ಡಬಲ್ ಹ್ಯಾಟ್ರಿಕ್ ಬಾರಿಸಿದ ಅಡಿವಿ ಶೇಷ್; ಕೊನೆಯ 6 ಚಿತ್ರಗಳ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು?

ಸೊಂತಮ್ ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಅಡಿವಿ ಶೇಷ್ ಸದ್ಯ ಟಾಲಿವುಡ್‌ನ ಭರವಸೆಯ ನಟನೂ ಹೌದು, ಹಾಗೆಯೇ ನಿರ್ದೇಶಕನೂ ಹೌದು. ಇಲ್ಲಿಯವರೆಗೂ ಹದಿನೆಂಟು ಚಿತ್ರಗಳಲ್ಲಿ ನಟಿಸಿರುವ ಅಡಿವಿ ಶೇಷ್ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿಯೂ ನಟಿಸಿದ್ದಾರೆ. ತನ್ನ ಮೊದಲ ಚಿತ್ರ ಸೊಂತಮ್‌ನಲ್ಲಿ ಸಹನಟನಾಗಿ ನಟಿಸಿದ್ದ ಅಡಿವಿ ಶೇಷ್ ಎರಡನೇ ಚಿತ್ರ ಕರ್ಮ ಮೂಲಕ ಪೂರ್ಣ ಪ್ರಮಾಣದ ನಾಯಕನಾದರು.
ಇನ್ನು ಪವನ್ ಕಲ್ಯಾಣ್ ನಟನೆಯ ಪಂಜಾ ಹಾಗೂ ರವಿತೇಜಾ ನಟನೆಯ ಬಲುಪು ಚಿತ್ರಗಳಲ್ಲೂ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ಈ ಪ್ರತಿಭೆ ನಂತರ ಕಿಸ್ ಎಂಬ ಚಿತ್ರದಲ್ಲಿ ಮತ್ತೆ ನಾಯಕ ನಟನಾಗಿ ಕಾಣಿಸಿಕೊಂಡರಾದರೂ ಬ್ರೇಕ್ ಸಿಗಲಿಲ್ಲ. ಬಳಿಕ ರನ್ ರಾಜಾ ರನ್, ಬಾಹುಬಲಿ ದ ಬಿಗಿನಿಂಗ್, ದೊಂಗಾಟ ಹಾಗೂ ಸೈಜ್ ಜೀರೋ ಚಿತ್ರಗಳಲ್ಲಿ ಮತ್ತೆ ಪೋಷಕ ಪಾತ್ರ ನಿರ್ವಹಿಸಿದ ನಟ ಅಡಿವಿ ಶೇಷ್ 2016ರಲ್ಲಿ ತೆರೆಕಂಡ ಕ್ರೈಮ್ ಥ್ರಿಲ್ಲರ್ 'ಕ್ಷಣಂ' ಮೂಲಕ ನಾಯಕ ನಟನಾಗಿ ಬ್ರೇಕ್ ಪಡೆದುಕೊಂಡರು.
ಕ್ಷಣಂ ಚಿತ್ರದಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲದೇ ಚಿತ್ರಕತೆಯನ್ನೂ ಸಹ ಬರೆದಿದ್ದ ಅಡಿವಿ ಸೇಷ್ ಅಂದಿನಿಂದ ಇಂದಿನವರೆಗೂ ಟಾಲಿವುಡ್‌ನ ಓಡುವ ಕುದುರೆಯಾಗಿದ್ದಾರೆ. ಕ್ಷಣಂ ಚಿತ್ರದಿಂದ ಹಿಡಿದು ಇಲ್ಲಿಯವರೆಗೂ ಅಡಿವಿ ಸೇಷ್ ನಟನೆಯ ಎಲ್ಲಾ ಆರು ಚಿತ್ರಗಳೂ ಸಹ ಹಿಟ್, ಬ್ಲಾಕ್‌ಬಸ್ಟರ್ ಎನಿಸಿಕೊಂಡಿವೆ. ಕ್ಷಣಂ, ಅಮಿ ತೊಮಿ, ಗೂಢಾಚಾರಿ, ಎವರು, ಮೇಜರ್ ಹಾಗೂ ಇತ್ತೀಚೆಗೆ ತೆರೆಕಂಡ ಹಿಟ್ ದಿ ಸೆಕೆಂಡ್ ಕೇಸ್ ಹೀಗೆ ಅಡಿವಿ ಶೇಷ್ ಆರು ಚಿತ್ರಗಳ ಮೂಲಕ ಸದ್ಯ ಡಬಲ್ ಹ್ಯಾಟ್ರಿಕ್ ಬಾರಿಸಿದ್ದಾರೆ.

ಅಡಿವಿ ಸೇಷ್ ನಾಯಕನಾಗಿ ಅಭಿನಯಿಸಿದ ಕೊನೆಯ ಆರು ಚಿತ್ರಗಳ ಬಜೆಟ್ ಹಾಗೂ ಕಲೆಕ್ಷನ್
* ಕ್ಷಣಂ - ಬಜೆಟ್ 1.08 ಕೋಟಿ, ಕಲೆಕ್ಷನ್ - 12 ಕೋಟಿ
* ಅಮಿ ತುಮಿ - ಬಜೆಟ್ 3 ಕೋಟಿ, ಕಲೆಕ್ಷನ್ 9 ಕೋಟಿ
* ಗೂಢಾಚಾರಿ - ಬಜೆಟ್ 6 ಕೋಟಿ, ಕಲೆಕ್ಷನ್ 25 ಕೋಟಿ
* ಎವರು - ಬಜೆಟ್ 8 ಕೋಟಿ, ಕಲೆಕ್ಷನ್ 22 ಕೋಟಿ
* ಮೇಜರ್ - ಬಜೆಟ್ 30 ಕೋಟಿ, ಬಜೆಟ್ 66 ಕೋಟಿ
* ಹಿಟ್ ದ ಸೆಕೆಂಡ್ ಕೇಸ್ - ಬಜೆಟ್ 10 ಕೋಟಿ, ಕಲೆಕ್ಷನ್ ಎರಡು ದಿನಗಳಲ್ಲಿ 21 ಕೋಟಿ ( ಇನ್ನೂ ಪ್ರದರ್ಶನಗೊಳ್ಳುತ್ತಿದೆ )

ದೊಡ್ಡ ದೊಡ್ಡ ಚಿತ್ರಗಳಲ್ಲಿ ಅತಿಥಿ ಪಾತ್ರ
ಅಡಿವಿ ಸೇಷ್ ಟಾಲಿವುಡ್‌ನ ಸ್ಟಾರ್ ನಟರ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಮೊದಲಿಗೆ ಅನುಷ್ಕಾ ಶೆಟ್ಟಿ ಅಭಿನಯದ ಸೈಜ್ ಜೀರೊ, ನಂತರ ನಾಗಾರ್ಜುನ ಅಭಿನಯದ ಊಪಿರಿ ಹಾಗೂ ಸಮಂತಾ ರುತ್ ಪ್ರಭು ಅಭಿನಯದ ಓ ಬೇಬಿ ಚಿತ್ರಗಳಲ್ಲಿ ನಟ ಅಡಿವಿ ಸೇಷ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಾಹುಬಲಿಯಲ್ಲೂ ನಟನೆ
ಬಾಹುಬಲಿ ದಿ ಬಿಗಿನಿಂಗ್ ಚಿತ್ರದಲ್ಲೂ ಸಹ ಅಡಿವಿ ಸೇಷ್ ಬಣ್ಣ ಹಚ್ಚಿದ್ದರು. ಚಿತ್ರದಲ್ಲಿ ಭದ್ರುಡು ಪಾತ್ರ ನಿರ್ವಹಿಸಿದ್ದ ಅಡಿವಿ ಸೇಷ್ ಬಲ್ಲಾಳದೇವನ ದತ್ತು ಪುತ್ರನಾಗಿ ತಂದೆಯಂತೆಯೇ ರೋಷಾವೇಷದ ಅಭಿನಯ ಮಾಡಿದ್ದರು. ಇಷ್ಟೇ ಅಲ್ಲದೇ ಅಡಿವಿ ಸೇಷ್ ಸ್ವತಃ ಚಿತ್ರ ಕತೆಗಾರನಾಗಿಯೂ ಇರುವ ಅಡಿವಿ ಸೇಷ್ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದು, ತೆಲುಗು ಚಿತ್ರರಂಗದ ಆಲ್‌ರೌಂಡರ್ ಆಗಿದ್ದಾರೆ.


Click it and Unblock the Notifications











