twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಆಯ್ತು ತೆಲುಗಿಗೂ ಓ ಮೈ ಕಡವುಲೆ ರಿಮೇಕ್; ಅಪ್ಪು 'ದೇವರ' ಪಾತ್ರಕ್ಕೆ ತೆಲುಗಿನಲ್ಲಿ ಯಾರು?

    |

    'ಓ ಮೈ ಕಡವುಲೆ' 2020ರಲ್ಲಿ ಲಾಕ್ ಡೌನ್‌ಗೂ ಮುನ್ನ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಿ ಚಿತ್ರಮಂದಿರ ಹಾಗೂ ಓಟಿಟಿ ಎರಡರಲ್ಲಿಯೂ ಸಹ ಭರ್ಜರಿ ಯಶಸ್ಸು ಸಾಧಿಸಿದಂತ ಚಿತ್ರ. ಅಶ್ವತ್ಥ್ ಮಾರಿಮುತ್ತು ನಿರ್ದೇಶನದ ಈ ಚಿತ್ರದಲ್ಲಿ ನಟ ಅಶೋಕ್ ಸೆಲ್ವನ್, ರಿತಿಕಾ ಸಿಂಗ್ ಹಾಗೂ ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

    ಲಾಕ್‌ಡೌನ್ ಸಂದರ್ಭದಲ್ಲಿ ಈ ಚಿತ್ರ ತಮಿಳುನಾಡಿನ ಹೊರಕ್ಕೂ ಸಹ ರೀಚ್ ಆಗಿತ್ತು. ಇತರೆ ಭಾಷೆಯ ಸಿನಿ ಪ್ರೇಮಿಗಳ ಮನವನ್ನು ಓ ಮೈ ಕಡವುಲೆ ಗೆದ್ದಿತ್ತು. ಇನ್ನು ಈ ಚಿತ್ರದ ಕನ್ನಡ ರಿಮೇಕ್ ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿದೆ. ಈ ಚಿತ್ರವನ್ನು ಕನ್ನಡದಲ್ಲಿ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ 'ಲಕ್ಕಿ ಮ್ಯಾನ್' ಎಂಬ ಶೀರ್ಷಿಕೆಯಡಿಯಲ್ಲಿ ನಿರ್ದೇಶಿಸಿದ್ದು, ನಾಯಕನಾಗಿ ಡಾರ್ಲಿಂಗ್ ಕೃಷ್ಣ, ನಾಯಕಿಯರಾಗಿ ಸಂಗೀತ ಶೃಂಗೇರಿ ಹಾಗೂ ರೋಶಿಣಿ ಪ್ರಕಾಶ್ ಅಭಿನಯಿಸಿದ್ದರು. ಇದೇ ತಿಂಗಳ 9ರಂದು ಬಿಡುಗಡೆಯಾದ ಲಕ್ಕಿ ಮ್ಯಾನ್ ಸದ್ಯ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.

    ಹೀಗಿರುವಾಗಲೇ ತೆಲುಗಿಗೂ ಸಹ ಓ ಮೈ ಕಡವುಲೆ ರಿಮೇಕ್ ಆಗುತ್ತಿರುವ ವಿಷಯ ಇದೀಗ ಚಿತ್ರದ ಗ್ಲಿಂಪ್ಸ್ ಮೂಲಕ ಹೊರಬಿದ್ದಿದೆ. ಇಂದು ( ಸೆಪ್ಟೆಂಬರ್ 21 ) ತೆಲುಗಿನ 'ಓರಿ ದೇವುಡ' ಎಂಬ ಚಿತ್ರದ ಪುಟ್ಟ ಟೀಸರ್ ಬಿಡುಗಡೆಯಾಗಿದ್ದು, ಇದರ ಕುರಿತು ಚರ್ಚೆಗಳು ಆರಂಭವಾಗಿವೆ.

    ತೆಲುಗಿನಲ್ಲಿ ಹೀಗಿದೆ ತಾರಾಗಣ

    ತೆಲುಗಿನಲ್ಲಿ ಹೀಗಿದೆ ತಾರಾಗಣ

    ತಮಿಳಿನಲ್ಲಿ ಅಶೋಕ್ ಸೆಲ್ವನ್ ನಿರ್ವಹಿಸಿದ್ದ ನಾಯಕನ ಪಾತ್ರವನ್ನು ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣ ನಿರ್ವಹಿಸಿದ್ದರು ಹಾಗೂ ಇದೀಗ ತೆಲುಗಿನಲ್ಲಿ ಈ ಪಾತ್ರವನ್ನು ವಿಶ್ವಕ್ ಸೇನ್ ನಿರ್ವಹಿಸಲಿದ್ದಾರೆ. ಈ ನಗರಾನಿಕಿ ಏಮೈಂದಿ, ಹಿಟ್ ದ ಫಸ್ಟ್ ಕೇಸ್ ಚಿತ್ರಗಳಲ್ಲಿ ಅಭಿನಯಿಸಿ ಗೆದ್ದಿದ್ದ ವಿಶ್ವಕ್ ಸೇನ್ ಪಾಗಲ್, ಅಶೋಕವನಂಲೋ ಅರ್ಜುನ ಕಲ್ಯಾಣಂ ರೀತಿಯ ಲವ್ ಟ್ರ್ಯಾಕ್ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು. ಇನ್ನು ಓರಿ ದೇವುಡ ಚಿತ್ರದಲ್ಲಿ ಮಿಥಿಲಾ ಪಾಲ್ಕರ್ ಹಾಗೂ ಆಶಾ ಭಟ್ ನಾಯಕಿಯರಾಗಿ ಅಭಿನಯಿಸಲಿದ್ದಾರೆ.

    ದೇವರ ಪಾತ್ರದಲ್ಲಿ ವೆಂಕಟೇಶ್

    ದೇವರ ಪಾತ್ರದಲ್ಲಿ ವೆಂಕಟೇಶ್

    ಇನ್ನು ತಮಿಳಿನಲ್ಲಿ ದೇವರ ಪಾತ್ರವನ್ನು ನಿರ್ವಹಿಸಿದ್ದರೆ, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ದೇವರಾಗಿ ಅಭಿನಯಿಸಿದ್ದರು ಹಾಗೂ ಇದೀಗ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಗ್ಲಿಂಪ್ಸ್‌ನಲ್ಲಿ ವಿಕ್ಟರಿ ವೆಂಕಟೇಶ್ ಅವರನ್ನು ಸ್ಟೈಲಿಷ್ ಆಗಿ ತೋರಿಸಲಾಗಿದೆ .

    ಇದೊಂದು ಬೇಡವಾದ ಸಾಹಸನಾ?

    ಇದೊಂದು ಬೇಡವಾದ ಸಾಹಸನಾ?

    ಸದ್ಯ ಓ ಮೈ ಕಡವುಲೆ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಿರುವುದು ಒಂದು ದೊಡ್ಡ ಸಾಹಸ ಎಂದೇ ಹೇಳಬಹುದು. ಕನ್ನಡದಲ್ಲಿ ಈ ಚಿತ್ರದ ರಿಮೇಕ್ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಹಾಗೂ ಜರ ಚಿತ್ರಮಂದಿರಕ್ಕೆ ಬರಲು ಕಾರಣ ಪುನೀತ್ ರಾಜ್‌ಕುಮಾರ್ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇನ್ನು ತೆಲುಗಿನಲ್ಲಿ ಈ ಮಿರಾಕಲ್ ನಡೆಯುವುದು ಸುಲಭದ ಮಾತಲ್ಲ. ಕನ್ನಡದಲ್ಲಿ ಮೂಲ ತಮಿಳು ಚಿತ್ರವನ್ನು ಹಲವಾರು ಮಂದಿ ನೋಡಿದ್ದರೂ ಸಹ ಅಪ್ಪುಗೋಸ್ಕರ ಚಿತ್ರಮಂದಿರಕ್ಕೆ ನುಗ್ಗಿದ್ದರು, ಆದರೆ ತೆಲುಗು ಪ್ರೇಕ್ಷಕರು ಕನ್ನಡದ ಹಾಗೆ ಸಿನಿಮಾ ನೋಡ್ತಾರೆ ಎನ್ನುವುದು ತುಂಬಾ ದೂರದ ಮಾತು.

    English summary
    After Kannada Oh My Kadavule remake into Telugu as Ori Devuda. Read on
    Wednesday, September 21, 2022, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X