ನಾನಿ ಮತ್ತು ಸಾಯಿ ಪಲ್ಲವಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೋರ್ವ ಸ್ಟಾರ್ ನಟಿ

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಪ್ರೇಮಂ' ಸುಂದರಿ ಕೊನೆಯದಾಗಿ ತಮಿಳು ನಟ ಸೂರ್ಯ ಜೊತೆ 'ಎನ್ ಜಿ ಕೆ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 'ಲವ್ ಸ್ಟೋರಿ' ಮತ್ತು 'ವಿರಾಟ ಪರ್ವಂ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಎರಡೂ ಸಿನಿಮಾಗಳ ಜೊತೆಗೆ ಸಾಯಿ ಪಲ್ಲವಿ ತೆಲುಗು ನಟ ನಾನಿ ಅಭಿನಯದ 'ಶ್ಯಾಮ್ ಸಿಂಗ್ ರಾಯ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 'ಫಿದಾ' ಬ್ಯೂಟಿ ಎರಡನೇ ಬಾರಿ ನಾನಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. 'ಎಂಸಿಎ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಮತ್ತೆ ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ವಿಶೇಷ ಅಂದರೆ ನಾನಿ ಮತ್ತು ಸಾಯಿ ಪಲ್ಲವಿ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು, ಬಾಲಿವುಡ್ ನಟಿ ಅದಿತಿ ರಾವ್ ಹೈದರಿ, ನಾನಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಂತೆ. ಹಾಗಾದರೆ ಸಾಯಿ ಪಲ್ಲವಿ ನಾಯಕಿ ಅಲ್ವಾ? ಎನ್ನುವ ಪ್ರಶ್ನೆ ಮೂಡಬಹುದು, ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಇನ್ನೂ ಇಬ್ಬರು ನಾಯಕಿಯರ ಪಾತ್ರ ಇದೆಯಂತೆ. ಇದೀಗ ಸಾಯಿ ಮತ್ತು ಅದಿತಿ ಇಬ್ಬರು ಫಿಕ್ಸ್ ಆಗಿದ್ದಾರೆ. ಇನ್ನೂ ಓರ್ವ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆ.

 Aditi Rao Hydari Will Join Actor Nani And Sai Pallavi starrer Shaym Singh Rao Movie

ಅದಿತಿ ಮತ್ತು ನಾನಿ ಇಬ್ಬರು 'ವಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ರಿಲೀಸ್ ಆಗುವ ಮೊದಲೇ ಅದಿತಿ, ನಾನಿ ಜೊತೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದಲ್ಲದೆ ತಮಿಳಿನ ಎರಡು ಸಿನಿಮಾಗಳಲ್ಲಿ ಅದಿತಿ ಬ್ಯುಸಿಯಾಗಿದ್ದಾರೆ. ಜೊತೆಗೆ ಹಿಂದಿಯಲ್ಲಿ 'ದಿ ಗರ್ಲ್ ಆನ್ ದಿ ಟ್ರೈನ್' ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.

ಅಂದ್ಹಾಗೆ ಶ್ಯಾಮ್ ಸಿಂಗ್ ರಾಯ್ ಸಿನಿಮಾಗೆ, ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲ ಸಿನಿಮಾಗೆ ನಿರ್ದೇಶನ ಮಾಡಿದ್ದ ರಾಹುಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟ್ಯಾಕ್ಸಿವಾಲ ನಿರೀಕ್ಷೆ ಯಶಸ್ಸು ಕಾಣಲಿಲ್ಲ. ಆದರೀಗ ನಾನಿ ಜೊತೆ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Bollywood Actress Aditi Rao Hydari reportedly join Telugu Actor Nani And Sai Pallavi starrer Shyam Singh Rao film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X