9 ವರ್ಷದ ನಂತರ 'ಡಾರ್ಲಿಂಗ್'ಗೆ ಜೊತೆಯಾದ ಕಾಜಲ್

ನಟಿ ಕಾಜಲ್ ಅಗರ್ವಾಲ್ ಸದ್ಯ, ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಕಾಜಲ್ ಪಾಲಾಗಿದೆ.

9 ವರ್ಷದ ನಂತರ 'ಡಾರ್ಲಿಂಗ್'ಗೆ ಕಾಜಲ್ ಅಗರ್ವಾಲ್ ಜೊತೆಯಾಗಿದ್ದಾರೆ. ಅಂದರೆ, ಪ್ರಭಾಸ್ ರೊಂದಿಗೆ 9 ವರ್ಷಗಳ ಬಳಿಕ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಸಾಹೋ' ಸಿನಿಮಾ ಆದ ಮೇಲೆ ಪ್ರಭಾಸ್ ಹೊಸ ಸಿನಿಮಾ ಶುರು ಮಾಡಿದ್ದಾರೆ. ಈ ಸಿನಿಮಾಗೆ 'ಜಾನ್' ಎಂಬ ಶೀರ್ಷಿಕೆ ಇಡಲಾಗಿದೆ.

'ಜಾನ್' ಸಿನಿಮಾದಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಹಾಗೆಂದ ಕೂಡಲೇ ಕಾಜಲ್ ಈ ಸಿನಿಮಾದ ನಾಯಕಿ ಎಂದುಕೊಂಡರೆ ತಪ್ಪಾಗುತ್ತದೆ. ಸಿನಿಮಾದ ವಿಶೇಷ ಪಾತ್ರದಲ್ಲಿ ಮಾತ್ರ ಕಾಜಲ್ ನಟಿಸುತ್ತಿದ್ದಾರೆ. 'ಜಾನ್'ಗೆ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ.

After 9 Years Kajal Aggarwal And Prabhas Came Together For Jaan Movie

'ಡಾರ್ಲಿಂಗ್' ಸಿನಿಮಾದ ಮೂಲಕ ಮೊದಲ ಬಾರಿಗೆ ಪ್ರಭಾಸ್ ಹಾಗೂ ಕಾಜಲ್ ಒಂದಾಗಿದ್ದರು. ಆ ನಂತರ 'ಮಿಸ್ಟರ್ ಫರ್ಫೆಕ್ಟ್' ಸಿನಿಮಾ ಮಾಡಿದರು. ಅನೇಕ ವರ್ಷಗಳ ಹಿಂದೆ ಈ ಜೋಡಿ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಅದೇನೇ ಇದ್ದರೂ ಈ ಎರಡು ಸಿನಿಮಾಗಳ ಬಳಿಕ, ದೊಡ್ಡ ಗ್ಯಾಪ್ ನಂತರ, ಈ ಜೋಡಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದೆ.

'ಜಾನ್' ಸಿನಿಮಾವನ್ನು ಕೆ ಕೆ ರಾಧಕೃಷ್ಣ ನಿರ್ದೇಶಕ ಮಾಡುತ್ತಿದ್ದಾರೆ. ಹಿಂದಿ, ತಮಿಳು, ತೆಲುಗಿನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 2020ರ ಕ್ರಿಸ್ಮಸ್ ಗೆ ಸಿನಿಮಾ ಬಿಡುಗಡೆ ಆಗುತ್ತಿದೆ.

More from Filmibeat

English summary
After 9 years Kajal Aggarwal and Prabhas came together for Jaan movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X