ಬೆಂಗಳೂರು ಬಳಿಕ ಮೈಸೂರಿನಲ್ಲಿ ತೆಲುಗು ಸ್ಟಾರ್ ನಾಗಾರ್ಜುನ

ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ಹಿನ್ನೆಲೆ. ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದರು. ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯ ಸಲುವಾಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಜೊತೆಗೆ ಅಪ್ಪು ಬಗ್ಗೆ ಮಾತನಾಡಿ ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದರು. ಈಗ ಬೆಂಗಳೂರು ಬಳಿಕ ಕರ್ನಾಟಕದ ಮತ್ತೊಂದು ಊರಿಗೆ ನಾಗಾರ್ಜುನ ಬಂದಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಕಡೆ ನಾಗಾರ್ಜುನ ಪ್ರಯಾಣ ಬೆಳೆಸಿದ್ದಾರೆ. ರಮ್ಯ ಕೃಷ್ಣ, ನಾಗಾರ್ಜುನ, ನಾಗ ಚೈತನ್ಯ, ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮೈಸೂರಿಗೆ ಆಗಮಿಸುತ್ತ ಇದ್ದಾರೆ.

ನಾಗಾರ್ಜುನ ಮೈಸೂರಿಗೆ ಬಂದಿರುವುದು ಯಾರನ್ನೋ ಭೇಟಿ ಮಾಡಲು ಅಲ್ಲ. ಬದಲಿಗೆ ಸಿನಿಮಾ ಚಿತ್ರೀಕರಣಕ್ಕಾಗಿ. ನಾಗಾರ್ಜುನ ಅಭಿನಯದ ಮುಂದಿನ ಸಿನಿಮಾ ಬಂಗಾರ ರಾಜು ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಮುಂದಿನ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲೇ ಮಾಡಿ ಮುಗಿಸಲಿದೆ ಚಿತ್ರ ತಂಡ. ಸದ್ಯ ಇಡೀ ಚಿತ್ರ ತಂಡ ಮೈಸೂರಿನಲ್ಲಿ ಠಿಕಾಣಿ ಹೂಡಿದೆ. ಮೈಸೂರಿನಲ್ಲಿ ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಣ ಮಾಡಲಾಗುತ್ತದೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೆಲವು ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಚಿತ್ರದ ಮೇಲೆ ನಿರೀಕ್ಷೆಯೂ ದುಪ್ಪಟ್ಟು ಇದೆ. ಕಾರಣ ಬಂಗಾರ ರಾಜು ಪಾತ್ರ ಸೃಷ್ಟಿ ಆಗಿದ್ದು ಸೊಗ್ಗಾಡೆ ಚಿನ್ನ ನಾಯ್ನ ಸಿನಿಮಾದಲ್ಲಿ. ಈ ಚಿತ್ರ ಭಿನ್ನ ಆಲೋಚನೆ ಇಟ್ಟು ಕೊಂಡು ಮೂಡಿ ಬಂದಿತ್ತು. ರಿಲೀಸ್‌ ಬಳಿಕ ಉತ್ತಮ ಪ್ರಶಂಸೆ ಗಿಟ್ಟಿಸಿ ಕೊಂಡು ಹಿಟ್‌ ಲಿಸ್ಟ್‌ ಸೇರಿತ್ತು.

ನಾಗಾರ್ಜುನ, ರಮ್ಯ ಕೃಷ್ಣ ಜೋಡಿ ಸಿನಿ ಪ್ರಿಯರ ಮನ ಗೆದ್ದಿತ್ತು. ಹಾಗಾಗಿ ಇದೀಗ ಈ ಚಿತ್ರದ ಮೇಲು ಎಲ್ಲಿಲ್ಲದ ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ಬಂಗಾರ ರಾಜು ಪಾತ್ರ ಹೇಗೆ ಇರಲಿದೆ? ರಮ್ಯಾ ಕೃಷ್ಣ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ. ಜೊತೆಗೆ ನಾಗಾರ್ಜುನ ಪುತ್ರ ನಾಗಚೈತನ್ಯ ಮತ್ತು ಉಪ್ಪೇನ ಚಿತ್ರದ ಖ್ಯಾತಿಯ ನಟಿ ಕೃತಿ ಶೆಟ್ಟಿ ಕೂಡ ವಿಶೇಷ ಪಾತ್ರಗಳಲ್ಲಿ ಅಭಿನಯಿಸುತ್ತ ಇದ್ದಾರೆ. ಈ ಚಿತ್ರವನ್ನು ಕೃಷ್ಣ ಕುರಸಲ ನಿರ್ದೇಶನ ಮಾಡುತ್ತಿದ್ದಾರೆ. ಇಂದಿನಿಂದ ಮೈಸೂರಿನಲ್ಲಿ ಭರ್ಜರಿ ಚಿತ್ರೀಕರಣ ಆರಂಭ ಆಗುತ್ತಿದೆ. ಚಿತ್ರೀಕರಣದಲ್ಲಿ ರಮ್ಯ ಕೃಷ್ಣ, ನಾಗಾರ್ಜುನ್, ನಾಗ ಚೈತನ್ಯ, ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಭಾಗಿ ಆಗಲಿದ್ದಾರೆ.

After Bengaluru Actor Akkineni Nagarjuna In Mysore

ಈ ಚಿತ್ರಕ್ಕೂ ಕನ್ನಡ ಚಿತ್ರ ರಂಗಕ್ಕೂ ನಂಟಿದೆ. ತೆಲುಗಿನ ಸೊಗ್ಗಾಡೆ ಚಿನ್ನ ನಾಯ್ನ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಿತ್ತು. ಮತ್ತೆ ಹುಟ್ಟಿ ಬಾ ಉಪೇಂದ್ರ ಎನ್ನುವ ಟೈಟಲ್ ಅಡಿಯಲ್ಲಿ ಈ ಚಿತ್ರ ಕನ್ನಡಕ್ಕೆ ಬಂತು. ಈ ಚಿತ್ರದಲ್ಲಿ ಉಪೇಂದ್ರ ಬಂಗಾರ ರಾಜು ಪಾತ್ರವನ್ನು ನಿಭಾಯಿಸಿದ್ದರು. ವಿಶೇಷ ಅಂದ್ರೆ ಇದೇ ಸಿನಿಮಾದ ಮೂಲಕ ನಟಿ ಪ್ರೇಮಾ ಮತ್ತೆ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದರು. ಕೆಲ ವರ್ಷಗಳು ಸಿನಿಮಾ ರಂಗದಿಂದ ದೂರ ಉಳಿದು ಬಿಟ್ಟಿದ್ದ ನಟಿ ಪ್ರೇಮಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು ಈ ಸಿನಿಮಾದ ಮೂಲಕ. ನಟ ಉಪೇಂದ್ರ ಪತ್ನಿ ಪಾತ್ರದಲ್ಲಿ ಪ್ರೇಮ ಕಾಣಿಸಿ ಕೊಂಡಿದ್ದರು. ಅವರ ಈ ಪಾತ್ರಕ್ಕೆ ಉತ್ತಮ ಹೆಸರು ತಂದು ಬಂದಿತ್ತು.

ಪ್ರೇಮಾ ಪಾತ್ರಕ್ಕೆ ಪ್ರೇಕ್ಷಕರು ಮನ ಸೋತಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ವಿಶೇಷತೆಗಳಿಂದ ದಾಖಲೆ ಮಾಡಿದೆ. ಇದೀಗ ತೆಲುಗಿನಲ್ಲಿ ಬಂಗಾರ ರಾಜು ಆಗಿ ಮುಂದುವರೆದ ಭಾಗ ನಿರ್ಮಾಣ ಆಗುತ್ತಿದೆ. ಕನ್ನಡದಲ್ಲಿ ಕೂಡ ಈ ಚಿತ್ರದ ಮುಂದುವರೆದ ಭಾಗ ಬರಲಿದೆಯಾ ಎನ್ನುವ ಕುತೂಹಲ ಸದ್ಯಕ್ಕೆ ಸೃಷ್ಟಿ ಆಗಿದೆ. ಮತ್ತೆ ಉಪ್ಪಿ ಜೊತೆಗೆ ಪ್ರೇಮಾ ಸಿನಿಮಾ ಮಾಡುತ್ತಾರ ಎನ್ನುವ ಕುತೂಹಲ ಕನ್ನಡಿಗರಲ್ಲಿ ಸೃಷ್ಟಿಯಾಗಿದೆ . ಸದ್ಯ ಸಾಂಪ್ರದಾಯಿಕ ನಗರಿ ಮೈಸೂರಿನಲ್ಲಿ ಬಂಗಾರ ರಾಜು ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಬಹುಶಃ ಈ ಚಿತ್ರ ತೆರೆ ಕಂಡ ಬಳಿಕ ಇದು ಕನ್ನಡಕ್ಕೆ ಬರುತ್ತದೆಯಾ? ಇಲ್ಲವ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

More from Filmibeat

English summary
Actor Akkineni Nagarjuna is In Mysore For Bangara Raju Movie Shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X