ಆಚಾರ್ಯ ಫ್ಲಾಪ್: ಕಮಲ್ ಹಾಸನ್ ನೋಡಿ ಕಲೀರಿ ಎಂದ ಚಿರಂಜೀವಿ ಫ್ಯಾನ್ಸ್!

ತೆಲುಗಿನಲ್ಲಿ ಬಹು ನಿರೀಕ್ಷೆಯ ಜೊತೆಗೆ ತೆರೆಗೆ ಬಂದ ಮಲ್ಟಿ ಸ್ಟಾರರ್ ಸಿನಿಮಾ 'ಆಚಾರ್ಯ'. ಈ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಚಿತ್ರದಲ್ಲಿ ರಾಮ್‌ ಚರಣ್, ಚಿರಂಜೀವಿ ಇಬ್ಬರು ಸ್ಟಾರ್‌ಗಳ ಅಭಿನಯ ಇದೆ. ಈ ಚಿತ್ರದ ತೆಲುಗಿನ ಮೆಗಾ ಕುಟುಂಬದ ಸಿನಿಮಾ ಆಗಿತ್ತು. ಅದರೆ ಸಿನಿಮಾ ರಿಲೀಸ್ ಬಳಿಕ ಇದ್ದ ನಿರೀಕ್ಷೆಗಳೆಲ್ಲವೂ ಸುಳ್ಳಾಗಿದೆ.

ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿರುವುದು ಮಾತ್ರ ವಿಚಾರ ಅಲ್ಲ. ಬದಲಿಗೆ ಈ ಸಿನಿಮಾ ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿದೆ. ಸಿನಿಮಾಗಾಗಿ ಖರ್ಚು ಮಾಡಿದ ಹಣ ಕೂಡ ಸರಿಯಾಗಿ ವಾಪಸ್ ಬಂದಿಲ್ಲವಂತೆ. ಹಾಗಾಗಿ ಈ ಸಿನಿಮಾವನ್ನು ವರ್ಷದ ಫ್ಲಾಪ್ ಸಿನಿಮಾ ಎಂದು ಸಿನಿಮಾ ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ.

ಚಿರಂಜೀವಿ ಮತ್ತು ರಾಮ್‌ ಚರಣ್ ತೇಜ ಇಬ್ಬರು ಇದ್ದರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿದೆ. ಹಾಗಾಗಿ ಮೆಗಾ ಕುಟುಂಬದ ಅಭಿಮಾನಿಗಳು ಚಿರಂಜೀವಿಗೆ ಬುದ್ಧಿ ಹೇಳುತ್ತಿದ್ದಾರೆ. ಅಂದರೆ ಈಗಿನ ಕಾಲಘಟ್ಟಕ್ಕೆ ಯಾವ ರೀತಿ ಸಿನಿಮಾ ಮಾಡಬೇಕು, ಪ್ರೇಕ್ಷಕರು ಯಾವ ರೀತಿ ಸಿನಿಮಾವನ್ನು ಅಪೇಕ್ಷೆ ಮಾಡುತ್ತೆ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

After Achrya Flop Megastar Chiranjeevi Fans Requesting For A Mass Movie Like Kamal Haasans Vikram.

ನಟ ಚಿರಂಜೀವಿ, ಕಮಲ್ ಹಾಸನ್‌ರನ್ನು ನೋಡಿ ಕಲಿಯಬೇಕಂತೆ. ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿದೆ. 'ವಿಕ್ರಂ' ಮಾಸ್ ಟ್ರೈಲರ್ ಮತ್ತು ಕಮಲ್ ಹಾಸನ್ ಲುಕ್‌ಗೆ ಸಿನಿಪ್ರಿಯರು ಶಿಳ್ಳೆ ಹೊಡೆಯುತ್ತಿದ್ದಾರೆ. ಟ್ರೈಲರ್‌ನಲ್ಲಿ ಕಮಲ್ ಹಾಸನ್‌ರನ್ನು ಜನ ಮೆಚ್ಚಿಕೊಂಡಿದ್ದಾರೆ.

ಹಾಗಾಗಿ ಕಮಲ್ ಹಾಸನ್ ರೀತಿಯಲ್ಲಿ ಒಂದು ಮಾಸ್ ಸಿನಿಮಾ ಮಾಡಿ, ವಿಕ್ರಂ ಸಿನಿಮಾದ ರೀತಿಯಲ್ಲಿ ಒಂದು ಸಿನಿಮಾ ಮಾಡಿ ಎಂದು ಅಭಿಮಾನಿಗಳು ಚಿರಂಜೀವಿ ಅವರಿಗೆ ಹೇಳುತ್ತಿದ್ದಾರೆ. ಈ ಮೂಲಕ ಚಿರಂಜೀವಿಯನ್ನು ಪಕ್ಕಾ ಮಾಸ್ ಅವತರದಲ್ಲಿ ಸಿನಿಮಾ ಪರದೆಯ ಮೇಲೆ ನೋಡ ಬಯಸುತ್ತಾರೆ ಎನ್ನುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.

After Achrya Flop Megastar Chiranjeevi Fans Requesting For A Mass Movie Like Kamal Haasans Vikram.

ಚಿರಂಜೀವಿಯ ಮುಂದಿನ ಸಿನಿಮಾ 'ಗಾಡ್ ಫಾದರ್'. ಇದು ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ 'ಲುಸೀಫರ್' ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಅಷ್ಟೇನೂ ಮಾಸ್ ಅಂಶಗಳು ಇರುವುದಿಲ್ಲ. ಇದು ರಾಜಕೀಯ ಕಥಾ ಹಂದರ ಹೊಂದಿರುವ ಸಿನಿಮಾ. 'ಲುಸಿಫರ್' ಸಿನಿಮಾಗೆ ಹೋಲಿಸಿದೆ, ಇಲ್ಲಿ ಚಿರಂಜೀವಿ ಪಾತ್ರ ಸಟಲ್ ಆಗಿ ಇರುತ್ತದೆ.

ಇನ್ನು ಆಚಾರ್ಯ ಸಿನಿಮಾದ ಸೋಲಿನಿಂದ ಚಿರಂಜೀವಿ ಹಲವು ಪಾಠಗಳನ್ನು ಕಲಿತಿರುತ್ತಾರೆ. ಅದನ್ನು ಮುಂದಿನ ಸಿನಿಮಾಗಳಲ್ಲಿ ಮಾಡದೇ ಇರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅವರ ಮಾಸ್ ಸಿನಿಮಾ ಯಾವಾಗ ಬರಲಿದೆ ಎನ್ನುವುದಕ್ಕೆ ಅಭಿಮಾನಿಗಳು ಕಾಯಲೇ ಬೇಕು. ಗಾಡ್ ಫಾದರ್ ನಂತರ ಬರುವ 'ಭೋಲ ಶಂಕರ್' ಹೇಗೆ ಮೂಡಿ ಬರಲಿದೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
After Achrya Flop Megastar Chiranjeevi Fans Requesting For A Mass Movie like Kamal Haasan's Vikram, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X