Prabhas-Anushka: ಮತ್ತೆ ತೆರೆ ಮೇಲೆ ಒಂದಾಗುತ್ತಿರುವ ಪ್ರಭಾಸ್ ಮತ್ತು ಅನುಷ್ಕಾ ಜೋಡಿ !
'ಬಾಹುಬಲಿ' ಬಿಡುಗಡೆ ನಂತರ ಪ್ರಭಾಸ್ ಮತ್ತು ಅನುಷ್ಕಾ ಮದುವೆ ಬಗ್ಗೆ ಹರಿದಾಡಿದ ಗಾಸಿಪ್‌ಗಳು ಒಂದೆರಡಲ್ಲ. ತಾವಿಬ್ಬರೂ ಒಳ್ಳೆ ಸ್ನೇಹಿತರು ಅನ್ನೋ ಮೂಲಕ ಈ ಗಾಸಿಪ್ ಅನ್ನು ತಳ್ಳಿ ಹಾಕಲಾಗುತ್ತಿದ್ದರು. ಇವರಿಬ್ಬರ ನಡುವೆ ಏನೋ ಇದೆ ಅನ್ನೋ ಡೌಟ್ ಇದೆ. ಅನುಷ್ಕಾ ಶೆಟ್ಟಿ, ಪ್ರಭಾಸ್ ಇಬ್ಬರೂ 'ಬಾಹುಬಲಿ' ಚಿತ್ರದಲ್ಲಿ ಮಾಡಿದ ಮೋಡಿ ಎಲ್ಲಾ ಕಡೆಯೂ ವ್ಯಾಪಿಸಿತ್ತು. ಚಿತ್ರ ಭರ್ಜರಿ ಹಿಟ್ ಆಗುತ್ತಿದ್ದಂತೆಯೇ ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ಮದುವೆಯಾಗುತ್ತಾರೆ. ತೆರೆಯ ಮೇಲಿನ ಸೂಪರ್ ಜೋಡಿ ರಿಯಲ್ ಲೈಫ್‌ನಲ್ಲೂ ಜೊತೆಯಾಗಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದಕ್ಕೆ ಸ್ವತಃ ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ ನೀಡಿ 'ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ, ಸೂಕ್ತ ಸಂದರ್ಭದಲ್ಲಿ ನಿನ್ನ ಮದುವೆ ನಿರ್ಧಾರ ಪ್ರಕಟ ಮಾಡುತ್ತೇನೆ' ಎಂದು ಹೇಳಿಕೊಂಡ ಮೇಲೆಯೂ ಇವರಿಬ್ಬರ ಬಗ್ಗೆ ಗಾಸಿಪ್ ಹರಿದಾಡುತ್ತಲೇ ಇದೆ. ಜೊತೆಗೆ 'ಬಾಹುಬಲಿ'ಯಲ್ಲಿ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಯಾವಾಗ ಒಂದಾಗುತ್ತೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತೆ. ಈ ಬಗ್ಗೆ ಇದೀಗ ಒಂದು ಗುಸು ಗುಸು ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದ್ದು ಮತ್ತೆ ಈ ಮ್ಯಾಜಿಕಲ್ ಜೋಡಿ ತೆರೆಮೇಲೆ ಒಂದಾಗಲಿದ್ದಾರಂತೆ.
ಸ್ವತಃ ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಸಕ್ಸಲ್‌ಫುಲ್ ನಿರ್ದೇಶಕ ಮಾರುತಿ ಈಗ ಪ್ರಭಾಸ್‌ಗೆ ಹೊಸದೊಂದು ಸಿನಿಮಾ ಮಾಡಲು ಮುಂದಾಗಿದ್ದು, ಆ ಸಿನಿಮಾಗೆ 'ರಾಜ ಡಿಲಕ್ಸ್' ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮಾರುತಿ ಈವರೆಗೂ ಮಾಡಿರುವುದೆಲ್ಲಾ ಮೀಡಿಯಂ ಬಜೆಟ್ ಸಿನಿಮಾ. ಪ್ಯಾನ್ ಇಂಡಿಯಾ ಸ್ಟಾರ್ ನಟರಿಗೆ ಈವರೆಗೂ ನಿರ್ದೇಶನ ಮಾಡಿಲ್ಲ. ಆದರೆ 'ರಾಜ ಡಿಲಕ್ಸ್' ಮೂಲಕ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್‌ಗೆ ಸಿನಿಮಾ ಮಾಡುವ ಅವಕಾಶವನ್ನು ಮಾರುತಿ ಪಡೆದುಕೊಂಡಿದ್ದಾರೆ. ಇದೀಗ ಇದೇ ಸಿನಿಮಾದ ಮೂವರು ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರಾಗಿರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಈ ಸಿನಿಮಾದ ಮಾತುಕತೆಯನ್ನು ನಡೆಸಲಾಗಿದ್ದು ಪ್ರಭಾಸ್ ಜೊತೆ ನಟಿಸಲು ಅನುಷ್ಕಾ ಶೆಟ್ಟಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನುಳಿದಂತೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಚಿತ್ರ ಯಾವ ರೀತಿ ಮೂಡಿಬರಲಿದೆ? ಕಥೆ ಏನು? ಎಂಬ ಬಗ್ಗೆ ಇನ್ನು ಮಾಹಿತಿ ಹೊರ ಬಿದ್ದಿಲ್ಲ.

ಆದರೆ ಈ ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ನಟಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭವಾಗಲಿದ್ದು ಆಗ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬರಲಿದೆ. ಈ ಸುದ್ದಿ ತಿಳಿದು ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದು ಪ್ರಭಾಸ್ ಮತ್ತು ಅನುಷ್ಕಾರನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.


Click it and Unblock the Notifications











