For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಹಾಗೂ ಪವನ್ ಫ್ಯಾನ್ಸ್ ನಡುವೆ ಜಟಾಪಟಿ: ಪಂಡು- ಸಂಜು ಫೈಟ್‌ನಲ್ಲಿ ಗೆಲ್ಲೊದ್ಯಾರು?

  |

  ಪವರ್ ಸ್ಟಾರ್ ಪವನ್ ಕಲ್ಯಾಣ್, ಸೂಪರ್ ಸ್ಟಾರ್ ಮಹೇಶ್ ಬಾಬು. ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿರುವ ಸೂಪರ್‌ ಸ್ಟಾರ್‌ಗಳು. ಸದ್ಯ ಇವರಿಬ್ಬರ ಫ್ಯಾನ್ಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. 'ಪೋಕಿರಿ' ದಾಖಲೆ ಮುರಿಯೋಕೆ 'ಜಲ್ಸಾ' ಪವನ್ ಕಲ್ಯಾಣ್ ಫ್ಯಾನ್ಸ್ ಕಸರತ್ತು ನಡೆಸುತ್ತಿದ್ದಾರೆ.

  ತೆಲುಗು ಚಿತ್ರರಂಗದಲ್ಲಿ ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ರೀ ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ಇತ್ತೀಚೆಗೆ ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪೋಕಿರಿ' ಹೊಸ ರೂಪದಲ್ಲಿ ತೆರೆಕಂಡು ಸಖತ್ ಸದ್ದು ಮಾಡಿತ್ತು. ಅಭಿಮಾನಿಗಳು ಹಬ್ಬದ ರೀತಿ ಸಿನಿಮಾ ರಿಲೀಸ್ ಸೆಲೆಬ್ರೆಷನ್ ಮಾಡಿದ್ದರು. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಿ ಒಳ್ಳೆ ಕಲೆಕ್ಷನ್ ಕೂಡ ಮಾಡಿತ್ತು.

  ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!

  'ಪೋಕಿರಿ' ರೀ ರಿಲೀಸ್‌ ಸಕ್ಸಸ್ ಪವನ್ ಕಲ್ಯಾಣ್ ಫ್ಯಾನ್ಸ್ ಕಣ್ಣು ಕೆಂಪಗಾಗಿಸಿದೆ. ಇದೀಗ ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ 'ಜಲ್ಸಾ' ಸಿನಿಮಾ ಹೊಸ ತಂತ್ರಜ್ಞಾನದಲ್ಲಿ ತೆರೆಗೆ ಬರಲಿದೆ. ಈ ವಿಚಾರವನ್ನು ಚಿತ್ರತಂಡ ಸಹ ಕನ್ಫರ್ಮ್ ಮಾಡಿದೆ. ಈಗಿನಿಂದಲೇ ಪವನ್ ಕಲ್ಯಾಣ್ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ತಯಾರಿ ಶುರು ಮಾಡಿದ್ದಾರೆ. ಹೇಗಾದರೂ ಮಾಡಿ 'ಪೋಕಿರಿ' ದಾಖಲೆ ಮುರಿದು ಕಾಲರ್ ಎಗರಿಸಲು ಮನಸ್ಸು ಮಾಡಿದ್ದಾರೆ.

   ದಾಖಲೆ ಬರೆದಿದ್ದ 'ಜಲ್ಸಾ' ಸಿನಿಮಾ

  ದಾಖಲೆ ಬರೆದಿದ್ದ 'ಜಲ್ಸಾ' ಸಿನಿಮಾ

  2008ರಲ್ಲಿ ತೆರೆಕಂಡಿದ್ದ ತ್ರಿವಿಕ್ರಮ್ ಶ್ರೀನಿವಾಸ್ ನಟನೆಯ ಆಕ್ಷನ್ ಕಾಮಿಡಿ ಸಿನಿಮಾ 'ಜಲ್ಸಾ'. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ನಿರ್ಮಾಣದ ಸಿನಿಮಾ ಪವರ್ ಸ್ಟಾರ್ ಅಭಿಮಾನಿಗಳ ಮನಗೆದ್ದಿತ್ತು. ನಕ್ಸಲೈಟ್ ಸಂಜು ಸಾಹು ಪಾತ್ರದಲ್ಲಿ ಪವನ್ ಕಲ್ಯಾಣ್ ಮಿಂಚಿದ್ದರು. ದೇವಿಶ್ರೀ ಪ್ರಸಾದ್ ಕಂಪೋಸ್ ಮಾಡಿದ್ದ ಸಿನಿಮಾ ಸಾಂಗ್ಸ್‌ನ ಫ್ಯಾನ್ಸ್‌ ಇನ್ನು ಮರೆತ್ತಿಲ್ಲ. 4K ಸೌಂಡ್ ಎಫೆಕ್ಟ್‌ನಲ್ಲಿ ಹೊಸ ರೀತಿಯಲ್ಲಿ ಸಿನಿಮಾ ಸೆಪ್ಟೆಂಬರ್ 2ಕ್ಕೆ ಪವರ್ ಸ್ಟಾರ್ ಬರ್ತ್‌ಡೇ ಸಂಭ್ರಮದಲ್ಲಿ ತೆರೆಗೆ ಬರ್ತಿದೆ.

   'ಪೋಕಿರಿ' 1.48 ಕೋಟಿ ರೂ. ಕಲೆಕ್ಷನ್

  'ಪೋಕಿರಿ' 1.48 ಕೋಟಿ ರೂ. ಕಲೆಕ್ಷನ್

  ಆಗಸ್ಟ್ 9ರಂದು ದೇಶ ವಿದೇಶಗಳಲ್ಲಿ 'ಪೋಕಿರಿ' ಸಿನಿಮಾ 200 ಹೆಚ್ಚು ಶೋಗಳಲ್ಲಿ ಪ್ರದರ್ಶನ ಕಂಡಿತ್ತು. ಅಂದಾಜು 1.48 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಎರಡು ದಿನ ಮೊದಲ ಟಿಕೆಟ್ಸ್ ಸೋಲ್ಡ್‌ ಔಟ್ ಆಗಿ ಶೋಗಳು ಹೌಸ್‌ಫುಲ್‌ ಆಗಿತ್ತು. ವಿದೇಶಗಳಲ್ಲೂ ಪ್ರೇಕ್ಷಕರು ಮುಗಿಬಿದ್ದು ಪೂರಿ ಜಗನ್ನಾಥ್ ಮಾಸ್ಟರ್‌ಪೀಸ್ ಸಿನಿಮಾ ನೋಡಿದ್ದರು. ಇದರಿಂದ ಬಂದ ಹಣವನ್ನು ಮಹೇಶ್ ಬಾಬು ಚಾರಿಟಿಗೆ ಬಳಸಲು ಅಭಿಮಾನಿಗಳು ಮುಂದಾಗಿದ್ದಾರೆ.

   'ಜಲ್ಸಾ' 400ಕ್ಕೂ ಹೆಚ್ಚು ಶೋ

  'ಜಲ್ಸಾ' 400ಕ್ಕೂ ಹೆಚ್ಚು ಶೋ

  ಮೊದಲಿನಿಂದಲೂ ಪವನ್ ಹಾಗೂ ಮಹೇಶ್ ಫ್ಯಾನ್ಸ್‌ ನಡುವೆ ಕೋಲ್ಡ್‌ ವಾರ್ ನಡೀತ್ತಾನೆ ಇದೆ. 'ಪೋಕಿರಿ' ದಾಖಲೆ ಮುರಿಯಲೇ ಬೇಕು ಎಂದು ನಿರ್ಧರಿಸಿರುವ ಫ್ಯಾನ್ಸ್ 'ಜಲ್ಸಾ' ಚಿತ್ರದ 400ಕ್ಕೂ ಹೆಚ್ಚು ಶೋ ಪ್ರದರ್ಶನ ಮಾಡುವಂತೆ ನಿರ್ಮಾಪಕರಿಗೆ ದುಂಬಾಲು ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ನಮ್ಮ ಮೇಲೆ ಹಠಕ್ಕೆ ಬಿದ್ದು ಥಿಯೇಟರ್‌ ಖಾಲಿ ಹೊಡೆಯುವಂತೆ ಮಾಡಬೇಡಿ ಎಂದು ಮಹೇಶ್ ಫ್ಯಾನ್ಸ್ ಕೂಡ ಟಾಂಗ್ ಕೊಡುತ್ತಿದ್ದಾರೆ.

   ಚಿರು ಬರ್ತ್‌ಡೇಗೆ 'ಇಂದ್ರ' ರೀ- ರಿಲೀಸ್

  ಚಿರು ಬರ್ತ್‌ಡೇಗೆ 'ಇಂದ್ರ' ರೀ- ರಿಲೀಸ್

  ಆಗಸ್ಟ್ 22ಕ್ಕೆ ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಆ ದಿನ ಚಿರಂಜೀವಿ ನಟನೆಯ ಸೂಪರ್ ಹಿಟ್ ಚಿತ್ರವನ್ನು ರೀ- ರಿಲೀಸ್ ಮಾಡಬೇಕು ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ. 'ಗ್ಯಾಂಗ್ ಲೀಡರ್', 'ಇಂದ್ರ' ರೀತಿಯ ಸೆನ್ಸೇಷನ್‌ ಹಿಟ್ ಸಿನಿಮಾ ಆದರೆ ಪ್ರೇಕ್ಷಕರು ಬರುತ್ತಾರೆ ಅನ್ನುವ ನಿರೀಕ್ಷೆ ಇದೆ. ಸದ್ಯ ಸ್ಟಾರ್‌ ನಟರ ಯಾವುದೇ ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಿಲ್ಲ. ಹಾಗಾಗಿ ಹಳೇ ಸಿನಿಮಾಗಳನ್ನೇ ಹೊಸ ಹೊಸ ತಂತ್ರಜ್ಞಾನದಲ್ಲಿ ಮರುಬಿಡುಗಡೆ ಮಾಡುವ ಕೆಲಸ ನಡೀತಿದೆ.

  Recommended Video

  D Boss Darshan 25 ವರ್ಷಕ್ಕೆ ಅದ್ಧೂರಿಯಾಗಿ ಸಂಭ್ರಮಾಚರಣೆ | Filmibeat Kannada
  English summary
  After Pokiri All set for Pawan Kalyan's Jalsa special shows on His Birthday. Know More.
  Saturday, August 13, 2022, 16:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X