'ರಾಜಾ ಡಿಲಕ್ಸ್' ಆನ್‌ಲೈನ್‌ನಲ್ಲಿ ಫೋಟೊ ಲೀಕ್: ಪ್ರಶಾಂತ್ ನೀಲ್ ಹಿಂದೆ ಬಿದ್ದ ಪ್ರಭಾಸ್ ಫ್ಯಾನ್ಸ್
ಸಿನಿಮಾರಂಗದಲ್ಲಿ ಸಿನಿಮಾ, ಸಾಂಗ್ ಲೀಕ್ ಆಗೋದು ಕಾಮನ್. ಯಾವುದಾದರೂ ಒಂದು ಸಿನಿಮಾ ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾದ ಸೆಟ್ ಇಮೇಜ್ ಲೀಕ್ ಆಗಿದೆ. ಈ ಮೂಲಕ ಪ್ರಭಾಸ್ ಲುಕ್ ರಿವೀಲ್ ಆಗಿದೆ.
ಹೌದು, ಪ್ರಭಾಸ್ ನಟಿಸುತ್ತಿರುವ 'ರಾಜಾ ಡಿಲಕ್ಸ್' ಸಿನಿಮಾದ ಸೆಟ್ಟಿನ ಇಮೇಜ್ ಲೀಕ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಇಮೇಜ್‌ನಲ್ಲಿ ಪ್ರಭಾಸ್ ಜೊತೆ ಸಿನಿಮಾ ಹೀರೊಯಿನ್ ರಿದ್ಧಿ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.
ಮಾರುತಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಪ್ರಭಾಸ್ ಫ್ಯಾನ್ಸ್ ಆರಂಭದಿಂದಲೇ ತಿರುಗಿಬಿದ್ದಿದ್ದಾರೆ. ಈ ಸಿನಿಮಾ ಮಾಡುವುದೇ ಬೇಡ ಅಂತ ಅಭಿಮಾನಿಗಳು ಕಿಡಿಕಾರಿದ್ದರು. ಹೀಗಿದ್ದರೂ ಪ್ರಭಾಸ್ 'ರಾಜ ಡಿಲಕ್ಸ್' ಸಿನಿಮಾವನ್ನು ಒಪ್ಪಿಕೊಂಡಿದ್ದರು.
ಅಸಲಿಗೆ ಇಲ್ಲಿ ಮ್ಯಾಟರ್ ಬೇರೆನೇ ಇದೆ. 'ರಾಜಾ ಡಿಲಕ್ಸ್' ಸೆಟ್ಟಿನ ಇಮೇಜ್ ಲೀಕ್ ಆಗಿದ್ದರಿಂದ ಸಿನಿಮಾದ ನಿರ್ದೇಶಕ ಮಾರುತಿ ವಿರುದ್ಧ ತಿರುಗಿಬೀಳುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಹಾಗಾಗಲಿಲ್ಲ. ಆದ್ರೆ, ಪ್ರಭಾಸ್ ಫ್ಯಾನ್ಸ್ ಹಿಡ್ಕೊಂಡಿದ್ದು ಮಾರುತಿ ಅಲ್ಲ ಪ್ರಶಾಂತ್ ನೀಲ್.

ಪ್ರಭಾಸ್ ಫ್ಯಾನ್ಸ್ 'ಸಲಾರ್' ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಹಿಂದೆ ಬಿದ್ದಿದ್ದಾರೆ. ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡುವಂತೆ ಒತ್ತಡ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕಮೆಂಟ್‌ಗಳು ಕೂಡ ವೈರಲ್ ಆಗುತ್ತಿವೆ.
ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾ ಈ ವರ್ಷವೇ ಬಿಡುಗಡೆಯಾಗುತ್ತಿದೆ. ಸದ್ಯ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ, ಇತ್ತೀಚೆಗೆ ಪ್ರಶಾಂತ್ ನೀಲ್ ಈ ಸಿನಿಮಾ ಬಗ್ಗೆ ಒಂದೇ ಒಂದು ಮಾಹಿತಿಯನ್ನೂ ನೀಡಿರಲಿಲ್ಲ. ಈಗ 'ರಾಜಾ ಡಿಲಕ್ಸ್' ಫೋಟೊ ಲೀಕ್ ಆಗುತ್ತಿದ್ದಂತೆ ಅದನ್ನೇ ನೆಪವಾಗಿಟ್ಟುಕೊಂಡು 'ಸಲಾರ್' ಸಿನಿಮಾಗೆ ಅಪ್‌ಡೇಟ್ ನೀಡುವಂತೆ ಒತ್ತಡ ಹೇರಿದ್ದಾರೆ.
ರಾಜಾ ಡಿಲಕ್ಸ್ ಸಿನಿಮಾದ ಇಮೇಜ್ ಲೀಕ್ ಆಗಿದ್ದು, ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ. 'ಆದಿಪುರುಷ್' ಸಿನಿಮಾದ ಲುಕ್‌ನಿಂದ ಬೇಸರಗೊಂಡಿರೋ ಫ್ಯಾನ್ಸ್ ಈ ಸಿನಿಮಾದಲ್ಲಿ ಪ್ರಭಾಸ್ ಲುಕ್‌ಗೆ ಏನಂತಾರೋ ಅನ್ನೋ ನಿರೀಕ್ಷೆಯಿತ್ತು. ಆದ್ರೀಗ ಫ್ಯಾನ್ಸ್ ಟ್ರೋಲ್ ಮಾಡದೆ ಇರೋದು ಚಿತ್ರತಂಡಕ್ಕೆ ಸಮಾಧಾನ ತಂದಿದೆ.
'ರಾಜಾ ಡಿಲಕ್ಸ್'ನಲ್ಲಿ ಮೂವರು ಹೀರೊಯಿನ್ಸ್. ರಿದ್ಧಿ ಕುಮಾರ್, ಮಾಲವಿಕಾ ಮೋಹನನ್ ಹಾಗೂ ನಿಧಿ ಅಗರ್ವಾಲ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಸೂಪರ್ ನ್ಯಾಚುರಲ್ ಥೀಮ್‌ನಲ್ಲಿ ರೊಮ್ಯಾಂಟಿಕ್ ಕಾಮಿಡಿ ಕಥೆಯನ್ನು ಹೆಣೆದಿದ್ದಾರೆ ಎನ್ನಲಾಗಿದೆ. ಏನೇ ಇದ್ರೂ, 'ರಾಜಾ ಡಿಲಕ್ಸ್' ಇಮೇಜ್ ಲೀಕ್ ಆಗಿದ್ದ ಪ್ರಶಾಂತ್ ನೀಲ್ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಏನಾದ್ರೂ ಅಪ್‌ಡೇಟ್ ಕೊಡ್ತಾರಾ ಅನ್ನೋ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











