Alia Bhatt: ಮದುವೆ ಬಳಿಕ ತೆಲುಗು ಸಿನಿಮಾ ತಿರಸ್ಕರಿಸಿದ ಆಲಿಯಾ ಭಟ್!
ನಟಿ ಆಲಿಯಾ ಭಟ್ ಸದ್ಯ ಮದುವೆ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ಏಪ್ರಿಲ್ 14ಕ್ಕೆ ಆಲಿಯಾ ಮತ್ತು ರಣ್ಬೀರ್ ಮದುವೆ ನೆರವೇರಿದೆ. ಆದರೆ ಮದುವೆ ಬೆನ್ನಲ್ಲೇ ನಟಿ ಆಲಿಯಾ ಭಟ್ ಸೌತ್ ಚಿತ್ರರಂಗದಲ್ಲಿ ಸುದ್ದಿ ಆಗುತ್ತಿದ್ದಾರೆ. ಮುಂದಿನ ಚಿತ್ರದ ವಿಚಾರವಾಗಿ ಆಲಿಯಾ ಸುದ್ದಿ ಆಗಿದ್ದಾರೆ.
Recommended Video

ಬಾಲಿವುಡ್ ಬೇಬಿ ಆಲಿಯಾ ಭಟ್ RRR ಚಿತ್ರದ ಮೂಲಕ ಸೌತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಸೌತ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. RRR ಚಿತ್ರದ ಬಳಿಕ ಆಲಿಯಾ ಭಟ್ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಸುದ್ದಿ ಹಬ್ಬಿತ್ತು.
ಆಲಿಯಾ ಎರಡು, ಮೂರು ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅದೆಲ್ಲದಕ್ಕೂ ಈಗ ಬ್ರೇಕ್ ಬಿದ್ದಿದೆ. ಮದುವೆ ಆದ ಬಳಿಕ ನಟಿ ಆಲಿಯಾ ಭಟ್ ವರಸೆ ಬದಲಾಗಿದೆ. ತೆಲುಗು ಚಿತ್ರದಲ್ಲಿ ನಟಿ ಆಲಿಯಾ ಅಭಿನಯಿಸುತ್ತಿಲ್ಲವಂತೆ. ತೆಲುಗು ಚಿತ್ರಗಳನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಜೂ.ಎನ್‌ಟಿಆರ್ ಚಿತ್ರ ಕೈ ಬಿಟ್ಟ ಆಲಿಯಾ ಭಟ್!
ನಟಿ ಆಲಿಯಾ ಭಟ್, ನಟ ಜೂನಿಯರ್ ಎನ್‌ಟಿಆರ್ ಜೊತೆಗೆ ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. RRR ಚಿತ್ರದ ಬಳಿಕ ಜೂನಿಯರ್ ಎನ್‌ಟಿಆರ್ ನಿರ್ದೇಶಕ ಕೊರಟಾಲ ಶಿವ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಟಿ ಅಲಿಯಾ ಭಟ್ ಹೀರೊಯಿನ್ ಎನ್ನಲಾಗಿತ್ತು. ಚಿತ್ರತಂಡ ಅದಾಗಲೇ ಆಲಿಯಾ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ಮುಗಿಸಿದೆಯಂತೆ.

ರಾಮ್‌ಚರಣ್ ಜೊತೆಗೂ ನಟಿಸೋದಿಲ್ಲವಾ ಆಲಿಯಾ?
ಆಲಿಯಾ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುವುದು ಮಾತ್ರವೇ ಬಾಕಿ ಇತ್ತು. ಹಾಗಾಗಿ ಈ ಚಿತ್ರದ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಹಬ್ಬಿತ್ತು. ಜೂನಿಯರ್ ಎನ್‌ಟಿಆರ್ ಮುಂದಿನ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿ ಆಗಬೇಕಿತ್ತು. ಈಗ ಆಲಿಯಾ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಆಲಿಯಾ ಭಟ್ ರಾಮ್ ಚರಣ್ ಜೊತೆಗೂ ಅಭಿನಯಿಸುತ್ತಾರೆ ಅಂತಲೂ ಹೇಳಲಾಗಿತ್ತು.

ರಾಜಮೌಳಿ ಚಿತ್ರದಲ್ಲಿ ಇರುತ್ತಾಳಾ ಆಲಿಯಾ?
ಮದುವೆ ಆದ ಬಳಿಕ ನಟಿ ಆಲಿಯಾ ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಬ್ಯೂಸಿ ಆಗಲಿದ್ದಾರಂತೆ. ಹಾಗಾಗಿ ಸದ್ಯ ಸೌತ್ ಚಿತ್ರಗಳಲ್ಲಿ ಆಲಿಯಾ ಅಭಿನಯಿಸುವುದು ಅನುಮಾನ. ನಿರ್ದೇಶಕ ರಾಜಮೌಳಿ ಚಿತ್ರದಲ್ಲೂ ಅಲಿಯಾ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಅದು ಕೂಡ ಈಗ ಅಸಾಧ್ಯವೇ ಎನ್ನಲಾಗುತ್ತಿದೆ.

ಸಿಂಪಲ್ಲಾಗ್ ನಡೀತು ಆಲಿಯಾ ಮದುವೆ
ರಣ್ಬೀರ್ ಮತ್ತು ಆಲಿಯಾ ಈಗ ಅಧಿಕೃತವಾಗಿ ಸತಿ, ಪತಿಯಾಗಿದ್ದಾರೆ. ಕುಟುಂಬದ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ರಣ್ಬೀರ್ ಕಪೂರ್ ನಿವಾಸದಲ್ಲಿ ಈ ತಾರಾ ಜೋಡಿ ಮದುವೆ ನೆರವೇರಿದೆ. ಮದುವೆ ಕಾರ್ಯಕ್ರಮದಲ್ಲಿ ದಂಪತಿಗಳ ಆಪ್ತರು ಮತ್ತು ಕುಟುಂಬದವರು ಭಾಗವಹಿಸಿದ್ದರು.


Click it and Unblock the Notifications










