ಪುಷ್ಪ ಸಿನಿಮಾದ ವಿಲನ್‌ಗಳ ಪಟ್ಟಿಗೆ ಮತ್ತೊಬ್ಬ ಖ್ಯಾತ ನಟ ಸೇರ್ಪಡೆ

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಭಾರಿ ಕುತೂಹಲ ಕೆರಳಿಸಿದೆ. ಶೂಟಿಂಗ್ ಪ್ರಾರಂಭವಾಗುವ ಮೊದಲೇ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ ಪಷ್ಪ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ಅಲ್ಲು ಅರ್ಜುನ್, ರಕ್ತ ಚಂದನ ಮರಗಳ ಕಳ್ಳ ಸಾಗಣೆದಾರನ ಪಾತ್ರ ನಿರ್ವಹಿಸಿದ್ದಾರೆ.

ಪುಷ್ಪ ಸಿನಿಮಾದ ನಟ-ನಟಿಯರ ಆಯ್ಕೆ ಕುರಿತು ಭಾರಿ ಕುತೂಹಲ ಎದ್ದಿದೆ. ಅದರಲ್ಲಿಯೂ ಸಿನಿಮಾದ ವಿಲನ್ ಪಾತ್ರಕ್ಕೆ ನಟರ ಆಯ್ಕೆಯ ಕಸರತ್ತು ಇನ್ನೂ ಮುಗಿದಂತಿಲ್ಲ. ವಾರಕ್ಕೊಂದು ಹೊಸ ಹೆಸರುಗಳು ಪುಷ್ಪ ಸಿನಿಮಾದ ವಿಲನ್ ಪಾತ್ರಕ್ಕೆ ಕೇಳಿ ಬರುತ್ತಿದೆ.

ನಟನರನ್ನು ಬದಲಾಯಿಸಲಾಗಿದೆ

ನಟನರನ್ನು ಬದಲಾಯಿಸಲಾಗಿದೆ

ಮೊದಲಿಗೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ವಿಲನ್ ಪಾತ್ರ ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರು ಸಂಭಾವನೆ ಹೆಚ್ಚು ಕೇಳಿದರು ಎಂದು ಅವರ ಸ್ಥಾನಕ್ಕೆ ಕನ್ನಡದ ಧನಂಜಯ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದವು.

ಪುಷ್ಪ ಸಿನಿಮಾದ ವಿಲನ್ ಪಾತ್ರಕ್ಕೆ ಆದಿ ಪಿನಿಶೆಟ್ಟಿ

ಪುಷ್ಪ ಸಿನಿಮಾದ ವಿಲನ್ ಪಾತ್ರಕ್ಕೆ ಆದಿ ಪಿನಿಶೆಟ್ಟಿ

ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಪುಷ್ಪ ಸಿನಿಮಾದ ವಿಲನ್ ಪಾತ್ರಕ್ಕೆ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಆದಿ ಪಿನಿಶೆಟ್ಟಿ ಅವರನ್ನು ಆಯ್ಕೆ ಮಾಡಿಲಾಗಿದೆಯಂತೆ. ಆದಿ ಪಿನಿಶೆಟ್ಟಿ ವಿಲನ್ ಆಗಿರುತ್ತಾರೆಯೇ, ಅಥವಾ ಬೇರೆ ವಿಲನ್‌ಗಳ ಜೊತೆಗೆ ಇವರೂ ಒಬ್ಬರಾಗಿರುತ್ತಾರೆಯೋ ಕಾದು ನೋಡಬೇಕಿದೆ.

ಅಲ್ಲು ಅರ್ಜುನ್ ಅಣ್ಣನ ಪಾತ್ರದಲ್ಲಿ ಆದಿ

ಅಲ್ಲು ಅರ್ಜುನ್ ಅಣ್ಣನ ಪಾತ್ರದಲ್ಲಿ ಆದಿ

ಮೂಲಗಳ ಪ್ರಕಾರ ಆದಿ ಪಿನಿಶೆಟ್ಟಿ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಣ್ಣನ ಪಾತ್ರ ನಿರ್ವಹಿಸಲಿದ್ದಾರಂತೆ. ಜೊತೆಗೆ ಆದಿ ಪಿನಿಶೆಟ್ಟಿ ಊರಿನ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆದಿ ಅವರದ್ದು ನೆಗೆಟಿವ್ ಶೇಡ್ ಇರುವ ಪಾತ್ರವಂತೆ.

ಪುಷ್ಪ ಸಿನಿಮಾದಲ್ಲಿ ಯಾರ್ಯಾರಿರಲಿದ್ದಾರೆ?

ಪುಷ್ಪ ಸಿನಿಮಾದಲ್ಲಿ ಯಾರ್ಯಾರಿರಲಿದ್ದಾರೆ?

ಆದಿ ಪಿನಿಶೆಟ್ಟಿ ಜೊತೆಗೆ ಪುಷ್ಪ ಸಿನಿಮಾದಲ್ಲಿ ಪ್ರಕಾಶ್ ರೈ, ಜಗಪತಿ ಬಾಬು, ವೆನ್ನೆಲ ಕಿಶೋರ್, ಹರೀಶ್ ಉತ್ತಮನ್ ಇರಲಿದ್ದಾರೆ. ಅಲ್ಲು ಅರ್ಜುನ್ ಜೊತೆಯಾಗಿ ಸರೈನೋಡು ಸಿನಿಮಾದಲ್ಲಿ ಆದಿ ಪಿನಿಶೆಟ್ಟಿ ಅಭಿನಯಿಸಿದ್ದರು. ರಂಗಸ್ಥಳಂ ಸಿನಿಮಾದಲ್ಲಿ ಆದಿ ಪಿನಿಶೆಟ್ಟಿ ರಾಮ್ ಚರಣ್ ತೇಜ ಸಹೋದರನ ಪಾತ್ರ ನಿರ್ವಹಿಸಿದ್ದರು.

More from Filmibeat

English summary
Actor Adhi Pinisetty joins Allu Arjun's Pushpa movie team. Adhi is Allu Arjun's brother and sarpanch of village in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X