ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ಗೆ ಹೆಚ್ಚಿದ ಬೇಡಿಕೆ: ಹಳೆ ಸಿನಿಮಾ ಹೊಸದಾಗಿ ಹಿಂದಿಯಲ್ಲಿ ರಿಲೀಸ್!

ಸದ್ಯ ಭಾರತೀತದಲ್ಲಿ ರಿಲೀಸ್ ಆಗಿ ದೊಡ್ಡ ಸಕ್ಸಸ್ ಕಂಡು, ಗೆದ್ದು ಬೀಗುತ್ತಿರುವ ಸಿನಿಮಾ ಅಂದರೆ ಅದು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ'. ಪುಷ್ಪ ಸಿನಿಮಾ ಕೇವಲ ತೆಲುಗು ಚಿತ್ರವಾಗಿ ಮಾತ್ರ ದಾಖಲೆ ಮಾಡಿಲ್ಲ. ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಈ ಚಿತ್ರ ತೆರೆಗೆ ಬಂದಿದೆ. ಈಗ ಚಿತ್ರ ಹಿಂದಿಯಲ್ಲಿ ದಾಖಲೆ ಮಾಡಿ ಬಾಲಿವುಡ್ ಪ್ರೇಕ್ಷಕರನ್ನು ಸೆಳೆದಿದೆ.

ಪುಷ್ಪ ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್‌ ಫೇಮ್ ಮತ್ತಷ್ಟು ಹೆಚ್ಚಿದೆ. ಅವರ ಸಿನಿಮಾಗಳಿಗೆ ನಾರ್ತ್‌ನಲ್ಲಿ ಹೆಚ್ಚು ಅಭಿಮಾನಿಗಳು ಹಟ್ಟಿ ಕೊಂಡಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್‌ ಅವರ ಸಿನಿಮಾಗಳಿಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಅಲ್ಲು ಅರ್ಜುನ್‌ಗೂ ಕೂಡ ಬಾಲಿವುಡ್‌ನಲ್ಲಿ ರೆಡ್‌ ಕಾರ್ಪೆಟ್ ಹಾಸುವ ಸಮಯ ಹತ್ತಿರ ಬಂದಿದೆ.

ಪುಷ್ಪ ಸಿನಿಮಾ ಹಿಂದಿಯಲ್ಲಿ ಅದ್ದೂರಿ ಯಶಸ್ಸು ಕಂಡಿದೆ. ಹಾಗಾಗಿ ಅಲ್ಲು ಅರ್ಜುನ್ ಹಳೇ ಚಿತ್ರಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಅಭಿನಯದ ಅಲಾ ವೈಕುಂಠ ಪುರಮುಲೊ ಚಿತ್ರಕ್ಕೆ ಬಾಲಿವುಡ್‌ನಿಂದ ಬೇಡಿಕೆ ಬಂದಿದೆ. ಈ ಚಿತ್ರ ಸದ್ಯದಲ್ಲೇ ಹಿಂದಿಯಲ್ಲಿ ತೆರೆ ಕಾಣಲಿದೆ.

ಜನವರಿ 26ಕ್ಕೆ ಅಲಾ ವೈಕುಂಠ ಪುರಮುಲೋ ರಿಲೀಸ್!

ಅಲ್ಲು ಅರ್ಜುನ್ ಅವರ 'ಅಲಾ ವೈಕುಂಠ ಪುರಮುಲೋ' ಚಿತ್ರ ಈಗ ಮತ್ತೆ ರಿಲೀಸ್‌ಗೆ ರೆಡಿಯಾಗಿದೆ. ಇದೇನಿದು ಈಗಾಗಲೇ ರಿಲೀಸ್‌ ಆಗಿ ಹೋಗಿದ್ದ ಸಿನಿಮಾ ಮತ್ತೆ ರಿಲೀಸ್‌ ಆಗುತ್ತಿದೆಯಾ ಅಂತ ಅಚ್ಚರಿ ಆಗಬಹುದು, ಆದರೆ ಇದು ನಿಜ. ಅಲಾ ವೈಕುಂಠ ಪುರಮುಲೋ ಸಿನಿಮಾ ಸದ್ಯಕ್ಕೆ ಹಿಂದಿಯಲ್ಲಿ ಡಬ್‌ ಆಗಿ ರಿಲೀಸ್ ಆಗುತ್ತಿದೆ. ಈ ಹಿಂದೆ 2020ರಲ್ಲಿ ಜನವರಿ 12ರಂದು ಸಿನಿಮಾ ರಿಲೀಸ್‌ ಆಗಿತ್ತು. ತೆಲುಗಿನಲ್ಲಿ ಬಾಕ್‌ ಬಸ್ಟರ್‌ ಹಿಟ್‌ ಆಗಿತ್ತು ಈ ಚಿತ್ರ. ಆದರೆ ಈಗ ಎರಡು ವರ್ಷದ ಬಳಿಕ ಈ ಚಿತ್ರಕ್ಕೆ ಮತ್ತೆ ಬೇಡಿಕೆ ಬಂದಿದೆ. ಹಿಂದಿಗೆ ಡಬ್‌ ಆಗಿ ಇದೇ ಜನವರಿ 26ರಂದು ಚಿತ್ರ ಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ.

'ಪುಷ್ಪ' ಬಳಿಕ ಹಿಂದಿಯಲ್ಲಿ 'ಅಲಾ ವೈಕುಂಠ ಪುರಮುಲೊ'!

'ಪುಷ್ಪ' ಬಳಿಕ ಹಿಂದಿಯಲ್ಲಿ 'ಅಲಾ ವೈಕುಂಠ ಪುರಮುಲೊ'!

ಪುಷ್ಪ ಚಿತ್ರಕ್ಕಿಂತಲೂ ಮೊದಲು ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠ ಪುರಮುಲೊ 'ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರ ಕೂಡ ಸೂಪರ್ ಹಿಟ್ ಆದ ಚಿತ್ರ. ಅಲ್ಲು ಅರ್ಜುನ್ ಅವರಿಗೆ ದೊಡ್ಡ ಸಕ್ಸಸ್ ತಂದು ಕೊಟ್ಟ 'ಅಲಾ ವೈಕುಂಠ ಪುರಮುಲೊ'. ಈ ಚಿತ್ರ ತೆಲುಗಿನಲ್ಲಿ ತೆರೆ ಕಂಡು ಅದ್ದೂರಿ ಯಶಸ್ಸು ಕಂಡ ಸಿನಿಮಾ. ಬಾಕ್ಸಾಫೀಸ್‌ನಲ್ಲೂ ಕೂಡ ಈ ಚಿತ್ರ ಹೊಸ ದಾಖಲೆ ಬರೆದಿದೆ. ಈಗ ಈ ಚಿತ್ರ ಹಿಂದಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಪುಷ್ಪ ಚಿತ್ರ ಸಕ್ಸಸ್ ಆದ ಬಳಿಕ ಈಗ ಅಲ್ಲು ಅರ್ಜುನ್ ಚಿತ್ರಗಳಿಗೆ ನಾರ್ತ್ ನಲ್ಲಿ ಬೇಡಿಕೆ ಹೆಚ್ಚುತ್ತಿದೆ.

100 ಕೋಟಿಯತ್ತ ಹಿಂದಿ 'ಪುಷ್ಪ' ಓಟ!

100 ಕೋಟಿಯತ್ತ ಹಿಂದಿ 'ಪುಷ್ಪ' ಓಟ!

ಅಲ್ಲು ಅರ್ಜುನ್ ಸದ್ಯ ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರಾಗಿ ಬಿಟ್ಟಿದ್ದಾರೆ. ಹಿಂದಿಯಲ್ಲಿ ರಿಲೀಸ್ ಆದ ಪುಷ್ಪ ಚಿತ್ರವನ್ನು ಅಲ್ಲಿ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಪುಷ್ಪ ಸಿನಿಮಾದ ಹಿಂದಿ ಅವತರಣಿಕೆ ಸೂಪರ್, ಡೂಪರ್ ಹಿಟ್ ಆಗಿ ಬಿಟ್ಟಿದೆ. ಈ ಒಂದು ಚಿತ್ರ ಸೌತ್ ಸ್ಟಾರ್ ನಟ ಅಲ್ಲು ಅರ್ಜುನ್‌ನನ್ನು ಬಾಲಿವುಡ್‌ನಲ್ಲಿ ಮೆರೆಸುತ್ತಿದೆ. ಪುಷ್ಪ ಸಿನಿಮಾ ಹಿಂದಿಯಲ್ಲಿ ಮಾತ್ರ ದೊಡ್ಡ ಮೊತ್ತದ ದಾಖಲೆ ಕಲೆ ಹಾಕುತ್ತಿದೆ. ಸದ್ಯ 100 ಕೋಟಿ ರೂ ದಾಖಲೆಯತ್ತ ಸಿನಿಮಾ ಸಾಗುತ್ತಿದೆ. ಸದ್ಯ ಇಲ್ಲಿ ತನಕ 86 ಕೋಟಿ ಮೊತ್ತ ಕಲೆ ಹಾಕಿದೆ.

ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ಗೆ ರೆಡ್ ಕಾರ್ಪೆಟ್!

ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ಗೆ ರೆಡ್ ಕಾರ್ಪೆಟ್!

ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಲೇ, ಅವರ ಚಿತ್ರಗಳಿಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಮುಂದೆ ಅಲ್ಲು ಸಿನಿಮಾಗಳು ತೆಲುಗು ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗುತ್ತವೆ. ಆದರೆ ಅದಕ್ಕಿಂತ ವಿಶೇಷ ಅಂದರೆ, ಅಲ್ಲು ಅರ್ಜುನ್ ಹಳೆ ಚಿತ್ರಕ್ಕೆ ಈಗ ಹಿಂದಿಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಹಿಂದಿಗೆ ಡಬ್ ಆಗಿ ಇದೇ ಜನವರಿ 26ಕ್ಕೆ 'ಅಲಾ ವೈಕುಂಠ ಪುರಮುಲೊ ಚಿತ್ರ ರಿಲೀಸ್ ಆಗಲಿದೆ‌. ಇದು ಹಿಂದಿ ಪ್ರೇಕ್ಷಕರಲ್ಲಿ ಸಂತಸ ತಂದಿದೆ. ಈ ಮೂಲಕ ಅಲ್ಲು ಅರ್ಜುನ್ ಚಿತ್ರ ಮತ್ತೆ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

More from Filmibeat

English summary
After Pushpa, Now Hindi Dubbed Version Of 'Ala Vaikunthapurramuloo' In Cinemas From January 26th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X