ಮೆಗಾಸ್ಟಾರ್ ಚಿರಂಜೀವಿಗೆ ಠಕ್ಕರ್ ಕೊಡಲಿರುವ ಸಂಜಯ್ ದತ್!

ಈಗ ಸಂಜಯ್‌ ದತ್‌ ಒಂದು ಹೆಜ್ಜೆ ಮುಂದೆ ಹೋಗಿ ಟಾಲಿವುಡ್‌ನಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಚಿರಂಜೀವಿ ಸಿನಿಮಾದಲ್ಲಿ ಸಂಜಯ್ ದತ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಲಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟ ಸಂಜಯ್‌ ದತ್ ಈಗ ಸೌತ್‌ ಚಿತ್ರ ರಂಗದಲ್ಲಿ ಖಳನಾಯಕವಾಗಿ ತನ್ನ ಸಿನಿಮಾ ಜರ್ನಿ ಯನ್ನು ಮುಂದುವರೆಸಿದ್ದಾರೆ.

ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರರಂಗ ಪ್ರಮುಖವಾಗಿವೆ. ಆದರೆ ಇಷ್ಟು ದಿನ ಈ ಎಲ್ಲ ಚಿತ್ರ ರಂಗಗಳು ಪ್ರತ್ಯೇಕವಾಗಿ ಇದ್ದವು. ಆದರೀಗ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿವೆ. ಹಾಗಾಗಿ ಭಾಷೆಯ ಮಿತಿ ಮೀರಿ ಸಿನಿಮಾಗಳು ಜನರನ್ನು ತಲುಪುತ್ತಿವೆ.

ಜೊತೆಗೆ ಸಿನಿಮಾ ತಾರೆಯರು ಕೂಡ ಯಾವುದೇ ನಿರ್ಧಿಷ್ಟ ಪರಿದಿಯನ್ನು ಹಾಕಿ ಕೊಳ್ಳದೆ, ತಮ್ಮ ಸಿನಿಮಾ ಜರ್ನಿಯಲ್ಲಿ ಬೇರೆ ಭಾಷೆಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್‌ ತಾರೆಯರು ಕೂಡ ಸೌತ್‌ ಸಿನಿಮಾರಂಗದಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಾ ಇದ್ದಾರೆ.

ಇದೀಗ ನಟ ಸಂಜಯ್‌ ದತ್ ಹೆಚ್ಚೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸಂಜಯ್‌ ದತ್ ತೆರೆ ಹಂಚಿಕೊಳ್ಳುತ್ತಲಿದ್ದಾರೆ.

ಕೆಜಿಎಫ್ 2 ಬಳಿಕ 'ಗಾಡ್ ಫಾದರ್‌'ಗೆ ಸಂಜಯ್‌ದತ್ ವಿಲನ್!

ಕೆಜಿಎಫ್ 2 ಬಳಿಕ 'ಗಾಡ್ ಫಾದರ್‌'ಗೆ ಸಂಜಯ್‌ದತ್ ವಿಲನ್!

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರದ ಮೂಲಕ ಸಂಜಯ್‌ ದತ್ ಕನ್ನಡ ಸಿನಿಮಾದಲ್ಲಿ ವಿಲನ್‌ ಆಗಿ ಅಬ್ಬರಿಸಲಿದ್ದಾರೆ. ಕೆಜಿಎಫ್2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಸಂಜಯ್‌ ದತ್ ಕಾಣಿಸಿಕೊಳ್ಳುತ್ತಿದ್ದಾರೆ.

ಈಗ ಸಂಜಯ್‌ ದತ್‌ ಒಂದು ಹೆಜ್ಜೆ ಮುಂದೆ ಹೋಗಿ ಟಾಲಿವುಡ್‌ನಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಚಿರಂಜೀವಿ ಸಿನಿಮಾದಲ್ಲಿ ಸಂಜಯ್ ದತ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಲಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟ ಸಂಜಯ್‌ ದತ್ ಈಗ ಸೌತ್‌ ಚಿತ್ರ ರಂಗದಲ್ಲಿ ಖಳನಾಯಕವಾಗಿ ತನ್ನ ಸಿನಿಮಾ ಜರ್ನಿ ಯನ್ನು ಮುಂದುವರೆಸಿದ್ದಾರೆ.

ಮೆಗಾ ಸ್ಟಾರ್ ಜೊತೆಗೆ ಮುನ್ನಾಭಾಯಿ ಕದಾಟ!

ಮೆಗಾ ಸ್ಟಾರ್ ಜೊತೆಗೆ ಮುನ್ನಾಭಾಯಿ ಕದಾಟ!

ಈ ಸುದ್ದಿ ಕುತೂಹಕ್ಕೆ ಕಾರಣ ಆಗಿದೆ. ಮೆಗಾ ಸ್ಟಾರ್ ಚಿರಂಜೀವಿ ಮತ್ತು ಸಂಜಯ್ ದತ್ ಇಬ್ಬರ ಕಾಂಬಿನೇಷನ್‌ನಲ್ಲಿ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲಗಳು ಹುಟ್ಟಿ ಕೊಂಡಿವೆ. ಸಂಜಯ್ ದತ್ ಅವರು 'ಗಾಡ್‌ಫಾದರ್‌' ಚಿತ್ರದಲ್ಲಿ ಅಭಿನಯಿಸಲಿರುವ ಸುದ್ದಿಯನ್ನು ಅಧಿಕೃತ ಪಡಿಸಲು ತಯಾರಿ ಮಾಡಿಕೊಳ್ಳುತ್ತಿದೆ.

'ಲೂಸಿಫರ್' ಚಿತ್ರದ ರಿಮೇಕ್ 'ಗಾಡ್‌ ಫಾದರ್'!

'ಲೂಸಿಫರ್' ಚಿತ್ರದ ರಿಮೇಕ್ 'ಗಾಡ್‌ ಫಾದರ್'!

ಗಾಡ್‌ಫಾದರ್ 2019ರಲ್ಲಿ ತೆರೆಕಂಡ ಮಲಯಾಳಂನ 'ಲೂಸಿಫರ್' ಚಿತ್ರದ ರಿಮೇಕ್ ಆಗಿದೆ. ಸೂಪರ್ ಗುಡ್ ಫಿಲ್ಮ್ಸ್ ಸಹಯೋಗದಲ್ಲಿ, ಕೊನಿಡೇಲಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಹಿಂದೆ 'ಗಾಡ್ ಫಾದರ್' ಚಿತ್ರದಲ್ಲಿ ಚಿರಂಜೀವಿಯ ತಂಗಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಂತರ, ಈ ಪಾತ್ರಕ್ಕೆ ರಮ್ಯಾ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮೋಹನ್ ರಾಜಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಲಿದೆ. ಈ ಚಿತ್ರದಲ್ಲಿ ಚಿರಂಜೀವಿ ಜೊತೆಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ನಟ ಚಿರಂಜೀವಿ ಅಭಿನಯದ ಗಾಡ್‌ ಫಾದರ್‌ ಸಿನಿಮಾ ತಾರಗಣದಿಂದಲೇ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.

ಪಾತ್ರ ವರ್ಗದಿಂದಲೇ ಕುತೂಹಲ ಮೂಡಿಸಿದ 'ಗಾಡ್‌ ಫಾದರ್'!

ಪಾತ್ರ ವರ್ಗದಿಂದಲೇ ಕುತೂಹಲ ಮೂಡಿಸಿದ 'ಗಾಡ್‌ ಫಾದರ್'!

ಈ ಸಿನಿಮಾ ಮಲಯಾಳಂ ಚಿತ್ರದ ರಿಮೇಕ್ ಆಗಿರುವ ಕಾರಣಕ್ಕೆ, ತೆಲುಗು ನೆಲಕ್ಕೆ ಬೇಕಾದ ಈತಿಯಲ್ಲಿ ಚಿತ್ರವನ್ನು ಬದಲಾಯಿಕೊಳ್ಳಲಾಗುತ್ತದೆ ಅಂತೆ. ಹಾಗಾಗಿ ಈ ಚಿತ್ರದಲ್ಲಿ ಚಿರಂಜೀವಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನು ನಿರೀಕ್ಷೆಗಳು ಕೂಡ ಸಿನಿ ರಸಿಕರಲ್ಲಿ ಮೂಡಿದೆ.

More from Filmibeat

English summary
After KGF Sanjay Dutt Is villain for Chiranjeevi in his Next Movie, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X