ಸಮಂತಾ ಬದುಕಿನಲ್ಲಿ ಅನಾಮಿಕ ವ್ಯಕ್ತಿಯ ಪ್ರವೇಶ, ಮತ್ತೆ ಚಿಗುರಿದ ಪ್ರೀತಿ...?

ತಮ್ಮ ನೆಚ್ಚಿನ ನಾಯಕಿ ಯಾವುದಾದರೂ ಹುಡುಗನ ಜೊತೆ ಕಾಣಿಸಿಕೊಂಡರೆ ಸಾಕು, ಅವರ ಅಭಿಮಾನಿಗಳು ತಲೆಯೆಲ್ಲ ಕೆದರಿಕೊಂಡು ಹುಡುಕಾಡಲು ಶುರುಮಾಡುತ್ತಾರೆ. ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡಲು ಮುಂದಾಗುತ್ತಾರೆ. ತಮ್ಮ ಈ ಕಾರ್ಯದಲ್ಲಿ ಯಶಸ್ವಿಯಾಗುವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ. ಇದಕ್ಕೆ ವೈರಲ್ ಆದ ಸಮಂತಾ ಅವರ ಹೊಸ ಫೋಟೋ ಸದ್ಯದ ಉದಾಹರಣೆ.

ಹೌದು, ಆ ಕಡೆ ಸಮಂತಾ ಅವರನ್ನು ಮರೆತು ನಾಗ ಚೈತನ್ಯ ತಮ್ಮ ಪ್ರೇಯಸಿ ಶೋಭಿತಾ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ಧಾರೆ. ಈ ಕಡೆ ಸಮಂತಾ ಅನಾಮಿಕ ವ್ಯಕ್ತಿಯ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಸಹಜವಾಗಿ ಇದನ್ನು ನೋಡಿದ ಸಮಂತಾ ಅವರ ಅಭಿಮಾನಿಗಳ ಎದೆಯೊಡೆದಿದೆ. ಯಾರು ಈ ಹುಡುಗ ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.

After her split with Naga Chaitanya Samantha was spotted with a mystery man Who is he

ಮೊನ್ನೆ ಶುಕ್ರವಾರ ಸಮಾರಂಭವೊಂದರಿಂದ ನಗು ನಗುತ್ತಾ ವ್ಯಕ್ತಿಯೋರ್ವನ ಜೊತೆ ಕೈ ಹಿಡಿದುಕೊಂಡು ಹೊರ ಬಂದ ಸಮಂತಾ ಅಲ್ಲಿದ್ದ ಕ್ಯಾಮರಾ ಕಣ್ಣುಗಳನ್ನು ಕಂಡು ಕೈಯನ್ನು ಬಿಡಿಸಿಕೊಂಡಿದ್ದಾರೆ. ಆ ನಂತರ ಮತ್ತೆ ಕೈ ಹಿಡಿಯುವ ಪ್ರಯತ್ನವನ್ನು ಸಮಂತಾ ಮಾಡಿದರು ಕೂಡ ಅನಾಮಿಕ ವ್ಯಕ್ತಿ ದೂರ ಹೋಗುತ್ತಾನೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕೆಲವರು ಯಾರಿದು ಹೊಸ ಹುಡುಗ ಎನ್ನುವ ಪ್ರಶ್ನೆಯನ್ನು ಮಾಡಿದ್ದರೆ, ಇನ್ನೂ ಕೆಲವರು ಈ ವ್ಯಕ್ತಿಯ ಜೊತೆ ಸಮಂತಾ ಪ್ರೀತಿಯಲ್ಲಿ ಬಿದ್ದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಈ ವ್ಯಕ್ತಿ ಯಾರು..? ಸಮಂತಾ ಜೊತೆ ಈತನ ಸಂಬಂಧವೇನು..? ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಇಲ್ಲವಾದರೂ ತರ್ಶಿಣಿ ಸೂರ್ಯ ಎಂಬ ಸಮಂತಾ ಅವರ ಅಭಿಮಾನಿ ಸ್ಯಾಮ್ ಜೊತೆ ಓಡಾಡುತ್ತಿರುವುದು ಬೇರೆ ಯಾರು ಅಲ್ಲ ಬದಲಿಗೆ ಅವರ ಆಪ್ತ ಗೆಳೆಯ ಎಂದಿದ್ದಾರೆ. ನಾಚಿಕೆ ಸ್ವಭಾವದ ಹುಡುಗ, ಎಲ್ಲಕ್ಕಿಂತ ಹೆಚ್ಚಾಗಿ ಆತ ಸಂಸಾರಸ್ಥ ಈಗಾಗಲೇ ಮದುವೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಸಮಂತಾ ಹೆಸರು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ಜೊತೆ ಥಳುಕಿ ಹಾಕಿಕೊಂಡಿತ್ತು. ರಾಜ್ ಜೊತೆ ಸಮಂತಾ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಮುಂಬೈನಿಂದ ಹೈದ್ರಾಬಾದ್‌ವರೆಗೆ ಕೇಳಿ ಬಂದಿತ್ತು. ಇನ್ನೂ 'ರೆಡಿಟ್‌' ಎಂಬ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಮಂತಾ ಮತ್ತು ರಾಜ್ ಅವರ ಸಂಬಂಧದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.

ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು. ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು ಎಂಬ ಮಾತೆಲ್ಲ ಕೇಳಿ ಬಂದಿತ್ತು. ಆದರೆ ಈಗ ಸಮಂತಾ ಅವರ ಜೊತೆ ಹೊಸ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಅನಾಮಿಕ ವ್ಯಕ್ತಿಯ ಜೊತೆ ಸಮಂತಾ ಅವರನ್ನು ನೋಡಿ ಅನೇಕರು ತಲೆ ಕೆಡಿಸಿಕೊಂಡಿದ್ದಾರೆ. ಮತ್ತೆ ಚಿಗುರಿತಾ ಪ್ರೀತಿ ಎಂದೆಲ್ಲ ಸಮಂತಾ ಅವರನ್ನು ಕೇಳುತ್ತಿದ್ದಾರೆ. ನಿಜಕ್ಕೂ ಈ ವ್ಯಕ್ತಿ ಯಾರು..? ಉತ್ತರ ಸಮಂತಾ ಅವರಿಗೆ ಗೊತ್ತು..

More from Filmibeat

Read more about: samantha rumours tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X