ಸಮಂತಾಗೆ ಮತ್ತೊಮ್ಮೆ ಕೂಡಿ ಬಂತು ಕಂಕಣ ಭಾಗ್ಯ, ಮುಂದಿನ ವರ್ಷ ಮದುವೆ, ಹೇಗಿದೆ ಜಾತಕ..?
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ -ಪ್ರತಿವಾದದ ನಡುವೆ ಸಿಲುಕಿಕೊಂಡಿರುವ ಅನೇಕರಲ್ಲಿ ಕೆಲವರು ಜ್ಯೋತಿಷ್ಯ ಶಾಸ್ತ್ರಕ್ಕೆ ಶರಣೆನ್ನುತ್ತಾರೆ. ಇನ್ನು ಕೆಲವರು ವಿಜ್ಞಾನಕ್ಕೆ ಜೈ ಎನ್ನುತ್ತಾರೆ. ಇದಕ್ಕೆ ಸಮಂತಾ ಸದ್ಯದ ಉದಾಹರಣೆ.
ಹೌದು, ತಮ್ಮ ನೆನಪುಗಳನ್ನು ನಾಗಚೈತನ್ಯ ಶಾಶ್ವತವಾಗಿ ಅಳಿಸಿ ಶೋಭಿತಾ ಜೊತೆ ಸಪ್ತಪದಿಯನ್ನು ತುಳಿದ ಬೆನ್ನಲ್ಲೇ ನಿಗೂಢಾರ್ಥದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದ ಸಮಂತಾ ಈಗ ತಾವು ಇನ್ನೊಮ್ಮೆ ಮದುವೆಯಾಗುವ ಮನಸು ಮಾಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ 2025ರ ತಮ್ಮ ರಾಶಿಯ ಫಲಾಫಲ ಹಂಚಿಕೊಂಡಿದ್ದಾರೆ. ಇಲ್ಲಿ ಬರೆದಂತೆ ತಮ್ಮ ಬದುಕಿನಲ್ಲಿ ನಡೆದರೆ ಸಾಕು ಎಂಬ ಅರ್ಥದಲ್ಲಿ ಹಾಗೆಯೇ ಆಗಲಿ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಹೀಗೆ ಹಂಚಿಕೊಂಡ ಈ ಫೋಸ್ಟ್‌ನಲ್ಲಿ ನಿಮಗೆ ಪ್ರಾಮಾಣಿಕ ಸಂಗಾತಿ ಸಿಗಲಿದ್ದಾರೆ ಎಂದು ಬರೆಯಲಾಗಿದ್ದು ಮಕ್ಕಳನ್ನು ಕೂಡ ಪಡೆಯಲಿದ್ದೀರಿ ಎಂದು ಭವಿಷ್ಯ ನುಡಿಯಲಾಗಿದೆ. ಹೀಗಾಗಿಯೇ ಸಮಂತಾ ಅವರ ಈ ಇನಸ್ಟಾಗ್ರಾಮ್f ಸ್ಟೋರಿಯನ್ನು ನೋಡಿದ ಅನೇಕರು ಸಮಂತಾ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಸಮಂತಾ ಮದುವೆ ನಡೆಯುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ 2025ರಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ ಎಂದು ಕೂಡ ಈ ಭವಿಷ್ಯದಲ್ಲಿ ಉಲ್ಲೇಖಿಸಲಾಗಿದ್ದು ಮಾನಸಿಕ ಮತ್ತು ದೈಹಿಕ ಆರೋಗ್ಯ ಕೂಡ ಸುಧಾರಿಸಲಿದೆ ಎಂದು ಬರೆಯಲಾಗಿದೆ.
ಅಂದ್ಹಾಗೇ ಸಮಂತಾ ಅವರದ್ದು ವೃಷಭ ರಾಶಿ. ಈ ರಾಶಿಯ ಜೊತೆ ಕನ್ಯಾರಾಶಿ ಮತ್ತು ಮಕರ ರಾಶಿಯವರ ಬದುಕಿನಲ್ಲಿ 2025ರಲ್ಲಿ ಏನೆಲ್ಲ ಆಗಬಹುದು, ಏನೆಲ್ಲ ನಿರೀಕ್ಷೆ ಮಾಡಬಹುದೆಂದು ಇಲ್ಲಿ ಪಟ್ಟಿಯನ್ನು ಮಾಡಲಾಗಿದೆ. ಆ ಪಟ್ಟಿಯನ್ನೇ ಸಮಂತಾ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಳೆಯದೆಲ್ಲವನ್ನೂ ಮರೆತು ನೀವು ನಿಮ್ಮ ಬದುಕಿನಲ್ಲಿ ಮುನ್ನಡೆಯಿರಿ ಎಂದು ಅಭಿಮಾನಿಗಳು ಸಮಂತಾ ಅವರಿಗೆ ಹೇಳುತ್ತಿದ್ದಾರೆ. ನಾಗಚೈತನ್ಯ ನಿಮ್ಮನ್ನು ಮರೆತು ಶೋಭಿತಾ ಅವರ ಜೊತೆ ಮದುವೆಯಾಗಿದ್ದಾಯ್ತು ಇನ್ನೂ ಕಾಯುವುದರಲ್ಲಿ ಅರ್ಥ ಇಲ್ಲ ನೀವು ಮದುವೆಯಾಗಿ ಎನ್ನುವ ಸಲಹೆಯನ್ನು ಕೂಡ ನೀಡುತ್ತಿದ್ದಾರೆ.

ಇನ್ನು ಸದ್ಯ ಎರಡನೇ ಮದುವೆಯ ಸುಳಿವನ್ನು ನೀಡಿದ ಸಮಂತಾ ಅವರ ಹೆಸರು ಕೆಲ ದಿನಗಳ ಹಿಂದೆ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ಜೊತೆ ಥಳುಕಿ ಹಾಕಿಕೊಂಡಿತ್ತು. ರಾಜ್ ಜೊತೆ ಸಮಂತಾ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಮುಂಬೈನಿಂದ ಹೈದ್ರಾಬಾದ್‌ವರೆಗೆ ಕೇಳಿ ಬಂದಿತ್ತು. ಇನ್ನೂ 'ರೆಡಿಟ್' ಎಂಬ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಮಂತಾ ಮತ್ತು ರಾಜ್ ಅವರ ಸಂಬಂಧದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಇನ್ನುಳಿದಂತೆ ಇತ್ತೀಚಿಗೆ ಸಿಟಾಡೆಲ್ ಹನಿ ಬನಿ ಚಿತ್ರದ ಪ್ರಚಾರದ ಸಮಯದಲ್ಲಿ ವರುಣ್ ಧವನ್ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದ ಸಮಂತಾ, ನಾಗಚೈತನ್ಯ ಹೆಸರನ್ನು ಹೇಳದೇ ಮಾತನ್ನಾಡಿದ್ದರು. ಆ ವ್ಯಕ್ತಿಯ ಮೇಲೆ ಸುಖಾ ಸುಮ್ಮನೆ ಹಣ ಖರ್ಚು ಮಾಡಿದೆ ಅದಕ್ಕೆ ನನಗೆ ಪಶ್ಚಾತಾಪ ಇದೆ ಎಂದು ಹೇಳಿದ್ದರು.


Click it and Unblock the Notifications











