ವಿಚ್ಛೇದನದ ಬಳಿಕವೂ ಸಮಂತಾ ದಾರಿಯಲ್ಲೇ ನಾಗಚೈತನ್ಯ!

ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಬೇರೆ, ಬೇರೆ ಆಗಿದ್ದು ಆಗಿದೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದು ಆಗಿದ್ದೆ. ಆದರೆ ಅದ್ಯಾಕೋ ಈ ಜೋಡಿ ದೂರ ಆದರೂ ಕೂಡ ಇವರ ಹೆಸರಲ್ಲಿ ಸಾಲು ಸಾಲು ಸುದ್ದಿಗಳು ಹರಿದಾಡುತ್ತಿವೆ. ಇಬ್ಬರ ವಿಚಾರವಾಗಿ ಒಂದಲ್ಲಾ ಒಂದು ಸಮಾಚಾರ ಹರಿದಾಡುತ್ತಲೆ ಇದೆ.

ಈಗ ಮತ್ತೆ ನಾಗಚೈತನ್ಯ ಮತ್ತು ಸಮಂತಾ ಒಂದೇ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಹೌದು ನಾಗಚೈತನ್ಯ ನಟಿ ಸಮಂತಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಮಂತಾ ಗೆದ್ದು ತೋರಿಸಿದ ಹಾದಿಯಲ್ಲಿ ಈಗ ನಾಗಚೈತನ್ಯ ಸಾಗುತ್ತಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ವೆಬ್ ಸರಣಿಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ.

ನಾಗಚೈತನ್ಯ ಅವರ ಇತ್ತೀಚಿನ ಎರಡು ಚಿತ್ರಗಳು 'ಲವ್ ಸ್ಟೋರಿ' ಮತ್ತು 'ಬಂಗಾರ ರಾಜು' ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿವೆ. ಬ್ಯಾಕ್​ ಟು ಬ್ಯಾಕ್​ ಹಿಟ್ ಚಿತ್ರ ನೀಡಿದ ಖುಷಿಯಲ್ಲಿರೋ ನಾಗಚೈತನ್ಯ ಇದೀಗ ವೆಬ್ ಸೀರೀಸ್ ಮೂಲಕ ಹೊಸ ದಾರಿ ಹಿಡಿದ್ದಾರೆ.

ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟ ನಾಗಚೈತನ್ಯ!

ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟ ನಾಗಚೈತನ್ಯ!

ನಾಗಚೈತನ್ಯ ಇದೇ ಮೊದಲ ಬಾರಿಗೆ ವೆಬ್ ಸರಣಿಯ ಮೂಲಕ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದರೊಂದಿಗೆ ಡಿಜಿಟಲ್ ಫ್ಲಾಟ್​ ಫಾರಂನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಗಚೈತನ್ಯ ಮೊಟ್ಟ ಮೊದಲ ವೆಬ್​ ಸೀರಿಸ್ ಸಾಕಷ್ಟು ತಿರುವುಗಳು ಮತ್ತು ನಿಗೂಢ ಕಥಾವಸ್ತುವನ್ನು ಹೊಂದಿದೆ ಎಂದು ವರದಿ ಆಗಿದೆ. ಈ ವೆಬ್ ಸರಣಿ ಸಸ್ಪೆನ್ಸ್, ಥ್ರಿಲ್ಲರ್ ಸರಣಿಯ ಆಗಿರಲಿದೆಯಂತೆ. ನಿರ್ದೇಶಕ ವಿಕ್ರಮ್ ಕುಮಾರ್ ಈ ವೆಬ್​ ಸರಣಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.

ನಾಗ ಚೈತನ್ಯನಿಗಾಗಿ ಅಮೆಜಾನ್ ಪ್ರೈಮ್ ದೊಡ್ಡ ಬಂಡವಾಳ!

ನಾಗ ಚೈತನ್ಯನಿಗಾಗಿ ಅಮೆಜಾನ್ ಪ್ರೈಮ್ ದೊಡ್ಡ ಬಂಡವಾಳ!

ನಟಿ ಸಮಂತಾ ಕಳೆದ ವರ್ಷ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಗೆ ಪ್ರವೇಶಿಸಿದ್ದರು. ಹಿಟ್ ವೆಬ್ ಸರಣಿ ಆದ 'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಅಭಿನಯಿಸಿ ಸಮಂತಾ ಉತ್ತಮ ಹೆಸರು ಗಳಿಸಿದರು. ಈ ಮೂಲಕ ಸಿನಿಮಾದಿಂದ ಮೊದಲ ಬಾರಿಗೆ ಸಮಂತಾ ಒಟಿಟಿಗೆ ಎಂಟ್ರಿ ಕೊಟ್ಟಿದ್ದರು. ಈಗ ನಾಗ ಚೈತನ್ಯ ಸರದಿ. ನಾಗಚೈತನ್ಯ ಕೂಡ ಅಮೆಜಾನ್ ಮೂಲಕವೇ ಒಟಿಟಿಗೆ ಬರ್ತಿದ್ದಾರೆ. ಈ ವೆಬ್ ಸರಣಿಗಾಗಿ ಅಮೆಜಾನ್ ಪ್ರೈಮ್ ವಿಡಿಯೋ ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದೆಯಂತೆ.

ಪತ್ರಕರ್ತನ ಪಾತ್ರದಲ್ಲಿ ನಟ ನಾಗಚೈತನ್ಯ!

ಪತ್ರಕರ್ತನ ಪಾತ್ರದಲ್ಲಿ ನಟ ನಾಗಚೈತನ್ಯ!

ನಟ ನಾಗಚೈತನ್ಯ ಈ ವೆಬ್ ಸರಣಿಯಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾಗಿ ಈ ಪಾತ್ರಕ್ಕೆ ಹೆಚ್ಚಿನ ತಯಾರಿ ನಡೆಸಿದ್ದಾರಂತೆ. ತಮ್ಮ ಬಾಡಿ ಲ್ಯಾಂಗ್ವೇಜ್ ಬದಲಾಯಿಸಿಕೊಳ್ಳುತ್ತಲಿದ್ದಾರಂತೆ. ಹಾಗಾಗಿ ನಾಗ್ ಅದಾಗಲೇ ವರ್ಕೌಟ್​ ಕೂಡ ಶುರು ಮಾಡಿದ್ದಾರಂತೆ. ಈ ಸರಣಿಯಲ್ಲಿ ನಾಗ ಚೈತನ್ಯಗೆ ನಟಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸಿದ್ದಿ ಕೂಡ ಹೊರ ಬಂದಿದೆ.

3 ಸರಣಿಯಲ್ಲಿ ಬರಲಿದೆ ಈ ಥ್ರಿಲ್ಲರ್ ವೆಬ್ ಸರಣಿ!

3 ಸರಣಿಯಲ್ಲಿ ಬರಲಿದೆ ಈ ಥ್ರಿಲ್ಲರ್ ವೆಬ್ ಸರಣಿ!

ನಾಗಚೈತನ್ಯ ಅಭಿನಯಿಸುತ್ತಿರೋ ವೆಬ್ ಸರಣಿ ಮೂರು ಭಾಗಗಳಲ್ಲಿ ಪ್ರಸಾರ ಆಗಲಿದೆ. ಮೂರು ಸೀಸನ್‌ಗಳು ಕೂಡ 10 ಸಂಚಿಕೆಗಳನ್ನು ಹೊಂದಿರಲಿದೆಯಂತೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ ತಂಡ. ನಾಗಚೈತನ್ಯ ಒಮ್ಮೆ ರೆಡಿ ಆದರೆ, ವೆಬ್​ ಸರಣಿ ಚಿತ್ರೀಕರಣ ಆರಂಭ ಆಗುತ್ತದೆ. ಇದು ಬಿಗ್​ ಬಜೆಟ್​ನ ಒಟಿಟಿ ಸರಣಿ ಆಗಿದ್ದು, ಹಲವು ಸಾಹಸ ದೃಶ್ಯಗಳಲ್ಲಿಯೂ ನಾಗಚೈತನ್ಯ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
After Divorce Also Naga Chaitanya Following Samantha Path, He Is Testing Luck In Ott,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X