For Quick Alerts
  ALLOW NOTIFICATIONS  
  For Daily Alerts

  ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, 'ಇದು ಪ್ರಭಾಸ್ ಕುರ್ತಾ' ಎಂದ ನೆಟ್ಟಿಗರು

  |

  ಲಾಕ್‌ಡೌನ್ ಆದ್ಮೇಲೆ ಮೊದಲ ಬಾರಿಗೆ ನಟಿ ಅನುಷ್ಕಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ನಟಿ ಅನುಷ್ಕಾ ಇತ್ತೀಚಿಗಷ್ಟೆ ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  ಅನುಷ್ಕಾ ಶೆಟ್ಟಿ ಮತ್ತು ಆರ್ ಮಾಧವನ್ ನಟನೆಯ ನಿಶ್ಯಬ್ದಂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಅನುಷ್ಕಾ ಹೆಸರು ಚರ್ಚೆಯಲ್ಲಿತ್ತು. ಅದಾದ ಕೆಲವು ದಿನಗಳ ಬಳಿಕ ಮತ್ತೆ ಅನುಷ್ಕಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸರ್ಪ್ರೈಸ್ ಎಂಬಂತೆ ಇಂದು ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಅನುಷ್ಕಾ ಪ್ರತ್ಯಕ್ಷರಾಗಿದ್ದಾರೆ.

  ಮಹಾನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಅನುಷ್ಕಾ ಶೆಟ್ಟಿಮಹಾನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಅನುಷ್ಕಾ ಶೆಟ್ಟಿ

  ಕಪ್ಪು ಬಣ್ಣದ ಕುರ್ತಾ ಮತ್ತು ಜೀನ್ಸ್ ಧರಿಸಿರುವ ಅನುಷ್ಕಾ ಕೈಯಲ್ಲಿ ಯಾವುದೇ ಬುಕ್‌ಲೆಟ್ ಇಟ್ಟು ಓದಿಕೊಂಡು ಬರುತ್ತಿದ್ದಾರೆ. ಅನುಷ್ಕಾ ಅವರ ಈ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ವಿಶೇಷವಾಗಿ ಅನುಷ್ಕಾ ಧರಿಸಿರುವ ಕುರ್ತಾ ಈಗ ಚರ್ಚೆಗೆ ಕಾರಣವಾಗಿದೆ.

  ಇತ್ತೀಚಿಗಷ್ಟೆ ಪ್ರಭಾಸ್ ಅವರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಕಪ್ಪು ಬಣ್ಣದ ಕುರ್ತಾ ಧರಿಸಿದ್ದರು. ಆ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ, ಅನುಷ್ಕಾ ಶೆಟ್ಟಿ ಧರಿಸಿರುವ ಕುರ್ತಾ ಪ್ರಭಾಸ್ ಅವರದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  ಇಬ್ಬರು ನಟಿಯರನ್ನು ಮನಸಾರೆ ಹೊಗಳಿದ ಸಾಯಿ ಪಲ್ಲವಿಇಬ್ಬರು ನಟಿಯರನ್ನು ಮನಸಾರೆ ಹೊಗಳಿದ ಸಾಯಿ ಪಲ್ಲವಿ

  ಪ್ರಭಾಸ್ ಅವರು ಧರಿಸಿದ್ದ ಕುರ್ತಾ ಮತ್ತು ಅನುಷ್ಕಾ ಶೆಟ್ಟಿ ಧರಿಸಿದ್ದ ಕುರ್ತಾ ಒಂದೇ ತರಹ ಇದೆ, ಬಹುಶಃ ಇದು ಪ್ರಭಾಸ್ ಅವರದ್ದೇ ಎಂದು ಚರ್ಚೆಯಾಗ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ ಫ್ಯಾನ್ಸ್ ಮಾತ್ರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ವಿಚಾರದಲ್ಲಿ ಸಾಧ್ಯವಾದ ಕಡೆಯಲ್ಲೆಲ್ಲ ಸಂಬಂಧ ಕಲ್ಪಿಸುತ್ತಾರೆ.

  ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ವಿಚಾರಕ್ಕೆ ಬಹಳ ವರ್ಷದಿಂದಲೂ ಸುದ್ದಿಯಲ್ಲಿದ್ದಾರೆ. ಇಬ್ಬರು ಒಳ್ಳೆಯ ಸ್ನೇಹಿತರು, ಪ್ರೀತಿಯಲ್ಲಿದ್ದಾರೆ, ಮದುವೆಯಾಗಲು ಚಿಂತಿಸುತ್ತಿದ್ದಾರೆ ಎನ್ನುವ ಮಟ್ಟಕ್ಕೆ ಚರ್ಚೆಗಳು ಆಗಿವೆ. ಆದ್ರೆ, ಇಬ್ಬರಿಂದಲೂ ಈ ಬಗ್ಗೆ ಸ್ಪಷ್ಟನೆ ಇರಲಿಲ್ಲ. ನಾವಿಬ್ಬರು ಸ್ನೇಹಿತರು ಮಾತ್ರ ಎಂದಷ್ಟೇ ಹೇಳಿ ಮುಂದಕ್ಕೆ ಸಾಗುತ್ತಿದ್ದರು.

  ಡಿಸೆಂಬರ್ ಎರಡನೇ ವಾರದಲ್ಲಿ ನಟಿ ಅನುಷ್ಕಾ ಶೆಟ್ಟಿ ಆಂಧ್ರ ಪ್ರದೇಶದ ಪೋಲವರಂನಲ್ಲಿರುವ ಮಹಾನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದರು.

  English summary
  After long time telugu actress Anushka Shetty spotted in hyderabad airport. anushka kurta look viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X