ನಾಗಚೈತನ್ಯ ಮದ್ವೆ ಬೆನ್ನಲ್ಲೇ ಗರ್ಭಿಣಿಯಾದ ಸಮಂತಾ ? ಬೇಬಿ ಬಂಪ್ ಕಂಡು ಫ್ಯಾನ್ಸ್ ಶಾಕ್..!

ಆಧುನಿಕ ದಿನಗಳಲ್ಲಿ ತಂತ್ರಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಈಗೀಗ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಳ್ಳುವರ ಸಂಖ್ಯೆಯೇ ಹೆಚ್ಚಾಗಿದೆ. ವಿಜ್ಞಾನದಲ್ಲಿ ನೆರಳು ಬೆಳಕಿನ ಆಟ ಎಂಬ ಮಾತಿನಂತೆ ಈಗ ತಂತ್ರಜ್ಞಾನದಲ್ಲಿ ನಕಲಿ ಮತ್ತು ಅಸಲಿ ಆಟ ಶುರುವಾಗಿದೆ.

ಅಸಲಿಯನ್ನು ನಕಲಿಯಾಗಿಸುವ, ನಕಲಿಯನ್ನು ಅಸಲಿಯಾಗಿಸುವಷ್ಟರ ಮಟ್ಟಿಗೆ ಇಂದು ಟೆಕ್ನಾಲಜಿ ಬೆಳೆದು ನಿಂತಿದೆ. ಒಂದೇ ನಾಣ್ಯದ ಎರಡು ಮುಖದಂತೆ ಎಐ ತಂತ್ರಜ್ಞಾನದ ಕಥೆ ಆಗಿದೆ. ಪಾಸಿಟಿವ್‌ಗಿಂತ ನೆಗೆಟಿವ್ ವಿಚಾರಕ್ಕೆ ಈ ಎಐ ತಂತ್ರಜ್ಞಾನ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಇದಕ್ಕೆ ವೈರಲ್ ಆದ ಸಮಂತಾ ಅವರ ಈ ಭಾವ ಚಿತ್ರಗಳು ಸಾಕ್ಷಿ.

ai-created-pregnancy-images-of-samantha-ruth-prabhu-take-the-internet-by-storm

ಹೌದು, ಎಐ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕೆಲ ಕಿಡಿಗೇಡಿಗಳು ಸಮಂತಾ ಗರ್ಭಿಣಿಯಾದವರಂತೆ ಫೋಟೊಗಳನ್ನು ಎಡಿಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಅರ್ಧ ಡಜನ್ ಫೋಟೊಗಳನ್ನು ತೇಲಿ ಬಿಟ್ಟಿದ್ದಾರೆ. ಸಮಂತಾ ಅವರ ಈ ಬೇಬಿ ಬಂಪ್ ಫೋಟೊಗಳನ್ನು ನೋಡಿದ ಅನೇಕರು ಸತ್ಯವನ್ನರಿಯದೇ ಸಮಂತಾ ಅದ್ಯಾವಾಗ ಗರ್ಭಿಣಿಯಾದರು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಸದ್ಯ ಸಮಂತಾ ಅವರನ್ನು ಗರ್ಭಿಣಿಯಂತೆ ಬಿಂಬಿಸಿರುವ ಈ ಫೋಟೊಗಳು ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಹೀಗೆ ಸೋಶಿಯಲ್ ಮೀಡಿಯಾದ ಅಂಗಳದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಕೆಲವರು ನಾಗಚೈತನ್ಯ ಮತ್ತು ಶೋಭಿತಾ ಅವರ ಹೊಟ್ಟೆ ಉರಿಸಲು ಯಾರೋ ಈ ತರಹದ ಫೋಟೊವನ್ನು ಹರಿಬಿಟ್ಟಿದ್ದಾರೆ ಎಂದರೆ, ಇನ್ನೂ ಕೆಲವರು ನಾಗಚೈತನ್ಯ ಮದ್ವೆಯಾಗಿದ್ದು ಆಯ್ತು ಅವರನ್ನು ಮರೆತು ನೀವು ಮದ್ವೆಯಾಗಿ ಎನ್ನುವ ಸಲಹೆಯನ್ನು ಸಮಂತಾ ಅವರಿಗೆ ನೀಡುತ್ತಿದ್ಧಾರೆ. ತಾಯ್ತನದ ಸುಖ ಅನುಭವಿಸುವ ಹಂಬಲ ನನ್ನಲ್ಲೂ ಇದೆ ಎಂದು ಈ ಹಿಂದೆ ನೀವೊಮ್ಮೆ ಹೇಳಿದ ನೆನಪು ಈ ಕಾರಣಕ್ಕೆ ನೀವು ಬೇಗ ಮದ್ವೆಯಾಗಿ ಸಿಹಿ ಸುದ್ದಿಯನ್ನು ಕೊಡಿ ಎನ್ನುತ್ತಿದ್ದಾರೆ. ಇದರ ನಡುವೆ ಎಐ ತಂತ್ರಜ್ಞಾನದ ಸದುಪಯೋಗ ಮತ್ತು ದುರುಪಯೋಗದ ಕುರಿತು ಕೂಡ ಕೆಲವರು ಚರ್ಚೆಯನ್ನು ಮಾಡುತ್ತಿದ್ಧಾರೆ.

ai-created-pregnancy-images-of-samantha-ruth-prabhu-take-the-internet-by-storm

ಅಂದ್ಹಾಗೇ ಕೆಲ ದಿನಗಳ ಹಿಂದೆ ಸಮಂತಾ ಸಿಟಾಡೆಲ್ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆಗ ವೇದಿಕೆ ಮೇಲೆ ಮಾತನಾಡುತ್ತಿದ್ದ ವರುಣ್ ಧವನ್ ತಮ್ಮ ಮನೆ-ಮಗಳು ಮತ್ತು ಪತ್ನಿಯ ಬಗ್ಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು.ನನ್ನ ಮಗಳು ಲಾರಾ ಈ ಪ್ರಪಂಚಕ್ಕೆ ಬರುವ ಮುನ್ನ ನಾನು ಈ ಚಿತ್ರದ ಚಿತ್ರೀಕರಣ ಶುರು ಮಾಡಿದ್ದೇ, ಆ ಸಮಯದಲ್ಲಿ ನಾನು ನನ್ನ ಪತ್ನಿ ನತಾಶಾ ಬಹುದೊಡ್ಡ ಪರೀಕ್ಷೆಯನ್ನು ಎದುರಿಸಿದೆವು ಅಂದಿದ್ದರು. ಇನ್ನೂ ಈ ಚಿತ್ರದಲ್ಲಿ ಕೂಡ ಇದೇ ತರಹದ ಪಾತ್ರವನ್ನು ರಚಿಸಲಾಗಿದೆ. ಹೀಗಾಗಿ ಬನ್ನಿ ನನ್ನ ಹೃದಯಕ್ಕೆ ಅತೀ ಹತ್ತಿರವಾದ ಪಾತ್ರವೆಂದು ವರುಣ್ ಧವನ್ ಹೇಳಿದ್ದರು. ಬನ್ನಿ ಪಾತ್ರವನ್ನು ನಾನು ಭಾವನಾತ್ಮಕವಾಗಿ ಅರ್ಥ ಮಾಡಿಕೊಂಡು ಅಭಿನಯಿಸಿದ್ದೇನೆ ಎಂದು ಹೇಳಿದ್ದರು. ಈ ಸಮಯದಲ್ಲಿ ಸಮಂತಾ ಅವರ ಬಾಡಿ ಹೋದ ಮುಖ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಮಂತಾ ಮುಖದಲ್ಲಿನ ನೋವು ಕಂಡು ಅಭಿಮಾನಿಗಳ ಮನ ಮರುಗಿತ್ತು.

ಇನ್ನೂ ಇದಕ್ಕೂ ಮುನ್ನ ನೀಡಲಾಗಿದ್ದ ಸಂದರ್ಶನವೊಂದರಲ್ಲಿ ಸಮಂತಾ ತಾಯಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಮೊನ್ನೆಯ ದಿನ ಕೂಡ 2025ರಲ್ಲಿ ನಿಮಗೆ ಪ್ರಾಮಾಣಿಕ ಸಂಗಾತಿ ಸಿಗಲಿದ್ದಾರೆ ಮಕ್ಕಳನ್ನು ಕೂಡ ನೀವು ಪಡೆಯಲಿದ್ದೀರಿ ಎಂದು ತಮ್ಮ ರಾಶಿಗೆ ಸಂಬಂಧಿಸಿದಂತೆ ಬರೆಯಲಾಗಿದ್ದ ಭವಿಷ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಢಿದ್ದರು. ಸದ್ಯ ಸಮಂತಾ ಅವರ ಬೇಬಿ ಬಂಪ್ ಫೋಟೊಗಳು ವೈರಲ್ ಆಗಿದ್ದು, ವೈರಲ್ ಆದ ಫೋಟೊಗಳಿಗೆ ಸಮಂತಾ ಪ್ರತಿಕ್ರಿಯೆ ನೀಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: samantha viral photo pregnant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X