ಚಿಟ್ ಕೊಟ್ಟು ನನ್ನನ್ನು ಗೆಲ್ಲಿಸಿದೆ. ನ್ಯಾಯಯುತವಾಗಿ ನಾನು ಗೆಲುವು ಸಾಧಿಸಿದ್ದೇನೆ. ಆದರೆ ಸೋಶಿಯಲ್ ಮೀಡಿಯಾವನ್ನು ನಾನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.

'"ಇಂದಿಗೂ ನನ್ನ ಬಗ್ಗೆ, ಆ ಘಟನೆಯ ಬಗ್ಗೆ ವಿವಿಧ ಥಂಬ್‌ನೇಲ್‌ಗಳ ವೀಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ನಾನು ಅದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲ್ಲ. ಅದರಲ್ಲಿ ಏನು ಇದೆ ಎಂದು ನಾನು ಯಾವತ್ತು ನೋಡಿಲ್ಲ. ಆದರೆ ಆ ಥಂಬ್‌ನೇಲ್ಸ್ ಮಾತ್ರ ನನ್ನನ್ನು ತುಂಬಾ ನೋಯಿಸುತ್ತಿದೆ. ಈ ವಿಷಯದಲ್ಲಿ ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ. ಕೆಲವು ಸಂದರ್ಭಗಳಲ್ಲಿ ನೋವಾಗುತ್ತದೆ. ಏಕೆಂದರೆ ನಾನು ಕೂಡ ಮನುಷ್ಯಳೇ ಅಲ್ಲವೇ. ಆ ಥಂಬ್‌ನೆಲ್ಸ್ ನೋಡಿದರೆ, ಏನೋ ಗೊತ್ತಿಲ್ಲದ ನೋವು ಉಂಟಾಗುತ್ತದೆ. ನಾನು ಸತ್ತರು ಕೂಡ ನನ್ನನ್ನು ಇವ್ರು ಬಿಡಲ್ಲ ಅನಿಸುತ್ತದೆ" ಎಂದು ನಟಿ ಯಮುನಾ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ನಟಿ ಯಮುನಾ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನೀವು ಬೇಸರ ಮಾಡಿಕೊಳ್ಳಬೇಡಿ ಮೇಡಂ ಎಂದು ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ. ಯಮುನಾ ಸದ್ಯ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸ್ತಿದ್ದಾರೆ. ಇನ್ನು ಈಕೆಯ ಸಿನಿಮಾಗಳ ವಿಚಾರಕ್ಕೆ ಬಂದರೆ 1987ರಲ್ಲಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1989ರಲ್ಲಿ 'ಮೋಡದ ಮರೆಯಲ್ಲಿ' ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಚಿನ್ನ', 'ಶ್ರೀಮಂಜುನಾಥ', 'ಹಾಗೆ ಸುಮ್ಮನೆ', 'ಕಂಠೀರವ', 'ದಿಲ್ ರಂಗೀಲಾ' ಯಮುನಾ ನಟಿಸಿದ ಕೆಲ ಸಿನಿಮಾಗಳು.


Click it and Unblock the Notifications











