ಚೈತು-ಶೋಭಿತಾ ಎಂಗೇಜ್‌ಮೆಂಟ್ ಬೆನ್ನಲ್ಲೇ ಹೊಸ ಸಂಗಾತಿ ಬಗ್ಗೆ ಸಮಂತಾ ಮಾತು

ತೆಲುಗು ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದು ಗೊತ್ತೇಯಿದೆ. ಇದೀಗ ಚೈತು 2ನೇ ಮದುವೆಗೆ ಸಿದ್ಧವಾಗಿದ್ದಾರೆ. ನಟಿ ಶೋಭಿತಾ ದುಲಿಪಾಲ ಜೊತೆ ಮದುವೆಗೆ ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಸಮಂತಾ ಹೊಸ ಸಂಗಾತಿ ಬಗ್ಗೆ ಮಾತನಾಡಿದ್ದಾರೆ.

'ಯೇ ಮಾಯ ಚೆಸಾವೆ' ಚಿತ್ರದಲ್ಲಿ ಚೈತು- ಸ್ಯಾಮ್ ಒಟ್ಟಿಗೆ ನಟಿಸಿದ್ದರು. ಆಗ ಶುರುವಾಗಿದ್ದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. ಕದ್ದು ಮುಚ್ಚಿ ಒಂದಷ್ಟು ದಿನ ಸುತ್ತಾಡಿದ ಜೋಡಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಗೋವಾದಲ್ಲಿ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯಗಳಂತೆ ಮದುವೆ ನಡೆದಿತ್ತು. 2017ರಲ್ಲಿ ಮದುವೆ ಆಗಿದ್ದ ಜೋಡಿ 4 ವರ್ಷಗಳ ಬಳಿಕ ದೂರಾಗಿದ್ದರು.

After naga Chaitanya and sobhita engagement Samantha has opend up about her second marriage

ಆಗಷ್ಟೇ ಹನಿಮೂನ್‌ಗೆ ಹೋಗಿಬಂದ ಜೋಡಿಯಾಗಿ ಬಹಳ ಅನ್ಯೋನ್ಯವಾಗಿದ್ದ ಚೈ-ಸ್ಯಾಮ್ ದೂರಾಗುತ್ತಾರೆ ಎಂದು ಯಾರು ನಂಬಲಿಲ್ಲ. ಇದು ಬರೀ ವದಂತಿ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಧಿಕೃತವಾಗಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. ನಾವಿಬ್ಬರು ಒಪ್ಪಿ ದೂರಾಗುತ್ತಿದ್ದೇವೆ ಎಂದು ಹೇಳಿದ್ದರು.

ಚೈತನ್ಯಾ- ಶೋಭಿತಾ ಲವ್ ಸ್ಟೋರಿ ಕೂಡ ಬಹಳ ದಿನ ರಹಸ್ಯವಾಗಿ ಉಳಿಯಲಿಲ್ಲ. ಬಳಿಕ ನಾಗಾರ್ಜುನ ತಮ್ಮ ಮನೆಯಲ್ಲಿ ಇಬ್ಬರ ಎಂಗೇಜ್‌ಮೆಂಟ್ ಮಾಡಿದ್ದರು. ಡಿಸೆಂಬರ್ 4ರಂದು ಇವರಿಬ್ಬರ ಮದುವೆಗೆ ವೇದಿಕೆ ಸಿದ್ಧವಾಗುತ್ತಿದೆ. ಈಗಾಗಲೇ ಅಕ್ಕಿನೇನಿ ಕುಟುಂಬದಲ್ಲಿ ಮದುವೆಗೆ ತಯಾರಿ ಶುರುವಾಗಿದೆ. ಇದೆಲ್ಲದರ ನಡುವೆ ಸಮಂತಾ ಮತ್ತೊಂದು ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.

After naga Chaitanya and sobhita engagement Samantha has opend up about her second marriage

ಸಮಂತಾ ನಟನೆಯ 'ಸಿಟಾಡೆಲ್' ಹಿಂದಿ ವೆಬ್ ಸೀರಿಸ್ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿರುವ ಇನ್ನು ಮುಂದೆ ಸಿಂಗಲ್ ಆಗಿ ಇರುವುದಿಲ್ಲ ಎಂದು ಹೇಳಿದ್ದಾರೆ.

ಮೊದಲಿಗೆ ಇನ್ನು ಮುಂದೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತೀರಾ? ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಇಲ್ಲ, ಇನ್ನು ಮುಂದೆ ಹೆಜ್ಜೆ ಹಾಕಲ್ಲ ಎಂದಿದ್ದಾರೆ. ಸಮಂತಾ ಸಿಂಗಲ್ ಆಗಿಯೇ ಇರಲು ಇಷ್ಟಪಡುತ್ತಾರಾ? ಎನ್ನುವ ಪ್ರಶ್ನೆಗೆ "ಇಲ್ಲ" ಎಂದು ಉತ್ತರಿಸಿದ್ದಾರೆ. ಅಲ್ಲಿಗೆ ಸ್ಯಾಮ್ ಮತ್ತೊಮ್ಮೆ ಮದುವೆ ಅಥವಾ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿ ಇರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಅಭಿಮಾನಿಗಳು ಈ ವೀಡಿಯೋ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಸಮಂತಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕೆಲ ದಿನಗಳಿಂದ ಆಕೆ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಮಾತ್ರ ನಟಿಸಿದರು. ಇನ್ನು ಡಿವೋರ್ಸ್ ಬಳಿಕ ನಟಿಸಿದ 'ಶಾಕುಂತಲಂ' ಹಾಗೂ 'ಖುಷಿ' ಚಿತ್ರಗಳು ಸೋಲುಂಡವು. ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನಿಧಾನವಾಗಿ ಮಯೋಸೈಟಿಸ್‌ ವಿರುದ್ಧ ಹೋರಾಡಿ ಸಮಂತಾ ಚೇತರಿಸಿಕೊಂಡಿದ್ದಾರೆ. ಹೊಸ ಹೊಸ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. 'ಸಿಟಾಡೆಲ್' ವೆಬ್‌ ಸೀರಿಸ್ ಬಳಿಕ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವ ನಿರೀಕ್ಷೆಯಿದೆ. ನವೆಂಬರ್ 7ಕ್ಕೆ ಪ್ರೈಂ ವೀಡಿಯೋದಲ್ಲಿ 'ಸಿಟಾಡೆಲ್' ವೆಬ್‌ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿದೆ. 'ಪುಷ್ಪ' ಚಿತ್ರದಲ್ಲಿ 'ಊ ಅಂಟಾವಾ' ಎಂದು ಸ್ಯಾಮ್ ಹೆಜ್ಜೆ ಹಾಕಿದ್ದರು. ಸೀಕ್ವೆಲ್‌ನಲ್ಲಿ ಕೂಡ ಕುಣಿಯುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಅದಕ್ಕೆ ಆಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

More from Filmibeat

English summary
Does Samantha Ruth Prabhu love being single? actress says no;
Read more about: telugu tollywood samantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X