ಮೌಳಿ ಕೂಡ ಮಾಡದಂತ ಚಿತ್ರದಲ್ಲಿ ಅಲ್ಲು ಅರ್ಜುನ್; ಮುಂದಿನ ಸಿನಿಮಾ ಅಪ್‌ಡೇಟ್ ಇಲ್ಲಿದೆ

ಎಲ್ಲೆಲ್ಲೂ 'ಪುಷ್ಪ'ರಾಜ್ ಹವಾ ನಡೀತಿದೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ಸಿನಿಮಾ ದಾಖಲೆ ಮೇಲೆ ದಾಖಲೆ ಬರೀತಿದೆ. ಶೀಘ್ರದಲ್ಲೇ 'ಬಾಹುಬಲಿ-2' ಚಿತ್ರವನ್ನು ಹಿಂದಿಕ್ಕಿ ಸೂಪರ್ ಹಿಟ್ ಆಗುವ ಸುಳಿವು ಸಿಗುತ್ತಿದೆ. ಈಗಾಗಲೇ ಸಿನಿಮಾ ಒಟ್ಟು ಗಳಿಕೆ 1000 ಕೋಟಿ ರೂ. ದಾಟಿದೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ 'ಪುಷ್ಪ' ಸರಣಿ ಸಿನಿಮಾಗಳಲ್ಲಿ ಮುಳುಗಿದ್ದ ಬನ್ನಿ ಅಂತೂ ಇಂತೂ ಅದರಿಮದ ಹೊರ ಬಂದಿದ್ದಾರೆ. 'ಪುಷ್ಪ'-2 ಬಳಿಕ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ.

After Pushpa-2 Allu Arjun to team up with Trivikram Srinivas for next

'ಜವಾನ್' ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಅದಕ್ಕೆ ಬ್ರೇಕ್ ಬಿದ್ದಿದೆ. ಇದೀಗ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಬನ್ನಿ ನಟಿಸೋದು ಬಹುತೇಕ ಖಚಿತವಾಗಿದೆ. ಮುಂದಿನ ತಿಂಗಳು ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಣೆ ಆಗಲಿದೆ. ಈ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.

ಹಾರಿಕಾ & ಹಾಸಿನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರ್ಜುನ್ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ತ್ರಿವಿಕ್ರಮ್ ಶ್ರೀನಿವಾಸ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ಪ್ಲ್ಯಾನ್ ನಡೀತಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಮುಕ್ತಾಯದ ಹಂತಕ್ಕೆ ತಲುಪಿದ್ದು ಆದಷ್ಟು ಬೇಗ ಪ್ರೋಮೊ ಸಮೇತ ಸಿನಿಮಾ ಘೋಷಣೆ ಆಗುತ್ತದೆ. ಮಾರ್ಚ್‌ನಲ್ಲೇ ಶೂಟಿಂಗ್ ಎನ್ನಲಾಗ್ತಿದೆ.

After Pushpa-2 Allu Arjun to team up with Trivikram Srinivas for next

ನಿರ್ಮಾಪಕ ನಾಗವಂಶಿ ಮಾತನಾಡಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಬಹಳ ದೊಡ್ಡದು. ಅಂತಾದೊಂದು ಜಾನರ್ ಅನ್ನು ರಾಜಮೌಳಿ ಸಹ ಟಚ್ ಮಾಡಿಲ್ಲ. ಅಷ್ಟು ವಿಭಿನ್ನವಾದ ಜಾನರ್ ಸಿನಿಮಾ ಅದು. ಅಲ್ಲು ಅರ್ಜುನ್ ಸರ್ 'ಪುಷ್ಪ'-2 ಚಿತ್ರದಿಂದ ಸಂಪೂರ್ಣವಾಗಿ ಹೊರ ಬಂದಮೇಲೆ ಫೈನಲ್ ಮಾಡಿ ಸಿನಿಮಾ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಅಲ್ಲು ಅಲ್ಲು ಅರ್ಜುನ್ ಜೋಡಿ ಈಗಾಗಲೇ ಎರಡು ಸಿನಿಮಾ ಮಾಡಿ ಗೆದ್ದಿದೆ. 'ಜುಲಾಯಿ' ಹಾಗೂ 'ಅಲಾ ವೈಕುಂಠಪುರಂಲೋ' ಚಿತ್ರಗಳು ಹಿಟ್ ಲಿಸ್ಟ್ ಸೇರಿದೆ. ಹಾಗಾಗಿ ಸಹಜವಾಗಿಯೇ ಇವರಿಬ್ಬರ ಮೂರನೇ ಸಿನಿಮಾ ಕುತೂಹಲ ಮೂಡಿಸಿದೆ. ಅದರಲ್ಲೂ 'ಪುಷ್ಪ'-2 ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಐಕಾನ್ ಸ್ಟಾರ್ ಮುಂದಿನ ಸಿನಿಮಾ ಹೇಗಿರುತ್ತದೆ? ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

ನಿರ್ದೇಶಕ ಬೋಯಪಾಟಿ ಶ್ರೀನು ಜೊತೆಗೂ ಅಲ್ಲು ಅರ್ಜುನ್ ಒಂದು ಸಿನಿಮಾ ಮಾಡಬೇಕಿದೆ. ಹಿಂದೆ ಇವರಿಬ್ಬೆ 'ಸರೈನೋಡು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಾಸ್ ಸಿನಿಮಾಗಳ ಸರದಾರ ಬೊಯಪಾಟಿ ಜೊತೆ ಸ್ಟೈಲಿಶ್ ಸ್ಟಾರ್ ಕೈ ಜೋಡಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ ಎನ್ನುವುದು ಅಭಿಮಾನಿಗಳ ಲೆಕ್ಕಚಾರ.

ಸದ್ಯ ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿಧಾನವಾಗಿ ಸಿನಿಮಾ ಕ್ರೇಜ್ ಕಮ್ಮಿ ಆಗುತ್ತಿದೆ. ಮತ್ತೊಂದು ಕಡೆ ಸಿನಿಮಾ ಪೈರಸಿ ಆಗಿರುವುದು ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಿದೆ. ಚಿತ್ರದ ಒಳ್ಳೆ ಪ್ರಿಂಟ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಹಾಗಾಗಿ ಇನ್ನು ಮುಂದೆ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದು ಕಷ್ಟ ಎನ್ನುವ ಮಾತುಗಳು ಕೇಳಿಬರ್ತಿದೆ.

ಡಿಸೆಂಬರ್ 5ಕ್ಕೆ ಬಿಡುಗಡೆಯಾದ 'ಪುಷ್ಪ'-2 ಮೊದಲ ವಾರವೇ 1000 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಹಿಂದಿ ವರ್ಷನ್‌ಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಡಬ್ ವರ್ಷನ್ ಸದ್ದು ಮಾಡ್ತಿದೆ. ಸಾಕಷ್ಟು ಜನ ಕನ್ನಡದಲ್ಲೇ ಸಿನಿಮಾ ನೋಡಲು ಬಯಸುತ್ತಿದ್ದಾರೆ.

More from Filmibeat

English summary
Producer Nagavamshi opens up about Allu arjun next film;
Read more about: allu arjun tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X