Toxic vs Dacoit: 'ಟಾಕ್ಸಿಕ್'ಗೆ ಹೆದರಲ್ಲ, 'ಜೀರೊ' ಮುಂದೆ 'KGF-1' ಬಂದಿಲ್ವಾ?- ಅಡಿವಿ ಶೇಷ್

ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಸರ್ವೇ ಸಾಮಾನ್ಯ. ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಸರಿಯಾದ ವೀಕೆಂಡ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಸಮಯಕ್ಕೆ ಬೇರೆ ಸಿನಿಮಾಗಳು ಎದುರಾಗುತ್ತದೆ. ಕೆಲವರು ಕ್ಲ್ಯಾಶ್ ಬೇಡ ಅಂತ ರಿಲೀಸ್ ಡೇಟ್ ಬದಲಿಸುತ್ತಾರೆ. ಮತ್ತೆ ಕೆಲವರು ಧೈರ್ಯ ಮಾಡುತ್ತಾರೆ.

ಎರಡು ಸಿನಿಮಾಗಳು ಚೆನ್ನಾಗಿದ್ದಾಗ ಒಟ್ಟಿಗೆ ಬಂದ್ರು ಜನ ಎರಡನ್ನು ನೋಡುತ್ತಾರೆ. ಸುಖಾಸುಮ್ಮನೆ ಕ್ಲ್ಯಾಶ್ ಅಂತ ಹೆದರಿ ಕೂರುವುದು ಸರಿಯಲ್ಲ ಎನ್ನುವುದು ಕೆಲವರ ವಾದ. ತೆಲುಗು ನಟ ಅಡಿವಿ ಶೇಷ್ ಕೂಡ ಇದೇ ಲೆಕ್ಕಾಚಾರದಲ್ಲಿದ್ದಾರೆ. ಮಾರ್ಚ್ 19ರಂದು ತಮ್ಮ 'ಡಕೋಯಿಟ್: ಎ ಲವ್ ಸ್ಟೋರಿ' ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಅದೇ ದಿನ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಸಿನಿಮಾ ಇದು. ಹಾಗಾಗಿ ಬೇರೆ ಸಿನಿಮಾಗಳನ್ನು ಆ ವೀಕೆಂಡ್ ಬಿಡುಗಡೆ ಮಾಡಲು ಹೆದರುವಂತಾಗಿದೆ.

Adivi Sesh Dares Box Office Clash Dacoit A Love Story to Release Opposite Yash s Toxic on March 19

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ 'ಲವ್ & ವಾರ್' ಚಿತ್ರವನ್ನು ಮಾರ್ಚ್ 20ಕ್ಕೆ ತೆರೆಗೆ ತರಲು ನಿರ್ಧರಿಸಲಾಗಿತ್ತು. ಆದರೆ ಕ್ಲ್ಯಾಶ್ ಬೇಡ ಎಂದು ರಿಲೀಸ್ ಡೇಟ್ ಮುಂದೂಡುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ 'ಡಕೋಯಿಟ್: ಎ ಲವ್ ಸ್ಟೋರಿ' ಚಿತ್ರವನ್ನು 'ಟಾಕ್ಸಿಕ್' ಎದುರು ತೆರೆಗೆ ತರ್ತೀವಿ ಎಂದು ನಟ ಅಡಿವಿ ಶೇಷ್ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಡಕೋಯಿಟ್: ಎ ಲವ್ ಸ್ಟೋರಿ' ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಪದೇ ಪದೆ ಬಿಡುಗಡೆ ದಿನಾಂಕ ಬದಲಿಸಿದ್ದು ಈ ಬಾರಿ ಯಾವುದೇ ಕಾರಣಕ್ಕೂ ಹಿಂದಡಿ ಇಡುವುದು ಬೇಡ ಎಂದು ಚಿತ್ರತಂಡ ನಿರ್ಧರಿಸಿದೆ. ಗುಡಿ ಪಾಡ್ವ, ಯುಗಾದಿ ಮತ್ತು ಈದ್ ಒಟ್ಟೊಟ್ಟಿಗೆ ಬರ್ತಿದೆ. ಹಾಗಾಗಿ ಆ ವೀಕೆಂಡ್ ಒಂದಲ್ಲ ಮೂರು ಸಿನಿಮಾ ಬಂದರೂ ಜನ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

Adivi Sesh Dares Box Office Clash Dacoit A Love Story to Release Opposite Yash s Toxic on March 19

"ನಾನು ಯಾವುದೇ ಸಿನಿಮಾ ಮಾಡಲು ಎರಡ್ಮೂರು ವರ್ಷ ತೆಗೆದುಕೊಳ್ಳುತ್ತಿದ್ದೆ. 'ಮೇಜರ್' ಬಳಿಕ ಈ ಸಿನಿಮಾ ಮತ್ತಷ್ಟು ತಡವಾಯಿತು. ಕಾರಣ ನಾನು ಗಾಯಗೊಂಡಿದ್ದೆ. ಹಾಗಾಗಿ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸೋಕೆ ಸಮಯ ಬೇಕಾಯಿತು. ಏನೇ ಆದ್ರು ಒಂದೇ ದಿನ ಬಿಡುಗಡೆಯಾಗುವ ಚಿತ್ರಗಳು ಗೆಲ್ಲಬಹುದು. ನಾನು ಚಿಕ್ಕವನಿದ್ದಾಗ, 'ಲಗಾನ್' ಮತ್ತು 'ಗದರ್' ಚಿತ್ರಗಳು ಒಂದೇ ದಿನ ಬಿಡುಗಡೆ ಆಗಿದ್ದು ನೆನಪಿದೆ. ಎರಡೂ ಚಿತ್ರಗಳು ಕ್ಲಾಸಿಕ್ ಹಿಟ್ ಆಗಿವೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಇದೆಲ್ಲಾ ಮುಖ್ಯ ಅಲ್ಲ. ನನ್ನ ಸ್ವಂತ ಚಿತ್ರ 'ಮೇಜರ್', 'ಸಾಮ್ರಾಟ್ ಪೃಥ್ವಿರಾಜ್' ಎದುರು ಬಂದು ಗೆದ್ದಿತ್ತು. ಒಂದು ಚಿತ್ರ ಚೆನ್ನಾಗಿದ್ದರೆ, ಅದು ತನ್ನ ಪ್ರೇಕ್ಷಕರನ್ನು ಹುಡುಕಿಕೊಳ್ಳುತ್ತದೆ. ಯುಗಾದಿ, ಗುಡಿ ಪಾಡ್ವಾ ಮತ್ತು ಈದ್ ಒಟ್ಟಿಗೆ ಬರ್ತಿದ್ದು ಅದು ಸಂಭ್ರಮಾಚರಣೆ ಸಮಯಯ" ಎಂದು ಅಡಿವಿ ಶೇಷ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ನಟ ಅಡಿವಿ ಶೇಷ್ "2018ರಲ್ಲಿ, ಶಾರುಖ್ ಖಾನ್ ಅವರ 'ಝೀರೋ' ಚಿತ್ರದ ಎದುರು kGF- 1 ತೆರೆಕಂಡು ಗೆದ್ದಿತ್ತು. ಸಿನಿಮಾ ಮೇಕಿಂಗ್ ಪರಿಭಾಷೆಯನ್ನೇ ಅದು ಬದಲಿಸಿತ್ತು. ಆದರೆ ಆಗ 'KGF-1' ಚಿಕ್ಕ ಸಿನಿಮಾ ಆಗಿತ್ತು. ಈಗ ನನ್ನ ಸಿನಿಮಾ ಚಿಕ್ಕದು. ನಾನು ಚಿಕ್ಕವನಾಗಿಯೇ ಚಿತ್ರರಂಗಕ್ಕೆ ಬಂದವನು. ನನ್ನ ವೃತ್ತಿಜೀವನದಲ್ಲಿ ಸದಾ ಅಚ್ಚರಿಗೊಳಿಸುತ್ತಾ ಇರ್ತೀನಿ. ಅದು ನನಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ.

More from Filmibeat

Read more about: toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X