Daaku Maharaaj Box Office Day 2 ; 2ನೇ ದಿನ ಡಾಕು ಮಹಾರಾಜ್ ದರ್ಬಾರ್ ಹೇಗಿದೆ ? ಹೊಡೆಯಿತಾ ಸಂಕ್ರಾಂತಿ ಲಾಟರಿ ?
ಸಾಮಾನ್ಯವಾಗಿ ಹಬ್ಬ ಹರಿದಿನ ಬಂದರೆ ರಜೆಯ ಮಜೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಎಲ್ಲ ಭಾಷೆಯಲ್ಲಿ ದೊಡ್ಡ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಪ್ರೇಕ್ಷಕರು ಕೂಡ ಚಿತ್ರಮಂದಿರಕ್ಕೆ ತೆರಳಿ ಈ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಕೇಕೆ ಹೊಡೆಯುತ್ತಾರೆ. ಇದರಿಂದ ಅಂದುಕೊಂಡತೆ ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬೀಳುತ್ತೆ. ನಿರ್ಮಾಪಕರಿಗೆ ಭರ್ಜರಿ ಲಾಭ ಕೂಡ ಆಗುತ್ತೆ. ಆದರೆ, ಅಲ್ಲೊಂದು.. ಇಲ್ಲೊಂದು ಸಿನಿಮಾ ಈ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ, ಹಣ ಕೊಳ್ಳೆ ಹೊಡೆಯುವಲ್ಲಿ ವಿಫಲವಾಗುತ್ತವೆ. ಉದಾಹರಣೆಗೆ ಡಾಕು ಮಹಾರಾಜ್.
ಹೌದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬಂದ ಡಾಕು ಮಹಾರಾಜ್ ಮೊದಲ ದಿನ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ₹25.35 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಉತ್ತಮವಾದ ಆರಂಭವನ್ನು ಪಡೆದಿತ್ತು. ಇನ್ನು, ನಿನ್ನೆ ರಜೆ ಇತ್ತು. ಈ ಹಿನ್ನೆಲೆ ಭಾನುವಾರಕ್ಕಿಂತ ಡಾಕು ಮಹಾರಾಜ್ ಅಬ್ಬರ ಸೋಮವಾರ ಹೆಚ್ಚಿರುತ್ತೆ ಎಂದು ಹೇಳಲಾಗಿತ್ತು. ತೆಲುಗು ಉದ್ಯಮಕ್ಕೆ ಈ ನಂಬಿಕೆ ಕೂಡ ಇತ್ತು. ಆದರೆ, ಅಂದುಕೊಂಡಿದ್ದು ಒಂದು ಆಗಿದ್ದು ಮತ್ತೊಂದು ಎಂಬಂತೆ ಡಾಕು ಮಹರಾಜ್ ಗಳಿಕೆ ಏರುವ ಬದಲು ನಿನ್ನೆ ಶೇಕಡಾ 50% ಕುಸಿತ ಕಂಡಿದೆ. ಎರಡನೇ ದಿನ ಚಿತ್ರ ಕೇವಲ ₹13.5 ಕೋಟಿಯನ್ನು ಮಾತ್ರ ಗಳಿಸಿದೆ.

ಸಹಜವಾಗಿ ಡಾಕು ಮಹಾರಾಜ್‌ನ ಎರಡನೇ ದಿನದ ಗಳಿಕೆಯನ್ನು ಕಂಡು ಬಾಲಯ್ಯ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಮೂರನೇ ದಿನ ಅಂದರೆ ಇಂದು ಚಿತ್ರದ ಗಳಿಕೆಯಲ್ಲಿ ಏರಿಕೆಯಾಗಬಹುದು ಎನ್ನುವ ಆಶಾಭಾವನೆಯಲ್ಲಿ ಕಾದು ಕುಂತಿದೆ.
ಇನ್ನು ಡಾಕು ಮಹಾರಾಜ್ ಮಾತ್ರವಲ್ಲ ಸಂಕ್ರಾಂತಿಯ ರಜೆ ಹಬ್ಬದ ಪ್ರಯುಕ್ತ ಆಂಧ್ರದ ಚಿತ್ರಮಂದಿರಗಳಲ್ಲಿ ಮಾತ್ರ ಅಲ್ಲದೇ ಭಾರತದೆಲ್ಲೆಡೆ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರ ಕೂಡ ತೆರೆಗೆ ಬಂದಿದೆ. ಸಾಲದಕ್ಕೆ ಪುಷ್ಪರಾಜ್ ಆರು ವಾರವಾದರೂ ಚಿತ್ರಮಂದಿರದಿಂದ ಕದಲುತ್ತಿಲ್ಲ. ಜಾಗ ಖಾಲಿ ಮಾಡುತ್ತಿಲ್ಲ. ಡಾಕು ಮಹಾರಾಜ್‌ಗೆ ಈ ಎರಡು ಚಿತ್ರಗಳಿಂದ ಭಾರೀ ಹೊಡೆತ ಬಿದ್ದಿದೆ. ಹೀಗಾಗಿಯೇ ಹಬ್ಬದ ಪ್ರಯುಕ್ತ ಕೇವಲ ಡಾಕು ಮಹಾರಾಜ್ ತೆರೆಗೆ ಬಂದಿದ್ದರೆ ಆ ಕಥೆಯೇ ಬೇರೆ ಇರುತ್ತಿತ್ತು ಎನ್ನುವ ಮಾತು ಸದ್ಯ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.
ಇನ್ನು ಹೈದ್ರಾಬಾದ್‌ನಲ್ಲಿ ನಿನ್ನೆ ಈ ಚಿತ್ರದ ಆಕ್ಯೂಪೆನ್ಸಿ ಶೇಕಡಾ 46.50% ಇತ್ತು. ಬೆಂಗಳೂರಿನಲ್ಲಿ ಸುಮಾರು 350 ಪ್ರದರ್ಶನವನ್ನು ನಿನ್ನೆ ಡಾಕು ಮಹಾರಾಜ್ ಕಂಡಿದ್ದು ಶೇಕಡಾ 18.50% ಆಕ್ಯೂಪೆನ್ಸಿ ಇತ್ತು ಎಂದು ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಮಾಡಿದೆ. ಇನ್ನುಳಿದಂತೆ ಇಂದು ಸಂಕ್ರಾಂತಿ ರಜೆ ಇರುವ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಟಾಲಿವುಡ್ ಸಿನಿಮಾ ಪಂಡಿತರಿಗಿದೆ. ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ಚರಣ್ ಮತ್ತು ಶಂಕರ್ ಎಡವಿದ ಹಿನ್ನೆಲೆ ಡಾಕು ಮಹಾರಾಜ್ ಚಿತ್ರಕ್ಕೆ ಲಾಭವಾಗುವ ಸಾಧ್ಯತೆ ಇದೆ. ಅಂದ್ಹಾಗೇ ಈಗಾಗಲೇ ಅಖಂಡ, ವೀರನರಸಿಂಹ ರೆಡ್ಡಿ, ಭಗವಂತ ಕೇಸರಿ ಚಿತ್ರಗಳ ಮೂಲಕ ಒಂದಾದ ಮೇಲೊಂದು ಗೆಲುವನ್ನು ಕಂಡ ಬಾಲಯ್ಯ ಡಾಕು ಮಹಾರಾಜ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಚಿತ್ರತಂಡದ ಜೊತೆ ಪಾರ್ಟಿಯನ್ನು ಕೂಡ ಮಾಡಿ ಸಂಭ್ರಮಿಸಿದ್ದಾರೆ. ಅನಂತಪುರದಲ್ಲಿ ದೊಡ್ಡ ಸಂಭ್ರಮಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಘೋಷಣೆ ಮಾಡಬೇಕಿದೆ.


Click it and Unblock the Notifications











