For Quick Alerts
  ALLOW NOTIFICATIONS  
  For Daily Alerts

  ಬಾಡಿ ಬಿಲ್ಡ್ ಮಾಡಲು ಸ್ಟಿರಾಯ್ಡ್ ತೆಗೆದುಕೊಳ್ತಾರಾ ಪ್ರಭಾಸ್? ಸಹ ನಟ ಹೇಳಿದ್ದೇನು?

  |

  ಟಾಲಿವುಡ್ ನಟ ಪ್ಯಾನ್ ಇಂಡಿಯ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏಕಕಾಲಕ್ಕೆ ಆದಿಪುರುಷ್ ಮತ್ತು ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಪ್ರಭಾಸ್ ಪ್ರತಿಯೊಂದು ಪಾತ್ರಕ್ಕೂ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದಾರೆ.

  ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಪ್ರಭಾಸ್ ವರ್ಕೌಟ್ ಮತ್ತು ಡಯಟ್ ಬಗ್ಗೆ ಅಭಿಮಾನಿಗಳಿಗೂ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಈಗ ಆದಿಪುರುಷ್ ಸಿನಿಮಾದ ಸಹ ನಟ, ಲಕ್ಷ್ಮಣ ಪಾತ್ರದಾರಿ ಸನ್ನಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

  'ಆದಿಪುರುಷ್' ಅವಘಡ: ದೇವರ ಮೊರೆ ಹೋದ ಚಿತ್ರತಂಡ!'ಆದಿಪುರುಷ್' ಅವಘಡ: ದೇವರ ಮೊರೆ ಹೋದ ಚಿತ್ರತಂಡ!

  ಪಾತ್ರಕ್ಕಾಗಿ ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. 'ಶೇ.50 ಕಾರ್ಬ್ಸ್, ಶೇ.50 ಪ್ರೋಟೀನ್ ಸೇವಿಸುತ್ತಿದ್ದೇವೆ. ಪ್ರತಿದಿನ 10ರಿಂದ 15 ಮೊಟ್ಟೆ ತಿನ್ನುತ್ತಿದ್ದೇವೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ನಾನು ಕಟ್ಟುಮಸ್ತಾಗಿ ಕಾಣಿಸಬೇಕು. ನಾವು ಯಾವುದೇ ಸ್ಟಿರಾಯ್ಡ್ ಸಪ್ಲಿಮಂಟ್ ಗಳನ್ನು ತೆಗೆದುಕೊಳ್ಳುತ್ತಿಲ್ಲ. ನ್ಯಾಚುರಲ್ ಆಗಿ ದೇಹ ಹುರಿಗೊಳಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

  ಬಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಆದಿಪುರುಷ್ ಸಿನಿಮಾದ ಬಗ್ಗೆ ಒಂದಲ್ಲೊಂದು ಸುದ್ದಿ ಕೇಳಿಬರುತ್ತಲೇ ಇದೆ. ಇತ್ತೀಚಿಗೆಷ್ಟೆ ಚಿತ್ರಕ್ಕೆ ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನು ಕನ್ನಡದ ನಟ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  Corona ರೋಗಿಗಳ ಉಸಿರಿಗಾಗಿ ಉಸಿರು ತಂಡಕ್ಕೆ ಗಜ ಬಲ ತಂದ D Boss | Filmibeat Kannada

  ರಾಮನಾಗಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಬಣ್ಣಹಚ್ಚುತ್ತಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಚಿತ್ರದಲ್ಲಿ ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Adipurush Actor Sunny Singh says no steroids only natural bulking for body build.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X