'ಅಖಂಡ'ನನ್ನು ನೋಡಲು ಬಂದ ಅಘೋರಿಗಳು!

ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ'ಚಿತ್ರ ದಿನೇ ದಿನೇ ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಕೊರೊನಾದ ಮೂರನೇ ಅಲೆಯ ಭೀತಿಯ ಮಧ್ಯೆ ಕೂಡ ಭಾರಿ ಸಂಖ್ಯೆಯಲ್ಲಿ ಜನ ಮುಗಿದು ಬಿದ್ದು ಅಖಂಡ ನನ್ನ ನೋಡುತ್ತಿದ್ದಾರೆ. ಕೇವಲ ಮೂರೇ ದಿನದಲ್ಲಿ 50 ಕೋಟಿ ಹಣ ಗಳಿಸಿರುವ 'ಅಖಂಡ' ಮತ್ತಷ್ಟು ದಾಖಲೆಗಳನ್ನು ಬರೆಯಲು ಸಜ್ಜಾಗುತ್ತಿದ್ದಾನೆ. 'ಅಘೋರ'ನ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಅಭಿನಯಕ್ಕೆ ವಿಮರ್ಶಕರು ಮತ್ತು ಜನಸಾಮಾನ್ಯರಿಂದ ವ್ಯಾಪಕವಾದ ಪ್ರಶಂಸೆ ಕೂಡ ಸಿಗುತ್ತಿದೆ. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ತುಂಬಾನೇ ವ್ಯಾಪಿಸುತ್ತಿದೆ. ಹೀಗಾಗಿಯೇ ಅನೇಕ ವರ್ಷಗಳಿಂದ ಸಿನಿಮಾ ಥಿಯೇಟರ್ ಕಡೆಗೆ ಮುಖ ಮಾಡದವರು ಕೂಡ ಈಗ ಥಿಯೇಟರ್ ಗಳ ಕಡೆಗೆ ಮುಖ ಮಾಡಿದ್ದಾರೆ. ಉತ್ತರ ಭಾರತದಲ್ಲೂ ಕೂಡ ಈಗ ' ಅಖಂಡ'ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಉಂಟಾಗಿದೆ ಅಲ್ಲದೆ ವಿದೇಶಗಳಲ್ಲೂ ಕೂಡ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಒಟ್ಟಾರೆ ಈಗ ಎಲ್ಲಡೆ 'ಅಖಂಡ' ಮೇನಿಯಾ ಅಂತ ಹೇಳಬಹುದಾಗಿದೆ.

'ಅಖಂಡ’...ವಿದೇಶಗಳಲ್ಲಿ ಆದಾಯದ ಸುನಾಮಿ..!

'ಅಖಂಡ’...ವಿದೇಶಗಳಲ್ಲಿ ಆದಾಯದ ಸುನಾಮಿ..!

ಕೋವಿಡ್ ಎರಡನೇ ಅಲೆಯ ನಂತರ ಅತಿ ಹೆಚ್ಚು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತಂದ ಚಿತ್ರ 'ಅಖಂಡ'. ತೆಲುಗು ರಾಜ್ಯಗಳಲ್ಲದೇ ವಿದೇಶಗಳಲ್ಲೂ ಇದೇ ವಾತಾವರಣ ಮುಂದುವರಿದಿದೆ. ಬಾಲಕೃಷ್ಣ ನಾಯಕನಾಗಿ ನಟಿಸಿರುವ ಚಿತ್ರ ಬೋಯಪಾಟಿ ಶ್ರೀನು. ಪ್ರಜ್ಞಾ ಜೈಸ್ವಾಲ್ ನಾಯಕಿ. ಶ್ರೀಕಾಂತ್, ಜಗಪತಿಬಾಬು, ಪೂರ್ಣ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಥಮನ್ S.S. ಸಂಗೀತ ನೀಡಿದ್ದಾರೆ.

ದ್ವಾರಕಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮಿರ್ಯಾಲ ರವೀಂದರ್ ರೆಡ್ಡಿ ನಿರ್ಮಿಸಿರುವ ಈ ಚಿತ್ರ ಡಿಸೆಂಬರ್ 2 ರಂದು ಬಿಡುಗಡೆಯಾಗಿದ್ದು,ಮೊದಲ ದಿನ ಮೊದಲ ಆಟದಿಂದ ಚಿತ್ರಕ್ಕೆ ವಿಶೇಷ ಪ್ರತಿಕ್ರಿಯೆ ಸಿಕ್ಕಿದೆ. ಅತಿ ಹೆಚ್ಚು ಆದಾಯದ ದಾಖಲೆ ಸೃಷ್ಟಿಸುತ್ತಿದೆ. ಚಲನಚಿತ್ರ ವಿಶ್ಲೇಷಕರು ಹೇಳುವಂತೆ ಕೋವಿಡ್ ಎರಡನೇ ಅಲೆಯ ನಂತರ ವಿದೇಶದಲ್ಲಿ (ಬಿಡುಗಡೆಯಾದ ಮೊದಲ ದಿನ) ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿದೆ. ಭಾರತೀಯ ಕರೆನ್ಸಿ ಪ್ರಕಾರ, ಚಿತ್ರವು ಕೆನಡಾದಲ್ಲಿ ಸುಮಾರು ರೂ. 13 ಲಕ್ಷ, ಯುಕೆಯಲ್ಲಿ ಸುಮಾರು ರೂ. 32 ಲಕ್ಷ, ಆಸ್ಟ್ರೇಲಿಯಾದಲ್ಲಿ ಸುಮಾರು ರೂ. 52 ಲಕ್ಷ ಕಲೆಕ್ಷನ್ ಮಾಡಿದೆ.ಸಾಗರೋತ್ತರ ವಿತರಣಾ ಕಂಪನಿ ರಾಧಾಕೃಷ್ಣ ಎಂಟರ್‌ಟೈನ್‌ಮೆಂಟ್ಸ್ ಯುಎಸ್‌ನಲ್ಲಿ (ಮೂರು ದಿನಗಳು ಸೇರಿದಂತೆ) ಸುಮಾರು 5 ಕೋಟಿ ಸಂಗ್ರಹಿಸಿದೆ ಎಂದು ಹೇಳಿದೆ.

ನಾವು ಹೊಣೆಗಾರರಲ್ಲ ಎನ್ನುತ್ತಿದ್ದಾರೆ ಚಿತ್ರಮಂದಿರದ ಮಾಲೀಕರು

ನಾವು ಹೊಣೆಗಾರರಲ್ಲ ಎನ್ನುತ್ತಿದ್ದಾರೆ ಚಿತ್ರಮಂದಿರದ ಮಾಲೀಕರು

ಬಾಲಯ್ಯ ಹಾಗೂ ಬೋಯಪಾಟಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ 'ಅಖಂಡ' ಚಿತ್ರಮಂದಿರಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಆಗಿ
ಮೂಡಿ ಬಂದಿದೆ. ಅಖಂಡ ನಾಗಿ ಬಾಲಯ್ಯ ಎಲಿವೇಶನ್ಸ್ ನೆಕ್ಸ್ಟ್ ಲೆವೆಲ್ ಅಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬಾಲಯ್ಯ ಆ್ಯಕ್ಷನ್ ಮತ್ತು ಬೋಯಪಾಟಿ ಡೈರೆಕ್ಷನ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಸಿನಿಮಾ ನೋಡಿದವರೆಲ್ಲ ಥಮನ್ S.S. ಬ್ಯಾಕ್‌ಗ್ರೌಂಡ್ ಸ್ಕೋರ್ ಬಗ್ಗೆ ವಿಶೇಷವಾಗಿ ಮಾತನಾಡುತ್ತಿದ್ದಾರೆ. ಸಿನಿಮಾವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಮುಂದೆ ತೆಗೆದುಕೊಂಡು ಹೋಗಿರುವ ಬ್ಯಾಗ್ರೌಂಡ್ ಸ್ಕೋರ್ ಸಿನಿಮಾ ನೋಡುವಾಗ ಬೆಚ್ಚಿಬೀಳಿಸುತ್ತದೆ ಹೀಗಾಗಿ ಅನೇಕ ಚಿತ್ರಮಂದಿರಗಳಲ್ಲಿ ಇದಕ್ಕೆ ನಾವು ಹೊಣೆಗಾರರಲ್ಲ ಅಂತ ಕೂಡ ಬೋರ್ಡ್ ಹಾಕಿದ್ದಾರೆ. ಅಂದರೆ ಇನ್ನೂ ಬ್ಯಾಗ್ರೌಂಡ್ ಸ್ಕೋರ್ ಯಾವ ಮಟ್ಟದಲ್ಲಿರಬಹುದು ಅಂತ ನೋಡಿ.

ಅಮೇರಿಕಾದ ಥಿಯೇಟರ್‌ನಲ್ಲಿ ವಿಶೇಷ ಮನವಿ

ಅಮೇರಿಕಾದ ಥಿಯೇಟರ್‌ನಲ್ಲಿ ವಿಶೇಷ ಮನವಿ

ಅಮೆರಿಕದ ಸಿನಿಮಾರ್ಕ್ ಥಿಯೇಟರ್ ಪೋಸ್ಟ್ ಮಾಡಿರುವ ನೋಟೀಸ್ ಈಗ ಟ್ರೆಂಡ್ ಆಗುತ್ತಿದೆ. ಅವರು ತಮ್ಮ ಚಿತ್ರಮಂದಿರಗಳಲ್ಲಿ ಡೆಸಿಬಲ್ ಮಿತಿಗಿಂತ ಕಡಿಮೆ ಧ್ವನಿಯನ್ನು ಪ್ಲೇ ಮಾಡುತ್ತಾರೆ ಎಂದು ಅದು ಹೇಳಿದೆ. ಧ್ವನಿಯನ್ನು ಹೆಚ್ಚಿಸಲು ನೀವು ನಮ್ಮನ್ನು ಕೇಳುತ್ತೀರಿ. ನಿಮ್ಮ ಸಂತೋಷಕ್ಕಾಗಿ ನಾವು ಇದನ್ನು ಹೆಚ್ಚಿಸಿದರೆ, ಈ ಚಿತ್ರದ ಬ್ಯಾಕ್ ಗ್ರೌಂಡ್ ಸ್ಕೋರ್ ಸ್ಪೀಕರ್‌ಗಳು ಹಾನಿಗೊಳಗಾಗಬಹುದು. ಇದು ಎಲ್ಲಾ ಸಿನಿಮಾಗಳಿಗೂ ರೇಂಜ್ ಗಿಂತ ಹೆಚ್ಚಾಗಿದೆ. ಧ್ವನಿಯನ್ನು ಹೆಚ್ಚಿಸಲಾಗುವುದಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ..ಹಾಗಾಗಿ ಸೌಂಡ್ ಸ್ವಲ್ಪ ಕಡಿಮೆ ಮಾಡಿ ಸಿನಿಮಾ ತೋರಿಸಿ ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.

ಬಾಲಯ್ಯನ ಶಿವತಾಂಡವ...

ಬಾಲಯ್ಯನ ಶಿವತಾಂಡವ...

'ಅಖಂಡ'ಚಿತ್ರದ ಮೂಲಕ ಥಿಯೇಟರ್ ಗಳನ್ನು ನಡುಗಿಸಿದ್ದಾರೆ ಬಾಲಯ್ಯ ನಾಲ್ಕು ವರ್ಷಗಳಿಂದ ಮೌನವಾಗಿದ್ದ ಥಿಯೇಟರ್‌ಗಳು ಬಾಲಯ್ಯ ಶಿವ ತಾಂಡವ ನೃತ್ಯದಿಂದ ಮತ್ತೆ ರಾಜಕಳೆ ಪಡೆಯುತ್ತಿವೆ. ಅದರಲ್ಲಿ ವಿಶೇಷವಾಗಿ ಹಿಂದೂ ದೇವಾಲಯಗಳ ಸಂರಕ್ಷಣೆ ಹಾಗೂ ಹಿಂದೂ ಧರ್ಮದ ಬಗ್ಗೆ ಬಗ್ಗೆ ಹೇಳುವ ಮಾತುಗಳಿಂದ ಥಿಯೇಟರ್ ಗಳಲ್ಲಿ ಶಿಳ್ಳೆ ಮುಳುಗುತ್ತದೆ. ಬಾಲಯ್ಯ ಡೈಲಾಗ್‌ಗಳು ಅಭಿಮಾನಿಗಳಿಗೆ ಭಾರೀ ಮನೋರಂಜನೆಯನ್ನು ಕೊಡುತ್ತಿದೆ. ವರ್ಷಗಟ್ಟಲೇ ಮೌನವಾಗಿದ್ದ ಥಿಯೇಟರ್‌ಗಳು ಹೌಸ್ ಫುಲ್ ಬೋರ್ಡ್ ನೋಡುತ್ತಿವೆ. ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್‌ಗಳ ಸುನಾಮಿ ಸೃಷ್ಟಿಸುತ್ತಿದೆ. ಬೇರೆ ದೇಶಗಳಲ್ಲೂ ಅಖಂಡ ಜಾತ್ರೆ ನಡೆಯುತ್ತಿದೆ. ನಂದಮೂರಿ ಅಭಿಮಾನಿಗಳ ಹೊರತಾಗಿ ಎಲ್ಲಾ ವರ್ಗದ ಪ್ರೇಕ್ಷಕರು ಕೂಡ ಥಿಯೇಟರ್‌ಗಳಿಗೂ ಕಾಲಿಡುತ್ತಿದೆ. ಈ ಚಿತ್ರದಲ್ಲಿ ಬಾಲಕೃಷ್ಣ ಎರಡು ವಿಭಿನ್ನ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಾಲಕೃಷ್ಣ ಅವರ ಅಘೋರ ಪಾತ್ರ ಮಾಸ್ ಪ್ರೇಕ್ಷಕರಿಗೆ ವಿಷುವಲ್ ಟ್ರೀಟ್. ಆದರೆ, ಯಾವ ಚಿತ್ರವೂ ಮಾಡದ ಕೆಲಸವನ್ನು ಬಾಲಯ್ಯ ಸಿನಿಮಾ ಮಾಡಿದೆ. ಅದೇ ಅಘೋರಗಳು 'ಅಖಂಡ' ಚಿತ್ರದಿಂದ ಪ್ರಭಾವಿತರಾಗಿ ಚಿತ್ರಮಂದಿರಗಳ ಕಡೆಗೆ ತೆರಳಿ ಬರುತ್ತಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಥಿಯೇಟರ್‌ಗೆ ಬರುತ್ತಿರುವ ಅಘೋರರು

ಥಿಯೇಟರ್‌ಗೆ ಬರುತ್ತಿರುವ ಅಘೋರರು

ವಿಶಾಖಪಟ್ಟಣ ಜಿಲ್ಲೆ ನರಸೀಪಟ್ಟಣದ ಬಂಗಾರರಾಜು ಥಿಯೇಟರ್‌ಗೆ ಬಂದ ಅಘೋರರನ್ನು ನೋಡಲು ಬಾಲಯ್ಯ ಅಭಿಮಾನಿಗಳು ಮುಗಿಬಿದ್ದರು. 'ಅಖಂಡ' ಸಿನಿಮಾ ನೋಡಿ ಅಘೋರರು ಖುಷಿಪಟ್ಟಿದ್ದಾರೆ. 'ಈ ಸಿನಿಮಾಗಾಗಿಯೇ ಥಿಯೇಟರ್ ಗೆ ಬಂದಿದ್ದೇವೆ ಅಂತ ತಿಳಿಸಿದ ಅಘೋರರು ನಂತರ ಬಾಲಯ್ಯ ಅಭಿಮಾನಿಗಳೊಂದಿಗೆ ಶಿವನಾಮಸ್ಮರಣೆ ಮಾಡಿದರು. ನಂತರ ಅವರೆಲ್ಲ ಅಲ್ಲಿಂದ ಹೊರಟುಹೋದರು. 'ಅಖಂಡ' ಸಿನಿಮಾ ನೋಡಲು ಬರುತ್ತಿರುವ ಅಘೋರರನ್ನು ನೋಡಿ ಬಾಲಯ್ಯ ಹಾರ್ಡ್‌ಕೋರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಸದಾ ಶಿವನ ನಾಮಸ್ಮರಣೆ ಮಾಡುವ ಅಘೋರರು ಅಖಂಡ ಸಿನಿಮಾ ನೋಡಿ ಬಾಲಯ್ಯ ಅವರಿಗೆ ಆಶೀರ್ವಾದ ಮಾಡುವುದಾಗಿ ಅಘೋರರು ಹೇಳಿದ್ದಾರೆ. ಅಘೋರರು ಆಶೀರ್ವಾದ ಮಾಡಿರುವುದರಿಂದ ಇನ್ನು ಯಶಸ್ಸು ಕಟ್ಟಿಟ್ಟ ಬುತ್ತಿ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಅಂತ ಅಭಿಮಾನಿಗಳು ಸಂಭ್ರಮಿಸಿ 'ಜೈ ಬಾಲಯ್ಯ..' ಘೋಷಣೆಗಳನ್ನು ಕೂಗಿದರು.

More from Filmibeat

English summary
Aghoras came to watch Balakrishna's Akhanda movie.Balayya's ardent fans are pleased to see the Aghoras attending the Akhanda film and blessings the actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X