ನಾಗಚೈತನ್ಯ ಜೊತೆ ಮದ್ವೆಯಾದ ಶೋಭಿತಾ ಅವರ ಹಳೆ ಬಾಯ್ ಫ್ರೆಂಡ್ ಯಾರು ? ಲವ್ ಫೇಲ್ಯೂರ್ ಆಗಲು ಕಾರಣವೇನು..?
ಪ್ರೀತಿ ಎನ್ನುವುದು ಮಾಯೆ. ಈ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದರವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು ಎನ್ನುವುದು ಅನೇಕರ ಅಭಿಪ್ರಾಯ. ನಮ್ಮೆಲ್ಲ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು. ಈ ಬೆಳಕು ಜೀವನದಲ್ಲಿ ನಂದಾದೀಪವಾಗಿ ಉಳಿದರೆ ಸದಾ ಕಾಲ ನೆಮ್ಮದಿಯ ಜೀವನವನ್ನು ಕಾಣಬಹುದು ಎನ್ನುವುದು ಪ್ರೀತಿಯಲ್ಲಿ ಬಿದ್ದವರ ಮಾತು. ಸದ್ಯ ಈ ಪ್ರೀತಿ ಎನ್ನುವ ಬೆಳಕಿನೊಂದಿಗೆ ನಾಗಚೈತನ್ಯ ಜೊತೆ ಶೋಭಿತಾ ಮುನ್ನುಡಿ ಬರೆದಿದ್ದಾರೆ. ಮದ್ವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದರ ನಡುವೆ ಶೋಭಿತಾ ಅವರ ವ್ಯೆಯಕ್ತಿಕ ಜೀವನದ ಕುರಿತು ಅನೇಕರು ಚರ್ಚೆ ಮಾಡಲು ಶುರು ಮಾಡಿದ್ದಾರೆ.
ಹೌದು, ಅಸಲಿಗೆ ನಾಗಚೈತನ್ಯ ಅವರನ್ನು ಮದ್ವೆಯಾಗುವ ಮುನ್ನ ಶೋಭಿತಾ ಒಬ್ಬ ವ್ಯಕ್ತಿಯ ಜೊತೆ ಆತ್ಮೀಯವಾದ ಸಂಬಂಧ ಹೊಂದಿದ್ದರು. ಆ ವ್ಯಕ್ತಿಯ ಹೆಸರು ಪ್ರಣವ್ ಮಿಶ್ರಾ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಪ್ರಣವ್ ಬ್ರ್ಯಾಂಡ್ ಹ್ಯೂಮನ್‌ನ ಸಹ-ಸಂಸ್ಥಾಪಕ ಕೂಡ ಹೌದು.

ಇಂಥಾ ಪ್ರಣವ್ ಅವರನ್ನು 2019ರಲ್ಲಿ ಫ್ಯಾಷನ್ ಈವೆಂಟ್‌ನಲ್ಲಿ ಭೇಟಿಯಾಗಿದ್ದ ಶೋಭಿತಾ ಆ ನಂತರ ಸ್ನೇಹಿತರಾದರು. ಆ ನಂತರ ಪ್ರೀತಿಯಲ್ಲಿ ಕೂಡ ಬಿದ್ದಿದ್ದರು. ಜೊತೆಯಲ್ಲಿ ಪ್ರವಾಸಕ್ಕೆ ಕೂಡ ತೆರಳಿದ್ದರು. ಆದರೆ, ಆ ನಂತರ ಏನಾಯ್ತು ಗೊತ್ತಿಲ್ಲ. ಇಬ್ಬರ ಸಂಬಂಧ ಶುರುವಾದಷ್ಟೇ ಬೇಗ ಅಂತ್ಯವಾಯ್ತು. ಈ ವಿಚಾರವನ್ನು ಈಗ ನೆನಪು ಮಾಡಿಕೊಂಡಿರುವ ಸೋಶಿಯಲ್ ಮೀಡಿಯಾದ ಸಕ್ರಿಯ ಸದಸ್ಯರು ಪ್ರೀತಿಯಲ್ಲಿ ಹಿಂದೆ ನೋವು ಅನುಭವಿಸಿದವರಲ್ಲಿ ಶೋಭಿತಾ ಕೂಡ ಒಬ್ಬರು ಎಂದು ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾಗಚೈತನ್ಯ ಜೊತೆ ಶೋಭಿತಾ ಸಪ್ತಪದಿಯನ್ನು ತುಳಿದ ಕೆಲವೇ ದಿನಗಳಲ್ಲಿ ಪ್ರಣವ್ ಜೊತೆ ಶೋಭಿತಾ ಇದ್ದ ಫೋಟೊಗಳು ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ನಲ್ಲಿ ವೈರಲ್ ಆಗಿವೆ.
ಅಂದ್ಹಾಗೇ ಪ್ರಣವ್ ಅವರಿಂದ ದೂರವಾದ ಶೋಭಿತಾ ಆ ನಂತರ ಮುಂಬೈನಲ್ಲಿ ನಡೆದ ಓಟಿಟಿಯ ಕಾರ್ಯಕ್ರಮವೊಂದರಲ್ಲಿ ನಾಗಚೈತನ್ಯ ಅವರನ್ನು ಭೇಟಿಯಾದರು. ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹಕ್ಕೆ ಮತ್ತು ಪ್ರೇಮಕ್ಕೆ ತಿರುಗಿತು. ಆದರೆ ಈ ಪ್ರೇಮಕಥೆಯ ಸುಳಿವು ಯಾರಿಗೂ ಇರಲಿಲ್ಲ. ಆದರೆ ಇವರಿಬ್ಬರ ಲಂಡನ್ ಪ್ರವಾಸ ಇವರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವುದಕ್ಕೆ ಪುಷ್ಠಿ ನೀಡಿತ್ತು. ಇಲ್ಲಿಂದಾಚೆ ಇಬ್ಬರು ಅನೇಕ ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದರು.
ಇನ್ನುಳಿದಂತೆ ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಐದು ವರ್ಷಗಳ ಅಂತರ ಇದೆ. ನಾಗಚೈತನ್ಯ ಅವರಿಗೆ ಈಗ 37 ವರ್ಷವಾದರೆ, ಶೋಭಿತಾ ಅವರಿಗೆ ಈಗ 32 ವರ್ಷ.ಇನ್ನೂ ವಯಸ್ಸಿನಲ್ಲಿ ನಾಗಚೈತನ್ಯ ಅವರಿಗಿಂತ ಶೋಭಿತಾ ಚಿಕ್ಕವರಾದರೂ, ಚಿತ್ರರಂಗದಲ್ಲಿ ಶೋಭಿತಾ ಮಾಡಿರುವ ಸಾಧನೆ ದೊಡ್ಡದು. ನಾಗಚೈತನ್ಯ ಅವರಂತೆ ಇವರಿಗೆ ಸಿನಿಮಾ ಹಳೆಯದ್ದಲ್ಲ ಬದಲಿಗೆ ಹೊಸದು. ಇವರ ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಹೊಂದಿರುವವರು ಯಾರು ಇಲ್ಲ. ಆದರೂ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದವರು ಶೋಭಿತಾ.


Click it and Unblock the Notifications











