ಒಂದೇ ಚಿತ್ರದಲ್ಲಿ ಪ್ರಭಾಸ್, ಲಾಲ್, ಶಿವಣ್ಣ, ಅಕ್ಷಯ್‌ ಕುಮಾರ್; ಅಧಿಕೃತವಾಗಿ ಘೋಷಣೆ

ಪ್ಯಾನ್‌ ಇಂಡಿಯಾ ಸಿನಿಮಾ ಪುಣ್ಯ ಎನ್ನುವಂತೆ ಅಕ್ಕಪಕ್ಕದ ಚಿತ್ರರಂಗಗಳೆಲ್ಲಾ ಹತ್ತಿರವಾಗಿಬಿಟ್ಟಿದೆ. ಸ್ಟಾರ್ ಕಲಾವಿದರು ಭಾಷೆಯ ಗಡಿ ಮೀರಿ ನಟಿಸೋಕೆ ಆರಂಭಿಸಿದ್ದಾರೆ. ಮುಂದಿನ ವರ್ಷವೇ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಕನ್ನಡ ಚಿತ್ರದಲ್ಲಿ ನಟಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನುವಂತಾಗಿದೆ.

5 ಭಾಷೆಗಳಲ್ಲಿ ಸಿನಿಮಾಗಳು ತೆರೆಗಪ್ಪಳಿಸುವುದರಿಂದ ಎಲ್ಲಾ ಕಡೆಗೂ ಸಿನಿಮಾಗಳು ತಲುಪುವಂತಾಗಿದೆ. ಸೌತ್ ಕಲಾವಿದರು ಬಾಲಿವುಡ್ ಸಿನಿಮಾಗಳಲ್ಲಿ ಅದೇ ರೀತಿ ಬಾಲಿವುಡ್ ಸ್ಟಾರ್‌ಗಳು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುವ ಪರಿಪಾಠ ಆರಂಭವಾಗಿಬಿಟ್ಟಿದೆ. ಇತ್ತೀಚೆಗೆ ಶಿವಣ್ಣ ತಮಿಳಿನ 'ಜೈಲರ್' ಚಿತ್ರದಲ್ಲಿ ನಟಿಸಿ ಗೆದ್ದರು. ಇದೀಗ ರಾಮ್‌ಚರಣ್ ನಟನೆಯ ಹೊಸ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

After Prabhas Mohan lal Akshay Kumar on board for this pan-india project

ತೆಲುಗಿನ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಪಕ್ಕಾ ಆಗಿದೆ. ಸದ್ಯ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ಹೌದು ಕೆಲ ದಿನಗಳಿಂದ 'ಕಣ್ಣಪ್ಪ' ಚಿತ್ರದಲ್ಲಿ ಅಕ್ಕಿ ನಟಿಸುವ ಬಗ್ಗೆ ಗುಸುಗುಸು ಶುರುವಾಗಿತ್ತು. ಇದೀಗ ಅಧಿಕೃತವಾಗಿ ಚಿತ್ರತಂಡವೇ ಘೋಷಿಸಿದೆ.

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ 'ಕಣ್ಣಪ್ಪ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮಂಚು ವಿಷ್ಣು ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ತಂದೆ ಮೋಹನ್ ಬಾಬು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದಲ್ಲಿ ಬಂದಿದ್ದ 'ಬೇಡರ ಕಣ್ಣಪ್ಪ' ಹಾಗೂ 'ಶಿವಮೆಚ್ಚಿದ ಕಣ್ಣಪ್ಪ' ಸಿನಿಮಾಗಳೇ ಈ 'ಕಣ್ಣಪ್ಪ' ಚಿತ್ರಕ್ಕೆ ಸ್ಫೂರ್ತಿ.

ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಬೇಡರ ಕಣ್ಣಪ್ಪ ಬಹಳ ಪ್ರಸಿದ್ಧನಾದವನು. ತನ್ನ ಮುಗ್ಧ ಭಕ್ತಿಯಿಂದ ಶಿವನನ್ನೇ ಒಲಿಸಿಕೊಂಡ ಕಣ್ಣಪ್ಪನ ಕಥೆ ಸಾಕಷ್ಟು ನಾಟಕಗಳಾಗಿ ಪ್ರದರ್ಶನ ಕಾಣುತ್ತಿತ್ತು. ಇದೇ ಕಥೆ ಆಧರಿಸಿ ಡಾ. ರಾಜ್‌ಕುಮಾರ್ ಹೀರೊ ಆಗಿ 'ಬೇಡರ ಕಣ್ಣಪ್ಪ' ಸಿನಿಮಾ ಬಂದಿತ್ತು. ಬಳಿಕ ತೆಲುಗಿನಲ್ಲಿ ಕೃಷ್ಣಂರಾಜು ಈ ಸಿನಿಮಾ ರೀಮೆಕ್ ಮಾಡಿದ್ದರು. ಅದೇ ಕಥೆಯನ್ನು ಇವತ್ತಿನ ತಂತ್ರಜ್ಞಾನ ಬಳಸಿ ತೆರೆಗೆ ತರಲಾಗುತ್ತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿರುವುದರಿಂದ ಬೇರೆ ಬೇರೆ ಭಾಷೆಯ ಕಲಾವಿದರನ್ನು ಅತಿಥಿ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಓಮೈ ಗಾಡ್' ಚಿತ್ರದಲ್ಲಿ ಶಿವದೂತನಾಗಿ ಅಕ್ಷಯ್‌ಕುಮಾರ್ ನಟಿಸಿದ್ದರು. 'ಕಣ್ಣಪ್ಪ' ಚಿತ್ರದಲ್ಲಿ ಶಿವನ ಪಾತ್ರದಲ್ಲೇ ನಟಿಸುತ್ತಾರೆ ಎನ್ನಲಾಗ್ತಿದೆ. ಅನುಷ್ಕಾ ಶೆಟ್ಟಿ ಪಾರ್ವತಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಶಿವರಾಜ್‌ಕುಮಾರ್ ಕೂಡ 'ಕಣ್ಣಪ್ಪ' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಶಿವಣ್ಣನ ಜೊತೆ ಒಮ್ಮೆ ಮಾತುಕತೆ ಸಹ ನಡೆದಿದೆ. ಆದರೆ ಇನ್ನು ಫೈನಲ್ ಆಗಿಲ್ಲ. ಆದರೆ ಸೆಂಚುರಿ ಸ್ಟಾರ್ ನಟಿಸಲು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಶಿವಣ್ಣ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಈಗಾಗಲೇ ನ್ಯೂಜಿಲೆಂಡ್‌ನಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ.

ಶಿವರಾತ್ರಿ ಸಂಭ್ರಮದಲ್ಲಿ ಬೇಡರ ಕಣ್ಣಪ್ಪನಾಗಿ ಮಂಚು ವಿಷ್ಣು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಇನ್ನುಳಿದಂತೆ ಶರತ್‌ಕುಮಾರ್, ದೇವರಾಜ್, ಮಧೂ, ಬ್ರಹ್ಮಾನಂದಂ ಸೇರಿದಂತೆ ದೊಡ್ಡ ತಾರಾಗಳ ಚಿತ್ರದಲ್ಲಿದೆ. ಸದ್ಯ ಅಕ್ಷಯ್ ಕುಮಾರ್ ಏಳೆಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮರಾಠಿ ಚಿತ್ರದಲ್ಲಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಸಿಂಗ್ ಅಗೇನ್', 'ಸ್ಕೈ ಫೋರ್ಸ್', 'ಶಂಕರ', 'ಖೇಲ್ ಖೇಲ್ ಮೇನ್', 'ಹೇರಾಪೇರಿ-3' ಹೀಗೆ ಅಕ್ಷಯ್‌ಕುಮಾರ್ ನಟಿಸುತ್ತಿರುವ ಸಿನಿಮಾಗಳ ಸಂಖ್ಯೆ ದೊಡ್ಡದಿದೆ. ಆ ಸಾಲಿಗೆ ತೆಲುಗಿನ 'ಕಣ್ಣಪ್ಪ' ಸಿನಿಮಾ ಕೂಡ ಸೇರಿಕೊಂಡಿದೆ.

More from Filmibeat

English summary
Akshay Kumar is all set for his Telugu debut with this Magnum Opus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X