ಯಶಸ್ಸಿಗಾಗಿ ರಶ್ಮಿಕಾ, ನಿಧಿ ಬಳಿಕ ವೇಣುಸ್ವಾಮಿ ಮಾರ್ಗದರ್ಶನದಲ್ಲಿ ಮತ್ತೊಬ್ಬ ನಟಿ ಪೂಜೆ
ಟಾಲಿವುಡ್‌ನಲ್ಲಿ ಸೆಲೆಬ್ರೆಟಿಗಳ ಭವಿಷ್ಯ ಹೇಳುತ್ತೀನಿ ಎಂದು ಭಾರೀ ಜನಪ್ರಿಯತೆ ಪಡೆದುಕೊಂಡಿರುವ ವ್ಯಕ್ತಿ ವೇಣುಸ್ವಾಮಿ. ನಾಗಚೈತನ್ಯಾ- ಸಮಂತಾ ಡಿವೋರ್ಸ್ ಪಡೆದು ದೂರಾಗುತ್ತಾರೆ ಎಂದು ಬಹಳ ಹಿಂದೆ ವೇಣುಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಬಳಿಕ ಇದೇ ರೀತಿ ನಟ-ನಟಿಯರ ಕುರಿತು ಮಾತನಾಡುತ್ತಾ ಬರುತ್ತಿದ್ದಾರೆ.
ಪವನ್ ಕಲ್ಯಾಣ್ ಹಾಗೂ ಪ್ರಭಾಸ್ ವೈಯಕ್ತಿಯ ವಿಚಾರಗಳ ಬಗ್ಗೆ ಮಾತನಾಡಿ ಅಭಿಮಾನಿಗಳ ಕೆಂಗಣ್ಣಿಗೂ ವೇಣುಸ್ವಾಮಿ ಗುರಿಯಾಗಿದ್ದಾರೆ. ಯೂಟ್ಯೂಬ್ ಚಾನಲ್‌ಗಳಲ್ಲಿ ಕೂತು ಆ ನಟನಿಗೆ ಟೈಮ್ ಸರಿಯಿಲ್ಲ, ಈ ನಟಿಯ ಸಕ್ಸಸ್‌ಗೆ ಬ್ರೇಕ್ ಹಾಕೋಕ್ಕೆ ಸಾಧ್ಯವಿಲ್ಲ ಅಂತೆಲ್ಲಾ ಹೇಳುತ್ತಿರುತ್ತಾರೆ. ಇನ್ನು ವೇಣುಸ್ವಾಮಿ ಬಳಿ ಕೆಲ ನಟ, ನಟಿಯರು ಪೂಜೆ ಮಾಡಿಸುವುದು ಇದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಕೆಲ ನಟಿಯರು ವಿಶೇಷ ಮಾಡಿಸಿದ್ದ ಫೋಟೊ, ವಿಡಿಯೋ ವೈರಲ್ ಆಗಿತ್ತು.

ರಶ್ಮಿಕಾ ಮಂದಣ್ಣ ನನ್ನ ಮಾರ್ಗದರ್ಶನದಲ್ಲಿ ತಾರಾದೇವಿ ಪೂಜೆ ಮಾಡಿದ ಮೇಲೆ ಆಕೆಗೆ ಭಾರೀ ಸಕ್ಸಸ್ ಸಿಕ್ತು, ಆದರೆ ಇತ್ತೀಚೆಗೆ ಆಕೆ ನನ್ನ ಮಾತು ಕೇಳುತ್ತಿಲ್ಲ ಎಂದು ವೇಣುಸ್ವಾಮಿ ಹೇಳುತ್ತಿರುತ್ತಾರೆ. ರಶ್ಮಿಕಾ ಬಳಿಕ ನಿಧಿ ಅಗರ್‌ವಾಲ್, ಇನಯ ಸುಲ್ತಾನ, ಡಿಂಪಲ್ ಹಯಾತಿ ಹೀಗೆ ಕೆಲ ಹಿರಿತೆರೆ, ಕಿರುತೆರೆ ನಟಿಯರು ವೇಣುಸ್ವಾಮಿ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೊಬ್ಬ ನಟಿ ಅಶು ರೆಡ್ಡಿ ಪೂಜೆ ಮಾಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ವೇಣುಸ್ವಾಮಿ ಸೂಚನೆಯಂತೆ ಬಗ್ಲಮುಖಿದೇವಿ ಹಾಗೂ ರಾಜಶ್ಯಾಮಲಾ ದೇವಿ ಪೂಜೆ ಮಾಡಿರುವುದಾಗಿ ನಟಿ ಅಶುರೆಡ್ಡಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡು ಕಾಮೆಂಟ್ಸ್ ಬಾಕ್ಸ್ ಆಫ್ ಮಾಡಿದ್ದಾರೆ.

ವೇಣು ಸ್ವಾಮಿ ಬಳಿ ವಿವಿಧ ಬಗೆಯ ವಿಶೇಷ ಪೂಜೆಗಳ ಮೆನ್ಯು ಇದೆ. ಅದಕ್ಕೆ ವಿಧವಿಧವಾದ ದರಗಳಿವೆ. ಮದ್ಯ, ಮಾಂಸ ನೈವೇದ್ಯ ಇಟ್ಟು ಪೂಜೆಗಳನ್ನು ಮಾಡಲಾಗುತ್ತದೆ. ಅಶು ರೆಡ್ಡಿ ತೆಲುಗು ಬಿಗ್‌ಬಾಸ್-3 ಶೋನಲ್ಲಿ ಭಾಗಿ ಆಗಿದ್ದರು. ಅದು ಬಿಟ್ಟರೆ ದೊಡ್ಡ ಅವಕಾಶಗಳು ಆಕೆಗೆ ಸಿಗಲಿಲ್ಲ. ಇತ್ತೀಚೆಗೆ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಕೂಡ ಈಕೆಯ ಹೆಸರು ಕೇಳಿಬಂದಿತ್ತು.
ಇನ್ನು ವೇಣುಸ್ವಾಮಿ ಪ್ರಭಾಸ್ ಸಿನಿಕರಿಯರ್, ಆರೋಗ್ಯದ ಬಗ್ಗೆ ಕೂಡ ವಿವಾದಾತ್ಮಕ ಹೇಳಿಕೆ ನೀಡುತ್ತಿರುತ್ತಾರೆ. ಪ್ರಭಾಸ್ ಸಿನಿಮಾ ಸಕ್ಸಸ್ ಮುಗಿತು. ಇನ್ನು ಮುಂದೆ ಸಿನಿಮಾಗಳು ಗೆಲ್ಲಲ್ಲ. ಜಾತಕದ ಕಾರಣಕ್ಕೆ ಇನ್ನು ಮದುವೆ ಆಗಿಲ್ಲ. ಮದುವೆ ಆಗುವುದು ಅನುಮಾನ. ಇನ್ನು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದರು. ಈ ಬಗ್ಗೆ ಡಾರ್ಲಿಂಗ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಪವನ್ ಕಲ್ಯಾಣ್ ರಾಜಕೀಯ ಜೀವನ, ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿ ವೇಣುಸ್ವಾಮಿ ಸುದ್ದಿ ಆಗಿದ್ದರು. ಪವನ್ ಕಲ್ಯಾಣ್‌ಗೆ ರಾಜಕೀಯ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದರೆ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. 3ನೇ ಪತ್ನಿಗೂ ಕೂಡ ಪವನ್ ಶೀಘ್ರದಲ್ಲೇ ಡಿವೋರ್ಸ್ ಕೊಡುತ್ತಾರೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದನ್ನು ಅಭಿಮಾನಿಗಳು ಗರಂ ಆಗಿದ್ದರು.


Click it and Unblock the Notifications











