For Quick Alerts
  ALLOW NOTIFICATIONS  
  For Daily Alerts

  ಪುಷ್ಪ: ಅಲ್ಲು ಅರ್ಜುನ್-ರಶ್ಮಿಕಾ ಸಿನಿಮಾಕ್ಕೆ ಮತ್ತೊಬ್ಬ ನಟಿಯ ಎಂಟ್ರಿ

  |

  ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಪುಷ್ಪ' ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ರಕ್ತ ಚಂದನ ಮರಗಳ ಸಾಗಣೆ ಮಾಡುವ ದಂಧೆಯ ಕತೆ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಕೊರೊನಾ ಕಾರಣಕ್ಕೆ ನಿಂತಿದೆ.

  'ಪುಷ್ಪ' ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ ಎಂಬುದು ಬಹಳ ಹಳೆಯ ಸುದ್ದಿ ಹೊಸ ಸುದ್ದಿಯೆಂದರೆ ಇದೇ ಸಿನಿಮಾದಲ್ಲಿ ಮತ್ತೊಬ್ಬ ಪ್ರತಿಭಾವಂತ ನಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  ಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿವ್: ರಶ್ಮಿಕಾಗೆ ಹೆಚ್ಚಿದ ಆತಂಕಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿವ್: ರಶ್ಮಿಕಾಗೆ ಹೆಚ್ಚಿದ ಆತಂಕ

  ಧನುಷ್ ನಟನೆಯ 'ವಡಾ ಚೆನ್ನೈ', ವಿಜಯ್ ದೇವರಕೊಂಡ ಜೊತೆಗೆ 'ವರ್ಲ್ಡ್ ಫೇಮಸ್ ಲೌವರ್', ಮಹಿಳಾ ಪ್ರಧಾನ ಸಿನಿಮಾ 'ಕೌಸಲ್ಯಾ ಕೃಷ್ಣಮೂರ್ತಿ', 'ಕಾಕಮೊಟ್ಟೈ' ಹೀಗೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯ ರಾಜೇಶ್ ಅವರು 'ಪುಷ್ಪ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  ಮೆರುಗು ತರಲಿದ್ದಾರೆ ಐಶ್ವರ್ಯಾ ರಾಜೇಶ್

  ಮೆರುಗು ತರಲಿದ್ದಾರೆ ಐಶ್ವರ್ಯಾ ರಾಜೇಶ್

  ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ಹಲವಾರು ಸವಾಲಿನ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ. ಇವರನ್ನು 'ಪುಷ್ಪ' ಸಿನಿಮಾದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಕರೆತರಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣ ಹೊಂದಿರುವ ಪುಷ್ಪ ಸಿನಿಮಾಕ್ಕೆ ಐಶ್ವರ್ಯಾ ರಾಜೇಶ್ ಇನ್ನಷ್ಟು ಮೆರಗು ತರಲಿದ್ದಾರೆ.

  ಐಶ್ವರ್ಯಾ ರಾಜೇಶ್ ಸಿನಿಮಾಕ್ಕೆ ನಾಯಕಿ ಅಲ್ಲ

  ಐಶ್ವರ್ಯಾ ರಾಜೇಶ್ ಸಿನಿಮಾಕ್ಕೆ ನಾಯಕಿ ಅಲ್ಲ

  ಐಶ್ವರ್ಯಾ ಅವರು ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿಲ್ಲ ಬದಲಿಗೆ ಅಲ್ಲು ಅರ್ಜುನ್ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಐಶ್ವರ್ಯಾ ರಾಜೇಶ್‌ಗೆ ಕತೆ ಹೇಳಿದ್ದು ಅವರ ಒಪ್ಪಿಗೆಗಾಗಿ ತಂಡ ಕಾಯುತ್ತಿದೆ.

  40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ

  ಐಶ್ವರ್ಯಾ ರಾಜೇಶ್‌ಗೆ ಬಹಳ ಮಹತ್ವದ ಪಾತ್ರ

  ಐಶ್ವರ್ಯಾ ರಾಜೇಶ್‌ಗೆ ಬಹಳ ಮಹತ್ವದ ಪಾತ್ರ

  ಐಶ್ವರ್ಯಾ ರಾಜೇಶ್‌ಗೆ ನೀಡಲಾಗುತ್ತಿರುವ ಪಾತ್ರ ತೆರೆಯ ಮೇಲೆ ಇರುವ ಅವಧಿ ಕಡಿಮೆ ಆದರೆ ಸಿನಿಮಾಕ್ಕೆ ದೊಡ್ಡ ತಿರುವು ನೀಡುವ ಮತ್ತು ಕತೆಯಲ್ಲಿ ಅತ್ಯಂತ ಮಹತ್ವದ ಹಾಗೂ ಬಹಳ ಅಭಿನಯ ಪ್ರತಿಭೆಯನ್ನು ಬೇಡುವ ಕೆಲವು ಸನ್ನಿವೇಶಗಳು ಆ ಪಾತ್ರಕ್ಕೆ ಇದೆ ಹಾಗಾಗಿ ಪ್ರತಿಭಾವಂತ ನಟಿಯಾದ ಐಶ್ವರ್ಯಾ ಅವರನ್ನೇ ಚಿತ್ರತಂಡ ಸಂಪರ್ಕಿಸಿದೆ.

  ಚಿರು ಇಲ್ಲದ‌ ಸ್ಥಿತಿಗೆ ಭಾವುಕರಾಗಿ ಕಣ್ಣೀರು ತರಿಸುವ ಫೋಟೋ ಶೇರ್ ಮಾಡಿದ ಮೇಘನಾ ರಾಜ್ | Filmibeat Kannada
  ಆಗಸ್ಟ್ 13 ರಂದು ಸಿನಿಮಾ ತೆರೆಗೆ

  ಆಗಸ್ಟ್ 13 ರಂದು ಸಿನಿಮಾ ತೆರೆಗೆ

  'ಪುಷ್ಪ' ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವೀಸ್ ನಿರ್ಮಾಣದ ಹೊಣೆ ಹೊತ್ತಿದೆ. ಸುಕುಮಾರ್‌ಗೆ ಅಲ್ಲು ಅರ್ಜುನ್‌ಗೆ ಜೊತೆಗೆ ಮೂರನೇ ಸಿನಿಮಾ. ಈ ಹಿಂದೆ ಆರ್ಯ ಮತ್ತು ಆರ್ಯ2 ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಆಗಸ್ಟ್ 13ರಂದು ಬಿಡುಗಡೆ ಆಗಲಿದೆ.

  English summary
  Talented actress Aishwarya Rajesh may act in Allu Arjun, Rashmika Mandanna's Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X